ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಪಂಪ್‌ಹೌಸ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆ ಪೌರಾಯುಕ್ತರಾದ ಎ. ವಾಸೀಂ ಅವರು ತಿಳಿಸಿದ್ದಾರೆ.
ತೊಂದರೆಗೆ ಕಾರಣವೇನು?:
ಪಂಪ್‌ಹೌಸ್‌ನ ಟ್ರ್ಯಾನ್ಸ್‌ಫಾರ್ಮರ್ ಕೆಟ್ಟುಹೋಗಿರುವುದರಿಂದ ನೀರು ಪಂಪಿಂಗ್ ಮಾಡುವ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ತಾಂತ್ರಿಕ ಸಮಸ್ಯೆಯಿಂದಾಗಿ ನೀರು ಪೂರೈಕೆಯ ವೇಳಾಪಟ್ಟಿಯಲ್ಲಿ ಒಂದು ದಿನ ವಿಳಂಬ ಉಂಟಾಗಲಿದೆ.
ಬದಲಾದ ನೀರು ಸರಬರಾಜು ವೇಳಾಪಟ್ಟಿ:
ಇಂದು ನೀಡಬೇಕಿದ್ದ ಪ್ರದೇಶಗಳಿಗೆ: ನಾಳೆ ನೀರು ಸರಬರಾಜು ಮಾಡಲಾಗುವುದು.
ನಾಳೆ ನೀಡಬೇಕಿದ್ದ ಪ್ರದೇಶಗಳಿಗೆ: ನಾಡಿದ್ದು ನೀರು ಸರಬರಾಜು ಮಾಡಲಾಗುವುದು.
ನಾಡಿದ್ದು ನೀಡಬೇಕಿದ್ದ ಪ್ರದೇಶಗಳಿಗೆ: ಆಚೆ ನಾಡಿದ್ದು ನೀರು ಸರಬರಾಜು ಮಾಡಲಾಗುವುದು.
ಸಾರ್ವಜನಿಕರಲ್ಲಿ ಮನವಿ: ತಾಂತ್ರಿಕ ದೋಷದಿಂದಾಗಿ ನೀರಿನ ಪೂರೈಕೆಯಲ್ಲಿ ಒಂದು ದಿನದ ವ್ಯತ್ಯಾಸ ಉಂಟಾಗುತ್ತಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ, ನಗರಸಭೆಯೊಂದಿಗೆ ಸಹಕರಿಸಬೇಕಾಗಿ ಪೌರಾಯುಕ್ತರಾದ ಎ. ವಾಸೀಂ ಅವರು ಕೋರಿದ್ದಾರೆ.



