Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Bangalore Urban

ಪ್ರತಿ ಕನ್ನಡ ರಾಜ್ಯೋತ್ಸವದಲ್ಲಿ ನೆನಪಿಸಿಕೊಳ್ಳಬೇಕಾದ ವಿಷಯಗಳು

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ರಾಜ್ಯೋತ್ಸವ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಕನ್ನಡ ಭಾಷಿಕರು ಭಿನ್ನಭಿನ್ನ ಆಡಳಿತ ಘಟಕಗಳಲ್ಲಿ ಸೇರಿ
, ತೊಂದರೆಯಲ್ಲಿದ್ದರು. ಭಾಷೆಗಳ ಆಧಾರದಲ್ಲಿ ರಾಜ್ಯಗಳನ್ನು ರಚಿಸಬೇಕು ಎಂಬ ಒತ್ತಾಯದ ಹಿನ್ನಲೆಯಲ್ಲಿ ಫಜಲ್ ಆಲಿ ಆಯೋಗ 1954 ರಲ್ಲಿ ರಚನೆಗೊಂಡಿತು. ವ್ಯಾಪಕ ಚರ್ಚೆಗಳ ತರುವಾಯ ಭಾಷೆಗಳ ಆಧಾರದಲ್ಲಿ 1956ರ ನವೆಂಬರ್ 1 ರಂದು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಮಧ್ಯ ಪ್ರದೇಶ ರಾಜ್ಯಗಳು ಅಸ್ತಿತ್ವಕ್ಕೆ ಬಂದವು.

ಮೈಸೂರು ಸಂಸ್ಥಾನದ ಒಂಬತ್ತು ಜಿಲ್ಲೆಗಳ ಜೊತೆ, ಮದರಾಸು, ಬಾಂಬೆ, ಹೈದರಾಬಾದ ಪ್ರಾಂತ್ಯಗಳಲ್ಲಿ ಸೇರಿಕೊಂಡಿದ್ದ ಹಲವು ಕನ್ನಡ ಪ್ರದೇಶಗಳನ್ನು ಜೋಡಿಸಲಾಯಿತು. ಜೊತೆಗೆ ಜಮಖಂಡಿ, ಜತ್, ಸಾಂಗಲಿ, ಮೀರಜ್, ಸವಣೂರು, ರಾಮದುರ್ಗ ಮೊದಲಾದ ಸಂಸ್ಥಾನಗಳನ್ನೂ ಕೂಡಿಸಲಾಯಿತು. ಹೀಗೆ ಸುಮಾರು 20 ಪ್ರದೇಶಗಳಲ್ಲಿನ ಕನ್ನಡ ನೆಲಗಳನ್ನು ಕೂಡಿಸಿ ಕಟ್ಟಿದ ನಾಡು ಕರ್ನಾಟಕ.

ರಾಜ್ಯೋತ್ಸವದ ಈ ಸಂದರ್ಭದಲ್ಲಿ ಏಕೀಕರಣ ಪ್ರಜ್ಞೆಯನ್ನು ಬೆಳೆಸಿದ ಅನೇಕರನ್ನು ನೆನಪಿಸಿಕೊಳ್ಳಬೇಕು.  ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣ ರಾವ್, ಜಯದೇವಿ ತಾಯಿ ಲಿಗಾಡೆ, ಬಳ್ಳಾರಿ ಸಿದ್ದಮ್ಮ  ಸೇರಿದಂತೆ ಹಲವು ಮಂದಿ ಮಹನೀಯರು ಕನ್ನಡಿಗರನ್ನು ಒಟ್ಟುಗೂಡಿಸಲು ಶ್ರಮಿಸಿದ್ದಾರೆ.

ನಿಜಲಿಂಗಪ್ಪನವರು ಕನ್ನಡ ನೆಲಗಳನ್ನು ಒಟ್ಟುಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ಕಟ್ಟುಲು ದುಡಿದಿದ್ದಾರೆ. ಏಕೀರಣ ಆದ ಕಾಲಕ್ಕೆ ಅವರೇ ಮುಖ್ಯಮಂತ್ರಿಯೂ ಆಗಿದ್ದರು. ದೇವರಾಜ್ ಅರಸರು ರಾಜ್ಯಕ್ಕೆ ‘ಕರ್ನಾಟಕ’ ಹೆಸರು ಕೊಟ್ಟು ಸಹಕರಿಸಿದ್ದಾರೆ. ಹೀಗೆ ಸಾವಿರಾರು ಕೈಗಳು ಕೂಡಿದ್ದರಿಂದ ನಮ್ಮ ರಾಜ್ಯ ಈ ರೂಪದಲ್ಲಿ ನಮ್ಮ ಮುಂದಿದೆ.

ಈ ಬಗೆಯ ಚಾರಿತ್ರಿಕ ಸಂಗತಿಗಳನ್ನು ನಾವು ಮೆಲುಕು ಹಾಕವುದು ಜವಾಬ್ದಾರಿ ಸರಿ. ಆದರೆ ರಾಜ್ಯೋತ್ಸವ ಭಾಷಣಕಾರನಾಗಿ ನನ್ನನ್ನು ಮುಳಬಾಗಿಲು ತಾಲ್ಲೂಕಿನ ಎನ್ ವಡ್ಡಿಹಳ್ಳಿಯ ಡೆಕ್ಕನ್ ಶಾಲೆಯವರು ಕರೆದಾಗ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಲೆಂದು ಪಠ್ಯೇತರ ಓದಿನ ಅಗತ್ಯವನ್ನೂ ಒತ್ತಿ ಹೇಳಿದೆ.

ಕನ್ನಡದಲ್ಲಿ ಓದಲೇಬೇಕಾದ ಹಲವು ಕೃತಿಗಳನ್ನು ಹೆಸರಿಸಿ ಓದಲು ಪ್ರೇರೇಪಿಸಿದೆ. ಓದು ನಮ್ಮ ಸಣ್ಣತನಗಳನ್ನು ಕರಗಿಸುತ್ತದೆಂದೂ, ಜಾತಿ-ಧರ್ಮಗಳ ತಾರತಮ್ಯ ಕಡಿಮೆಯಾಗುವುದೆಂದೂ ಹೇಳಿದೆ. ಹಾಗೆಯೇ ಒಳ್ಳೆಯ ಸಾಹಿತ್ಯ ಕೃತಿಗಳು ನಮ್ಮಲ್ಲಿ ಮಾನವೀಯ ಅಂತಃಕರಣವನ್ನು ಉದ್ದೀಪಿಸುತ್ತವೆಂತಲೂ ಹೇಳಿದೆ. ಕೊನೆಗೆ ಸಮಸಮಾಜದ ಆಶಯವಿರುವ ನಮ್ಮ ‘ಅಸ್ಪೃಶ್ಯತೆ ಮುಕ್ತ ಭಾರತ’ ಪ್ರತಿಜ್ಞೆಯನ್ನು ಬೋಧಿಸಿದೆ.
ವರದಿ-ಡಾ.ಶಿವಪ್ಪ ಅರಿವು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.03ರಂದು ಹಿರಿಯೂರು ತಾಲೂಕಿನಲ್ಲಿ ರೂ. 2,167.01 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಡಿ.ಕೆ. ಶಿವಕುಮಾರ್ ಚಾಲನೆಡಿ.ಕೆ ಶಿವಕುಮಾರ್ ಅವರಿಂದ ಹಿರಿಯೂರಿನ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ಭರ್ತಿ ಕಾಮಗಾರಿಗೆ ಚಾಲನೆಹಿರಿಯೂರು ತಾಲೂಕಿನಲ್ಲಿಂದು ಮುಖ್ಯಮಂತ್ರಿ ಪ್ರವಾಸ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ- ಸಚಿವ ಟಿ.ರಘುಮೂರ್ತಿವಿಪ ಉಪಚುನಾವಣೆಯ ಗೆಲುವು-ಸೋಲಿನ ಪ್ರತಿಫಲನ: ಹಿರಿಯೂರು ಅಖಾಡದಲ್ಲಿ ಬದಲಾದ ರಾಜಕೀಯ ಸಮೀಕರಣ!ಅರ್ಥಪೂರ್ಣವಾಗಿ ಜರುಗಿತು 'ಕನ್ನಡ ಕಲರವ-4' ಕನ್ನಡ ರಾಜ್ಯೋತ್ಸವ ಅಕ್ಷರದ ಆದಿಯಿಂದ ಆತ್ಮವೈಭವದವರೆಗೆ ಅರಳಿದ ಕನ್ನಡದ ಕರುನಾಡು: ಕಾಶಿಗೌಸೌಹಾರ್ದದ ತೋಟಕೆ ಸಂಶಯದ ಮುಳ್ಳು, ವಿವೇಕದ ಬೆಳಕಲಿ ಅರಳಲಿ ಒಗ್ಗಟ್ಟಿನ ಹೂವು: ಕಾಶಿಗೌಪ್ರತಿ ಕನ್ನಡ ರಾಜ್ಯೋತ್ಸವದಲ್ಲಿ ನೆನಪಿಸಿಕೊಳ್ಳಬೇಕಾದ ವಿಷಯಗಳುಸೀಮಂತ್ ಕುಮಾರ್ ಸಿಂಗ್ 'ಮುಖ್ಯ ಗುಮಾಸ್ತ'ನಂತೆ ವರ್ತಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿಕೆಪಿಎಸ್‌ಸಿ ತನಿಖೆ ಹೆಸರಲ್ಲಿ ಐಟಿ, ಇಡಿ ದುರುಪಯೋಗಕ್ಕೆ ಕೇಂದ್ರ ಸಚಿವರ ಹುನ್ನಾರ: ಪ್ರಿಯಾಂಕ್ ಖರ್ಗೆ