Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಮರೆತರೋ, ನಿರ್ಲಕ್ಷಿಸಿದರೋ ಮಾರಿಕೊಂಡರೋ, ವಿವೇಚನೆಯನ್ನು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮರೆತರೋ, ನಿರ್ಲಕ್ಷಿಸಿದರೋ ಮಾರಿಕೊಂಡರೋ, ವಿವೇಚನೆಯನ್ನು....
ಇಂದು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೂರನೇ ದಿನ. ಕನ್ನಡ ನಾಡು
, ನುಡಿ, ಜಲ, ಸಾಹಿತ್ಯ, ಸಂಸ್ಕೃತಿಯ ಅತ್ಯಂತ ಮಹತ್ವದ ನುಡಿ ಹಬ್ಬ. ಇದು ವಿಜೃಂಭಣೆಯಿಂದ ನಡೆಯುತ್ತಿರುವಾಗ ಬಹುತೇಕ ಕನ್ನಡದ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಇದನ್ನು ತೀರ ಕ್ಷುಲ್ಲಕ ಎನ್ನುವಂತೆ ನಿರ್ಲಕ್ಷಿಸಿದ್ದು ಮಾತ್ರ ಅತ್ಯಂತ ವಿಷಾದನೀಯ ಮತ್ತು ಖೇದಕರ.

 ಇಂದಿನ ದಿನಮಾನಗಳಲ್ಲಿ ಅತ್ಯಂತ ಜವಾಬ್ದಾರಿಯಿಂದ, ವಿವೇಚನೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕಾದ ಮಾಧ್ಯಮಗಳು ಇಷ್ಟೊಂದು ಮಹತ್ವದ ವಿಷಯವನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮ ಮಾತ್ರ ತುಂಬಾ ಭೀಕರವಾಗಿರುತ್ತದೆ. ಉದಾಹರಣೆಗೆ ತಾಯಿ ಭಾಷೆ, ಇಲ್ಲಿನ ನಿಜ ಸಂಸ್ಕೃತಿಯ ಬಗ್ಗೆ ಇಡೀ ಜನ ಸಮೂಹಕ್ಕೆ ಸರಿಯಾಗಿ ಪರಿಚಯ ಮಾಡಿಕೊಡದಿದ್ದರೆ ಮೊನ್ನೆ ವಿಧಾನ ಮಂಡಲದ ಅಧಿವೇಶನದ ಕೊನೆಯ ದಿನ ಇಬ್ಬರು ಅತ್ಯಂತ ಜವಾಬ್ದಾರಿಯತ ಹಾಲಿ ಮಂತ್ರಿ ಮತ್ತು ಮಾಜಿ ಮಂತ್ರಿ ಕೆಟ್ಟದಾಗಿ ಒಬ್ಬರಿಗೊಬ್ಬರು ಅತ್ಯಂತ ಅಸಹ್ಯಕರವಾಗಿ ಬೈದುಕೊಳ್ಳಲು ಅಥವಾ ಆ ರೀತಿ ಅನೇಕ ಜನರು ಈ ರೀತಿ ಮಾತನಾಡಲು ಬಹು ಮುಖ್ಯ ಕಾರಣವೇ ಈ ರೀತಿಯ ಮುಖ್ಯ ವಾಹಿನಿಗಳ ಸಾಂಸ್ಕೃತಿಕ ನಿರ್ಲಕ್ಷ್ಯವೇ ಕಾರಣ......

 ಮುಗಿಯುತ್ತಲಿದೆ  ಕನ್ನಡದ ನುಡಿ ಹಬ್ಬ, ಎಂದೆಂದೂ ಮುಗಿಯಬಾರದ ನಿತ್ಯ ಹಬ್ಬ. ತಮ್ಮ ಅನ್ನದ ಮೂಲವನ್ನೇ ನಿರ್ಲಕ್ಷಿಸಿದ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು...

 ಎಷ್ಟೋ ಬೇಡದ ವಿಷಯಗಳನ್ನು ನೇರ ಪ್ರಸಾರ ಮಾಡುತ್ತವೆ. ಮನೆಯ ಜಗಳಗಳನ್ನು ದಿನ ಪೂರ್ತಿ ತೋರಿಸುತ್ತವೆ. ಯಾರದೋ ಆತ್ಮಹತ್ಯೆ, ಕೊಲೆ ಇವರಿಗೆ ಮೂರು ದಿನದ ಸರಕು.

ಇನ್ಯಾವುದೋ ವಂಚನೆ, ದರೋಡೆ ಇವರಿಗೆ ವಾರದ ಆಹಾರ, ರಾಜಕೀಯ ಭಿನ್ನಮತ ಇವರಿಗೆ ತಿಂಗಳಾನುಗಟ್ಟಲೆ ಹಗಲು ರಾತ್ರಿಗಳ ಬ್ರೇಕಿಂಗ್ ನ್ಯೂಸ್, ಇಬ್ಬರು ಬಲಾಢ್ಯ ಮಂತ್ರಿಗಳ ಖಾಸಗಿ ಜಗಳ ಸಾಹಿತ್ಯ ಸಮ್ಮೇಳನಕ್ಕಿಂತ ಮಹತ್ವದ ವಿಷಯ......ಆದರೆ ಕನ್ನಡಮ್ಮನ‌ ಅತ್ಯಂತ ಪ್ರಮುಖ ಜಾತ್ರೆ ಕೇವಲ ಕೆಲವು ನಿಮಿಷಗಳ ಒಂದು ಸುದ್ದಿ ಮಾತ್ರ........

 ಛೇ, ಎಷ್ಟೊಂದು ವಿವೇಕಹೀನ ಸಂಸ್ಕೃತಿಯ ಜನ ಇವರು. ಸಾಹಿತ್ಯಾಸಕ್ತರು ಮತ್ತು ಪಕ್ಕಾ ಕನ್ನಡ ಅಭಿಮಾನಿಗಳನ್ನು ಹೊರತುಪಡಿಸಿ ಅನೇಕರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿದೆ ಎಂದು ತಿಳಿಯಲೇ ಇಲ್ಲ.‌  ಕೆಲವರಿಗೆ ತಿಳಿದರೂ‌ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಅದನ್ನು ಮನೆ ಮನೆಗೆ ತಲುಪಿಸುವ ಅವಕಾಶವಿದ್ದ ಮಾಧ್ಯಮಗಳು ಅನಾವಶ್ಯಕ ವಿಷಯಗಳ  ಸುತ್ತಲೇ ಸುತ್ತಿದವು......

 ಈಗಾಗಲೇ ಆಂಗ್ಲ ಮಾಧ್ಯಮದ ಮೋಹಕ್ಕೆ, ಬೆರಕೆ ಸಾಂಸ್ಕೃತಿಕ ವಾತಾವರಣದ ಪ್ರಭಾವಕ್ಕೆ ಒಳಗಾಗಿರುವ ಮಕ್ಕಳು ಮತ್ತು ಯುವ ಪೀಳಿಗೆಯನ್ನು ತನ್ನ ತಾಯಿ ಭಾಷೆಯ ಬಗ್ಗೆ ಸ್ವಲ್ಪವಾದರೂ ಹೆಮ್ಮೆ ಮತ್ತು ಜಾಗೃತಿ ಮೂಡಿಸುವ ಕೆಲಸ  ಈ ಸಮ್ಮೇಳನದ ಸಂದರ್ಭದಲ್ಲಿ ಮಾಧ್ಯಮಗಳು ನಿರ್ವಹಿಸಬೇಕಿತ್ತು.....

 ಸಮ್ಮೇಳನದ ಮೆರವಣಿಗೆ, ಅಧ್ಯಕ್ಷೀಯ ಭಾಷಣ, ವಿಚಾರ ಸಂಕಿರಣಗಳು, ಕವಿಗೋಷ್ಠಿಗಳು, ಪುಸ್ತಕ ಮೇಳ, ಜಾನಪದ ಕಲಾ ಪ್ರದರ್ಶನ, ಕರ್ನಾಟಕದ ವಿವಿಧ ಭಾಗಗಳ ಊಟದ ವೈವಿಧ್ಯತೆ, ಮಂಡಿಸಿದ ಬೇಡಿಕೆಗಳು ಎಲ್ಲವನ್ನೂ ನೇರ ಅಥವಾ ಮುದ್ರಿತ ಪ್ರಸಾರ ಮಾಡಬಹುದಿತ್ತು......

 ಅಲ್ಲದೆ ಈ ನೆಪದಲ್ಲಿ ತಾಯಿ ಭಾಷೆಯ ಉಗಮ, ಬೆಳವಣಿಗೆ, ಮಹತ್ವ, ಸಾಧನೆ, ಭವಿಷ್ಯ, ಎಚ್ಚರಿಕೆ, ಕರ್ನಾಟಕದ ಸಮಗ್ರ ಅಭಿವೃದ್ಧಿ ಎಲ್ಲವನ್ನೂ ವಿಷಯ ತಜ್ಞರಿಂದ ತಮ್ಮ ಕೇಂದ್ರಿಂದಲೇ ಚರ್ಚಿಸಬಹುದಿತ್ತು.......

 ವಿಶ್ವದ ವಿವಿಧ ಭಾಷೆಗಳು ಹೇಗೆ ಆಂಗ್ಲ ಭಾಷೆಯ ಹೊಡೆತಕ್ಕೆ ಸಿಲುಕಿ ನಾಶ ಹೊಂದುತ್ತಿವೆ, ಭಾರತದಲ್ಲಿ ಹಿಂದಿ ಹೇರಿಕೆ ಹೇಗೆ ಅಪಾಯಕಾರಿ, ಆ ಮುಖಾಂತರ ತಮ್ಮ ಬದುಕಿನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ,

ತಾಯಿ ಭಾಷೆಯ ಕಲಿಕೆ ಹೇಗೆ ನಮ್ಮ ಯೋಚನೆ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ, ಕನ್ನಡವನ್ನು ನಾವು ಹೇಗೆ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸ್ವಲ್ಪವಾದರೂ ಪ್ರಯತ್ನಿಸಬೇಕಿತ್ತು.....

 ಅದು ಯಾವುದೂ ಪ್ರಸಾರವಾಗಲೇ ಇಲ್ಲ. ನೆಪಕ್ಕೆ ಸಮ್ಮೇಳನದ ಕೆಲವು ತುಣುಕುಗಳು ಮಾತ್ರ ಕಾಣಿಸಿದವು. ಸಮಕಾಲೀನ ವಿಷಯಗಳಿಗೆ ಮಹತ್ವ ನೀಡದೆ, ಆಳದ ಚಿಂತನೆ ನಡೆಸದೆ, ಕೇವಲ ಹಣದ ಮೋಹದ ಹಿಂದೆ ಬಿದ್ದು, ನಿರೂಪಕರೆಂಬ ಬಾಯಿಬುಡುಕ ಸಂಸ್ಕೃತಿಯ ಜನರನ್ನು ಸೃಷ್ಟಿಸಿ, ಜನರನ್ನು ಮರುಳು ಮಾಡುತ್ತಿರುವ ಕನ್ನಡ ಟಿವಿ ವಾರ್ತಾ ಮಾಧ್ಯಮಗಳಿಗೆ ಈ ಮೂಲಕ ಛೀಮಾರಿ ಹಾಕುತ್ತಾ......

 ಅದೇ ರೀತಿ ತುಂಬಾ ಎಚ್ಚರಿಕೆಯಿಂದ ಕಾರ್ಯಕ್ರಮದ ಬಹಳಷ್ಟು ಸುದ್ದಿಗಳನ್ನು ಮುಖಪುಟದಲ್ಲಿ ಪ್ರಕಟಿಸಿದ ಕನ್ನಡದ ಕೆಲವು ಪತ್ರಿಕಾ ಮಾಧ್ಯಮವನ್ನು ಅಭಿನಂದಿಸುತ್ತಾ....ಇನ್ನಾದರೂ ಟಿವಿ ವಾಹಿನಿಗಳು ಎಚ್ಚೆತ್ತುಕೊಳ್ಳಲಿ ಎಂದು ಆಶಿಸುತ್ತಾ.......
ಲೇಖನ-ವಿವೇಕಾನಂದ. ಎಚ್. ಕೆ. 9844013068........

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು