Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Tumakuru | Politics News

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ವಿರುದ್ಧ ಜೆ.ಸಿ. ಮಾಧುಸ್ವಾಮಿ ಗರಂ

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ತೀವ್ರಗೊಂಡಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ವಿರುದ್ಧ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ವಿಡಿಯೋ ಮೂಲಕ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ವಿ. ಸೋಮಣ್ಣ ಪರವಾಗಿ ಮಾಧುಸ್ವಾಮಿ ಪ್ರಚಾರ ನಡೆಸಿಲ್ಲ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಮಾತಿಗೂ ಬೆಲೆ ನೀಡಿಲ್ಲ ಎಂದು ರವಿ ಹೆಬ್ಬಾಕ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮಾಧುಸ್ವಾಮಿ, ಪ್ರಮುಖ ಸ್ಪಷ್ಟನೆ ಹಾಗೂ ಸವಾಲುಗಳನ್ನು ಎಸೆದಿದ್ದಾರೆ.

ಯಡಿಯೂರಪ್ಪ ಅವರ ಭೇಟಿ: ಬಿಎಸ್‌ವೈ ಅವರು ನನ್ನ ಬಳಿ ಬಂದಿದ್ದು ಪಕ್ಷ ಬಿಡದಂತೆ ಮನವಿ ಮಾಡಲು ಹೊರತು, ಸೋಮಣ್ಣ ಪರ ಪ್ರಚಾರ ಮಾಡಲು ಸೂಚಿಸುವುದಕ್ಕಲ್ಲ ಎಂದು ಸಷ್ಟಪಡಿಸಿದ್ದಾರೆ.

ಪ್ರಚಾರದಿಂದ ದೂರ ಉಳಿದದ್ದು: ವೈಯಕ್ತಿಕ ಕಾರಣಗಳಿಂದ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಾಧ್ಯವಿಲ್ಲವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದೆ. ಅದನ್ನು ಅವರು ಒಪ್ಪಿ, ಬೇರೆ ಜಿಲ್ಲೆಗಳಲ್ಲಿ ಪ್ರಚಾರ ಮಾಡಲು ತಿಳಿಸಿದ್ದರು. ಇದು ಪಕ್ಷ ವಿರೋಧಿ ನಡೆಯೇ? ಎಂದು ಪ್ರಶ್ನಿಸಿದ್ದಾರೆ.

ಅಭ್ಯರ್ಥಿ ಆಯ್ಕೆಯಲ್ಲಿ ನಿರ್ಲಕ್ಷ್ಯ: ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ನಮ್ಮಿಂದ ಯಾವುದೇ ಸಲಹೆ-ಅಭಿಪ್ರಾಯ ಪಡೆದುಕೊಂಡಿಲ್ಲ. ನನ್ನನ್ನು ಸೋಲಿಸಲು ಯತ್ನಿಸಿದವರೇ ಈಗ ಬಿಜೆಪಿ ಕಾರ್ಯಾಲಯದಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪಕ್ಷದ್ರೋಹದ ಪ್ರಶ್ನೆ: ಎಂಎಲ್‌ಸಿ ಚುನಾವಣೆಯಲ್ಲಿ ಕೆ. ರಾಜಣ್ಣ ಅವರ ಮಗನನ್ನು ಗೆಲ್ಲಿಸಲು ಸಹಾಯ ಮಾಡಿದವರು ಯಾರು? ತುಮಕೂರಿನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಒಳ ಒಪ್ಪಂದ ನಡೆದಿದ್ದು, ಪಕ್ಷದ್ರೋಹ ಮಾಡಿದವರ ವಿರುದ್ಧ ಜಿಲ್ಲಾಧ್ಯಕ್ಷರು ಏಕ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ವರದಿ ನೀಡಲಾಗಿರುವುದಕ್ಕೆ ಸವಾಲು ಹಾಕಿರುವ ಮಾಧುಸ್ವಾಮಿ, ತಾವು ಎಲ್ಲಿ ಮತ್ತು ಹೇಗೆ ಪಕ್ಷ ವಿರೋಧಿ ಕೆಲಸ ಮಾಡಿದ್ದೇವೆ ಎಂಬುದನ್ನು ಜಿಲ್ಲಾಧ್ಯಕ್ಷರು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.03ರಂದು ಹಿರಿಯೂರು ತಾಲೂಕಿನಲ್ಲಿ ರೂ. 2,167.01 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಡಿ.ಕೆ. ಶಿವಕುಮಾರ್ ಚಾಲನೆಡಿ.ಕೆ ಶಿವಕುಮಾರ್ ಅವರಿಂದ ಹಿರಿಯೂರಿನ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ಭರ್ತಿ ಕಾಮಗಾರಿಗೆ ಚಾಲನೆಹಿರಿಯೂರು ತಾಲೂಕಿನಲ್ಲಿಂದು ಮುಖ್ಯಮಂತ್ರಿ ಪ್ರವಾಸ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ- ಸಚಿವ ಟಿ.ರಘುಮೂರ್ತಿವಿಪ ಉಪಚುನಾವಣೆಯ ಗೆಲುವು-ಸೋಲಿನ ಪ್ರತಿಫಲನ: ಹಿರಿಯೂರು ಅಖಾಡದಲ್ಲಿ ಬದಲಾದ ರಾಜಕೀಯ ಸಮೀಕರಣ!ಅರ್ಥಪೂರ್ಣವಾಗಿ ಜರುಗಿತು 'ಕನ್ನಡ ಕಲರವ-4' ಕನ್ನಡ ರಾಜ್ಯೋತ್ಸವ ಅಕ್ಷರದ ಆದಿಯಿಂದ ಆತ್ಮವೈಭವದವರೆಗೆ ಅರಳಿದ ಕನ್ನಡದ ಕರುನಾಡು: ಕಾಶಿಗೌಸೌಹಾರ್ದದ ತೋಟಕೆ ಸಂಶಯದ ಮುಳ್ಳು, ವಿವೇಕದ ಬೆಳಕಲಿ ಅರಳಲಿ ಒಗ್ಗಟ್ಟಿನ ಹೂವು: ಕಾಶಿಗೌಪ್ರತಿ ಕನ್ನಡ ರಾಜ್ಯೋತ್ಸವದಲ್ಲಿ ನೆನಪಿಸಿಕೊಳ್ಳಬೇಕಾದ ವಿಷಯಗಳುಸೀಮಂತ್ ಕುಮಾರ್ ಸಿಂಗ್ 'ಮುಖ್ಯ ಗುಮಾಸ್ತ'ನಂತೆ ವರ್ತಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿಕೆಪಿಎಸ್‌ಸಿ ತನಿಖೆ ಹೆಸರಲ್ಲಿ ಐಟಿ, ಇಡಿ ದುರುಪಯೋಗಕ್ಕೆ ಕೇಂದ್ರ ಸಚಿವರ ಹುನ್ನಾರ: ಪ್ರಿಯಾಂಕ್ ಖರ್ಗೆ