Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Politics News

ವಿಪ ಉಪಚುನಾವಣೆಯ ಗೆಲುವು-ಸೋಲಿನ ಪ್ರತಿಫಲನ: ಹಿರಿಯೂರು ಅಖಾಡದಲ್ಲಿ ಬದಲಾದ ರಾಜಕೀಯ ಸಮೀಕರಣ!

ಹೆಚ್.ಸಿ ಗಿರೀಶ್, ಹರಿಯಬ್ಬೆ.
ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯ ರಾಜಕಾರಣದ ಗಮನವೆಲ್ಲಾ ಈಗ ಮಧ್ಯ ಕರ್ನಾಟಕದ ಹರಿವು ಹಾಗೂ ಕೃಷಿ ಪ್ರಧಾನ ಕ್ಷೇತ್ರವಾದ ಹಿರಿಯೂರು ವಿಧಾನಸಭಾ ಕ್ಷೇತ್ರದತ್ತ ನೆಟ್ಟಿದೆ. ಚುನಾವಣಾ ಆಯೋಗವು ಇಂದು ದಿನಾಂಕ ಘೋಷಣೆ ಮಾಡುವ ಸಾಧ್ಯತೆ ತಿಳಿಯುತ್ತಿದ್ದಂತೆಯೇ ಅಖಾಡದಲ್ಲಿ ರಾಜಕೀಯ ಕಾವು ಏರಿದ್ದು
, ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತಮ್ಮ ಚದುರಂಗದಾಟವನ್ನು ಆರಂಭಿಸಿವೆ.

ಇತ್ತೀಚೆಗೆ ನಡೆದ ವಿಧಾನ ಪರಿಷತ್ (MLC) ಚುನಾವಣೆಗಳ ಫಲಿತಾಂಶ, ಗೆಲುವು-ಸೋಲುಗಳು ಹಾಗೂ ಶಕ್ತಿಪ್ರದರ್ಶನಗಳ ಹಿನ್ನೆಲೆಯಲ್ಲಿ ಹಿರಿಯೂರು ಉಪಚುನಾವಣೆ ನಡೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಹಿರಿಯೂರು ಕ್ಷೇತ್ರದ ಕಣ ಕೇವಲ ಒಬ್ಬ ಶಾಸಕರ ಆಯ್ಕೆಯಲ್ಲ, ಬದಲಾಗಿ ಉಭಯ ಬಣಗಳ ಸಾಂಸ್ಥಿಕ ಶಕ್ತಿಗೆ ಬಿದ್ದಿರುವ ದೊಡ್ಡ ಪರೀಕ್ಷೆ ಎಂಬುದು ಸ್ಪಷ್ಟವಾಗುತ್ತದೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ದಿಕ್ಸೂಚಿ ಆಗಲಿದೆ ಎಂದು ಬಿಂಬಿಸಲಾಗುತ್ತಿದೆ. ಮತ್ತು ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ವಿಧಾನಸಭೆಗೆ ನಡೆಯುವ ಮೊದಲ ಚುನಾವಣೆ ಇದಾಗಿದೆ. ಹಾಗಾಗಿ ಸಿಎಂ ಅವರು ಗೆಲ್ಲಲೇಬೇಕೆನ್ನುವ ಒತ್ತಡದಲ್ಲಿದ್ದು ಮತದಾರರನ್ನು ಸೆಳೆಯಲು ಹಲವು ಯೋಜನೆಗಳು ಕ್ಷೇತ್ರಕ್ಕೆ ಹರಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ವಿಧಾನ ಪರಿಷತ್ ಫಲಿತಾಂಶದ ಪ್ರಭಾವ: ಆಡಳಿತಾರೂಢ ಕಾಂಗ್ರೆಸ್‌ಗೆ ಹೊಸ ಶಕ್ತಿಯಾಗಬೇಕಿದ್ದ ಇತ್ತೀಚಿನ ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರುವುದು ಪಕ್ಷ ಮತ್ತು ಕಾರ್ಯಕರ್ತರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ.

ಅನುಕಂಪದ ಸಹಾನುಭೂತಿ ಜೊತೆಗೆ 'ಗ್ಯಾರಂಟಿ' ಮತ್ತು 'ಅಭಿವೃದ್ಧಿ' ಅಸ್ತ್ರ: ವಿಧಾನ ಪರಿಷತ್‌ನಲ್ಲಿನ ಸೋಲು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನರ ಅನುಮೋದನೆ ಸಿಕ್ಕಿಲ್ಲ ಎಂಬುದು ಒಂದು ಕಡೆಯಾದರೆ ಆಡಳಿತ ಪಕ್ಷಕ್ಕೆ ಈ ಉಪ ಚುನಾವಣೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಹಿರಿಯೂರಿಗೆ ಸಿಎಂ ಆಗಮನ ಹಾಗೂ ಶಂಕುಸ್ಥಾಪನೆ: ದಿನಾಂಕ ಘೋಷಣೆಯಾಗುವ ಸಾಧ್ಯತೆ ಇರುವುದರಿಂದಲೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸ್ವತಃ ಹಿರಿಯೂರಿಗೆ ಭೇಟಿ ನೀಡಿ ಹಲವು ಹೊಸ ಯೋಜನೆಗಳ ಘೋಷಣೆ ಹಾಗೂ ಶಂಕುಸ್ಥಾಪನೆಗೆ ಮುಂದಾಗಿರುವುದು, ತಳಮಟ್ಟದ ಮತಗಳಾಗಿ ಪರಿವರ್ತಿಸುವ ಪಕ್ಕಾ ತಂತ್ರಗಾರಿಕೆಯಾಗಿದೆ. ಅಭ್ಯರ್ಥಿ ಆಯ್ಕೆಯ ಸ್ಪಷ್ಟತೆ: ಹಿರಿಯೂರಿನಲ್ಲೂ ಅಭ್ಯರ್ಥಿ ಆಯ್ಕೆಯ ಗೊಂದಲಕ್ಕೆ ಅವಕಾಶ ನೀಡದೆ, ಕಾಂಗ್ರೆಸ್ ಪಕ್ಷ ಮಾಡಿಸಿದ ಹಲವು ಸರ್ವೇಗಳಲ್ಲಿ ದಿವಂಗತ ಶಾಸಕ ಡಿ. ಸುಧಾಕರ್ ಅವರ ಪುತ್ರ ಸುಹಾಸ್ ಸುಧಾಕರ್ ಅವರಿಗೆ ಹಿನ್ನೆಡೆಯಾಗುವ ಸೂಚನೆ ನಡುವೆಯೂ ಸುಧಾಕರ್ ಅವರ ಕುಟುಂಬದ ಕಡೆಗೆ ಒಲವು ತೋರಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಲು ಕಾಂಗ್ರೆಸ್ ವೇದಿಕೆ ಸಜ್ಜುಗೊಳಿಸಿದೆ.

ಜೆಪಿ ಭವನದಲ್ಲಿ ಮೈತ್ರಿಕೂಟದ ತುರ್ತು ಸಭೆ:
ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ನಾಲ್ಕಕ್ಕೆ ನಾಲ್ಕು ಸ್ಥಾನ ಗೆದ್ದಿರುವುದು ಮೈತ್ರಿ ಪಕ್ಷಗಳಲ್ಲಿ ಆನೆ ಬಲ ತುಂಬಿದೆ. ವಿಧಾನ ಪರಿಷತ್ ಫಲಿತಾಂಶಗಳಲ್ಲಿ ಮೈತ್ರಿಕೂಟಕ್ಕೆ ಸಿಕ್ಕ ಅಭೂತಪೂರ್ವ ಜಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಕಾರ್ಯಕರ್ತರಲ್ಲಿ ಹುಮ್ಮಸ್ಸು ದುಪ್ಪಟ್ಟಾಗಿದೆ.

ಕುಮಾರಸ್ವಾಮಿ ನೇತೃತ್ವದಲ್ಲಿ ಮಿಂಚಿನ ಸಭೆ: ಪರಿಷತ್ ಚುನಾವಣೆಯಲ್ಲಿ ಕಂಡುಬಂದ ಜಯಘೋಷಗಳಿಂದಾಗಿ ಹಿರಿಯೂರು ಕ್ಷೇತ್ರಕ್ಕೆ ನಡೆಯುವ ಉಪತುನಾವಣೆಯಲ್ಲೂ ಅದೇ ಫಲಿತಾಂಶ ಮರುಕಳಿಸಲಿ ಎನ್ನುವ ಆತ್ಮ ವಿಶ್ವಾಸ ಹೊಂದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 3ರಂದು ಜೆಪಿ ಭವನದಲ್ಲಿ ತುರ್ತು ಸಭೆ ಕರೆಯಲಾಗಿದೆ.

ಟಿಕೆಟ್ ಗೊಂದಲ ಹಾಗೂ ಮತ ವರ್ಗಾವಣೆ ಸವಾಲು:
ಬಿಜೆಪಿ ಮತ್ತು ಜೆಡಿಎಸ್‌ನ ಸಾಂಪ್ರದಾಯಿಕ ಮತಗಳನ್ನು ಹಿರಿಯೂರಿನಲ್ಲಿ ಪರಸ್ಪರ ಶೇ.೧೦೦ ರಷ್ಟು ವರ್ಗಾಯಿಸುವುದು ಹೇಗೆ ಎಂಬ ಬಗ್ಗೆ ಈ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ. ಹಿರಿಯೂರು ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ನಿಲ್ಲಬೇಕು ಹಾಗೂ ಬಂಡಾಯ ಏಳದಂತೆ ಹೇಗೆ ಸಮಾಧಾನಪಡಿಸಬೇಕು ಎಂಬುದೇ ಸಭೆಯ ಪ್ರಮುಖ ಅಜೆಂಡಾವಾಗಿದೆ.

ವಿಧಾನ ಪರಿಷತ್ vs ವಿಧಾನಸಭಾ ಉಪಚುನಾವಣೆ: ಪ್ರಮುಖ ವ್ಯತ್ಯಾಸಗಳು ವಿಧಾನ ಪರಿಷತ್ ಮತದಾರರು (ಶಾಸಕರು, ಪದವೀಧರರು, ಶಿಕ್ಷಕರು ಅಥವಾ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು) ಹಾಗೂ ವಿಧಾನಸಭಾ ಕ್ಷೇತ್ರದ ಸಾಮಾನ್ಯ ಮತದಾರರ ಆದ್ಯತೆಗಳು ವಿಭಿನ್ನವಾಗಿರುತ್ತದೆ. ಈ ನಿಟ್ಟಿನಲ್ಲಿ ಹಿರಿಯೂರು ಅಖಾಡದ ತುಲನಾತ್ಮಕ ನೋಟ ಇಲ್ಲಿದೆ.

ಕ್ಷೇತ್ರಕ್ಕೆ ಇಂದು ಸಿಎಂ ಭೇಟಿ ಮಾಡಿ ಯೋಜನಾ ಘೋಷಣೆಗಳ ಮೂಲಕ 'ಅಭಿವೃದ್ಧಿ ಕಾರ್ಡ್' ಬಳಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುವ ಸಾಧ್ಯತೆ ಇದೆ.

ಪ್ರತಿಪಕ್ಷಗಳು ಆಡಳಿತ ರೂಢ ಕಾಂಗ್ರೆಸ್ ಪಕ್ಷಕ್ಕೆ ಪ್ರತಿ ಸವಾಲು ಹಾಕಲು ಸಿದ್ಧತೆ ಮಾಡಿಕೊಂಡಿದ್ದು ಬೆಲೆ ಏರಿಕೆ, ಅಭಿವೃದ್ಧಿ ಶೂನ್ಯ, ಕೆಪಿಎಸ್ ಸಿ ನೇಮಕಾತಿಯಲ್ಲಿನ ಭ್ರಷ್ಟಾಚಾರ ಸೇರಿದಂತೆ ಮತ್ತಿತರ ವಿಷಯಗಳೊಂದಿಗೆ ಮೈತ್ರಿಕೂಟ ಸಮನ್ವಯದಿಂದ ಕೆಲಸ ಮಾಡಲು ಸಜ್ಜಾಗಿದೆ.

ಸ್ಥಳೀಯ ವಿಷಯಗಳ ಪ್ರಭಾವ ಪರಿಷತ್ ಚುನಾವಣೆಯಲ್ಲಿ ನೀತಿ-ನಿಯಮಗಳು ಮತ್ತು ಪರೋಕ್ಷ ರಾಜಕೀಯ ವಿಷಯಗಳು ಪ್ರಮುಖವಾಗಿದ್ದವು. ಹಿರಿಯೂರಿಗೆ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ, ಸ್ಥಳೀಯ ಕೃಷಿ ಸಮಸ್ಯೆಗಳು ಹಾಗೂ ಶಾಸಕರ ಸಹಾನುಭೂತಿ ನೇರ ಪ್ರಭಾವ ಬೀರಲಿವೆ.

ಸೋಲು-ಗೆಲುವುಗಳ ಅನುಭವ ಹಿರಿಯೂರು ಉಪಚುನಾವಣೆಯ ಕಣವನ್ನು ಇನ್ನಷ್ಟು ರೋಚಕಗೊಳಿಸಿದೆ. ಆಡಳಿತಾರೂಢ ಕಾಂಗ್ರೆಸ್ ಹಿರಿಯೂರು ಕ್ಷೇತ್ರ ಗೆದ್ದು ಉಳಿಸಿಕೊಳ್ಳುವ ಇರಾದೆ ಹೊಂದಿದ್ದರೆ ಮೈತ್ರಿಕೂಟ ಇದಕ್ಕೆ ಠಕ್ಕರ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.  ಜೆಪಿ ಭವನದ ಸಭೆಯ ಮೂಲಕ ರಣತಂತ್ರ ಹೆಣೆಯುತ್ತಿದೆ. ಅಂತಿಮವಾಗಿ ಹಿರಿಯೂರಿನ ಜಾಣ ಮತದಾರ ಯಾರ ಕೈಹಿಡಿಯಲಿದ್ದಾನೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.03ರಂದು ಹಿರಿಯೂರು ತಾಲೂಕಿನಲ್ಲಿ ರೂ. 2,167.01 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಡಿ.ಕೆ. ಶಿವಕುಮಾರ್ ಚಾಲನೆಡಿ.ಕೆ ಶಿವಕುಮಾರ್ ಅವರಿಂದ ಹಿರಿಯೂರಿನ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ಭರ್ತಿ ಕಾಮಗಾರಿಗೆ ಚಾಲನೆಹಿರಿಯೂರು ತಾಲೂಕಿನಲ್ಲಿಂದು ಮುಖ್ಯಮಂತ್ರಿ ಪ್ರವಾಸ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ- ಸಚಿವ ಟಿ.ರಘುಮೂರ್ತಿವಿಪ ಉಪಚುನಾವಣೆಯ ಗೆಲುವು-ಸೋಲಿನ ಪ್ರತಿಫಲನ: ಹಿರಿಯೂರು ಅಖಾಡದಲ್ಲಿ ಬದಲಾದ ರಾಜಕೀಯ ಸಮೀಕರಣ!ಅರ್ಥಪೂರ್ಣವಾಗಿ ಜರುಗಿತು 'ಕನ್ನಡ ಕಲರವ-4' ಕನ್ನಡ ರಾಜ್ಯೋತ್ಸವ ಅಕ್ಷರದ ಆದಿಯಿಂದ ಆತ್ಮವೈಭವದವರೆಗೆ ಅರಳಿದ ಕನ್ನಡದ ಕರುನಾಡು: ಕಾಶಿಗೌಸೌಹಾರ್ದದ ತೋಟಕೆ ಸಂಶಯದ ಮುಳ್ಳು, ವಿವೇಕದ ಬೆಳಕಲಿ ಅರಳಲಿ ಒಗ್ಗಟ್ಟಿನ ಹೂವು: ಕಾಶಿಗೌಪ್ರತಿ ಕನ್ನಡ ರಾಜ್ಯೋತ್ಸವದಲ್ಲಿ ನೆನಪಿಸಿಕೊಳ್ಳಬೇಕಾದ ವಿಷಯಗಳುಸೀಮಂತ್ ಕುಮಾರ್ ಸಿಂಗ್ 'ಮುಖ್ಯ ಗುಮಾಸ್ತ'ನಂತೆ ವರ್ತಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿಕೆಪಿಎಸ್‌ಸಿ ತನಿಖೆ ಹೆಸರಲ್ಲಿ ಐಟಿ, ಇಡಿ ದುರುಪಯೋಗಕ್ಕೆ ಕೇಂದ್ರ ಸಚಿವರ ಹುನ್ನಾರ: ಪ್ರಿಯಾಂಕ್ ಖರ್ಗೆ