Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಾಂಗ್ರೆಸ್‌ವಿರುದ್ಧ ಹೆಚ್‌ಡಿಕೆ ಆಕ್ರೋಶದ ಪ್ರಹಾರ: ಸಿಡಿಆರ್ ದಾಖಲೆ ಬಿಡುಗಡೆ ಮಾಡಿ ಡಿಕೆಶಿಗೆ ಕುಮಾರಸ್ವಾಮಿ ಸವಾಲು!

ಸಿಡಿ-ಸ್ಟಿಂಗ್ ಧಮಾಕಾ: ಸರ್ಕಾರ ಮತ್ತು ಪೊಲೀಸರ ವಿರುದ್ಧ ಬಂಡೆದ್ದ ಕುಮಾರಸ್ವಾಮಿ!
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ 'ಸ್ಟಿಂಗ್ ಆಪರೇಷನ್' ಪ್ರಕರಣ ಹಾಗೂ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ. ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

CDR ದಾಖಲೆಗಳ ಬಿಡುಗಡೆ & ಡಿ.ಕೆ. ಶಿವಕುಮಾರ್‌ಗೆ ಸವಾಲು:
ದೆಹಲಿಯಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಮೊಬೈಲ್ ಎಕ್ಸ್ ಚೇಂಜ್ ಆಗಿದೆ ಎಂಬ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 'ಕಾಲ್ ಡೀಟೇಲ್ ರೆಕಾರ್ಡ್' ದಾಖಲೆಗಳನ್ನು ಬಿಡುಗಡೆ ಮಾಡಿದರು.

ಆರೋಪ: ಪ್ರಜ್ವಲ್ ರೇವಣ್ಣ ಪ್ರಕರಣದ ೨ನೇ ಆರೋಪಿ (ಮಾಜಿ ಚಾಲಕ ಕಾರ್ತಿಕ್), ವಿವಾದಾತ್ಮಕ ವಿಡಿಯೋಗಳು ಹರಿದಾಡುವ ಮುನ್ನವೇ ಅಂದರೆ 2023ರ ಆಗಸ್ಟ್ 5 ಮತ್ತು 6ರಂದು ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದ ಎಂದು CDR ತೋರಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

"ಸಂಬಂಧಪಟ್ಟ ಮಹಿಳೆಯರ ಮುಖ ಬ್ಲರ್ ಮಾಡದೆ ವಿಡಿಯೋ ಹರಡಿದ ಆರೋಪ ಹೊತ್ತ ಕಾರ್ತಿಕ್‌ನನ್ನು ಡಿಕೆಶಿ ನಿವಾಸಕ್ಕೆ ಕರೆತರಲಾಗಿತ್ತು. ಕಾರ್ತಿಕ್ ಜೊತೆ ಡಿಕೆಶಿ ಸಂಬಂಧವೇನು? ಪೊಲೀಸರು ಅವರನ್ನು ವಿಚಾರಣೆ ನಡೆಸಿದ್ದಾರೆಯೇ?" ಎಂದು ಕುಮಾರಸ್ವಾಮಿ ಸವಾಲೆಸೆದರು.

ಮೈತ್ರಿ ರಾಜಕೀಯ: ಜೆಡಿಎಸ್-ಬಿಜೆಪಿ ಮೈತ್ರಿ ನಂತರ ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ಜೆಡಿಎಸ್ ಪಕ್ಷವನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದರು.

ಸಿದ್ದರಾಮಯ್ಯಗೆ 'ಕ್ಲೀನ್ ಚಿಟ್' ನೀಡುವ ಉದ್ದೇಶವೇ?:
ಅಕ್ಟೋಬರ್ ೨೧, ೨೦೨೬ರ ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಈ ತನಿಖೆಯು ಸತ್ಯ ಹೊರತರುವ ಬದಲು ಸಿದ್ದರಾಮಯ್ಯ ಅವರಿಗೆ ದೋಷಮುಕ್ತ ಪ್ರಮಾಣಪತ್ರ (ಕ್ಲೀನ್ ಚಿಟ್) ನೀಡುವ ಕಟ್ಟುಕಥೆಯಾಗಿದೆ ಎಂದರು.

ಸಿಸಿಬಿ ಅಧಿಕಾರಿ ಬದಲಾವಣೆ: ತನಿಖೆ ನಡೆಸುತ್ತಿದ್ದ CCB ಇನ್ಸ್‌ಪೆಕ್ಟರ್ ಸತೀಶ್ ಅವರನ್ನು ಇದ್ದಕ್ಕಿದ್ದಂತೆ ಬದಲಾಯಿಸಿರುವುದನ್ನು ಪ್ರಶ್ನಿಸಿದರು.

ಅಸಲಿಯತ್ತಿನ ಪರಿಶೀಲನೆ: 'ಸ್ಟಿಂಗ್ ಆಪರೇಷನ್' ವಿಡಿಯೋ ಅಸಲಿಯೇ ಅಥವಾ ಕೃತಕವಾಗಿ ಸೃಷ್ಟಿಸಿದ್ದೇ ಎಂಬುದನ್ನು ಪೊಲೀಸರು ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳ ದುರ್ಬಳಕೆ: ತನಿಖೆ ವೇಳೆ ಮಹಿಳೆಯೊಬ್ಬರ ಫೋನ್, ಬ್ಯಾಂಕ್ ಪಾಸ್‌ಬುಕ್ ವಶಪಡಿಸಿಕೊಂಡು ಜನರನ್ನು ಬೆದರಿಸಲಾಗುತ್ತಿದೆ ಎಂದು ದೂರಿದರು.

ಕೃಪಾ ಆಳ್ವ ಮತ್ತು ೨೦೨೩ರ ರೆಕಾರ್ಡಿಂಗ್ ರಹಸ್ಯ: ಹಳೆಯ ಘಟನೆ: 2011ರಷ್ಟು ಹಳೆಯ ಘಟನೆಯನ್ನು 2023ರಲ್ಲಿ ರೆಕಾರ್ಡ್ ಮಾಡಿ ಮುನ್ನೆಲೆಗೆ ತಂದಿದ್ದೇಕೆ? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಕೃಪಾ ಆಳ್ವ ಪಾತ್ರ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವ ಅವರಿಗೆ ಸಂಬಂಧಪಟ್ಟ ಮಹಿಳೆ 2015ರಲ್ಲೇ ಇಮೇಲ್ ಕಳುಹಿಸಿದ್ದರು. ಕೃಪಾ ಆಳ್ವ ಮತ್ತು ಆ ಮಹಿಳೆಯ ನಡುವಿನ ಸಂಬಂಧವೇನು? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ರೆಕಾರ್ಡಿಂಗ್ ವೇಳೆಯಲ್ಲಿದ್ದ ವೃದ್ಧನ ಗುರುತು ಮತ್ತು ಮಹಿಳೆಯನ್ನು ಅಲ್ಲಿಗೆ ಕರೆತಂದವರ ಬಗ್ಗೆ ತನಿಖೆಯಾಗಬೇಕು. 2023ರಲ್ಲಿ ಸಂಬಂಧಪಟ್ಟ ವ್ಯಕ್ತಿಯ ಗೃಹಪ್ರವೇಶ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಹಲವು ಗಂಟೆಗಳ ಕಾಲ ಏಕೆ ಭಾಗವಹಿಸಿದ್ದರು ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಯಾವುದೇ ಶೋಧಕ್ಕೂ ಸಿದ್ಧ: ರಿತೇಶ್ ಪಾಂಡೆ ಜೊತೆ ಸಂಪರ್ಕವಿಲ್ಲ: ಸ್ಟಿಂಗ್ ಆಪರೇಷನ್ ಪ್ರಕರಣದ ರಿತೇಶ್ ಪಾಂಡೆ ಮುಖವನ್ನೇ ನೋಡಿಲ್ಲ. ದೆಹಲಿ ನಿವಾಸಕ್ಕೆ ನೂರಾರು ಜನ ಬರುತ್ತಾರೆ. ಗಾಜಿಯಾಬಾದ್‌ನ ನಿತೀಶ್ ಕುಮಾರ್ ಎಂಬ ವ್ಯಕ್ತಿ ನನ್ನ ಮನೆಯಲ್ಲಿದ್ದ ಎಂಬುದು ಸುಳ್ಳು.

ಅಧಿಕಾರಿಗಳಿಗೆ ಸಂದೇಶ: "ಸಲೀಂ ಅವರೇ, ರಾಜಕಾರಣಿಗಳ ಒತ್ತಡಕ್ಕೆ ಮಣಿಯಬೇಡಿ. ಕಾಲಚಕ್ರ ತಿರುಗುತ್ತದೆ, ಉನ್ನತ ಸ್ಥಾನದಲ್ಲಿರುವವರು ಕೆಳಗೆ ಬರಬಹುದು. ಪ್ರಾಮಾಣಿಕ ತನಿಖೆ ನಡೆಸಿ" ಎಂದು ಕುಮಾರಸ್ವಾಮಿ ಅವರು ತಾಕೀತು ಮಾಡಿದರು.

ಮನೆ ಶೋಧಕ್ಕೆ ಸಿದ್ಧ: "ನನ್ನ ಮನೆ ಶೋಧಕ್ಕೆ ವಾರಂಟ್ ತಂದರೂ ಸ್ವಾಗತ. ಮುಚ್ಚಿಡಲು ನನ್ನ ಬಳಿ ಏನೂ ಇಲ್ಲ, ಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ" ಎಂದು ಅವರು ಹೇಳಿದರು.

ರಾಜ್ಯದ ಘನತೆ ಕಾಪಾಡುವ ಹೋರಾಟ: ರಮೇಶ್ ಜಾರಕಿಹೊಳಿ ಪ್ರಕರಣದ ವೇಳೆ ವಿಧಾನಸಭೆಯಲ್ಲಿ ಡಿ.ಕೆ ಶಿವಕುಮಾರ್ ಅವರು "ತನಿಖೆ ಏಕಪಕ್ಷೀಯವಾಗಿರಬಾರದು" ಎಂದು ನೀಡಿದ್ದ ಭಾಷಣವನ್ನು ನೆನಪಿಸಿದ ಕುಮಾರಸ್ವಾಮಿ, "ಈಗ ನೀವೇನು ಮಾಡುತ್ತಿದ್ದೀರಿ?" ಎಂದು ಅವರು ಬೇಸರ ಹೊರ ಹಾಕಿದರು.

"ಇದು ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡ ವಿಷಯವಲ್ಲ. ಸಿಡಿ ಮತ್ತು ಸ್ಟಿಂಗ್ ಆಪರೇಷನ್‌ಗಳ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುವ ಜಾಲವನ್ನು ಬಯಲಿಗೆಳೆಯುವ ಹೋರಾಟ. ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು; ನನ್ನ ಹೋರಾಟ ಯಾರನ್ನೂ ವೈಯಕ್ತಿಕವಾಗಿ ಅವಮಾನಿಸುವುದಕ್ಕಲ್ಲ, ಕರ್ನಾಟಕದ ಘನತೆಯನ್ನು ಕಾಪಾಡುವುದಕ್ಕಾಗಿ." ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರು ಹಾಗೂ ಜೆಡಿಎಸ್ ನಾಯಕರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ.03ರಂದು ಹಿರಿಯೂರು ತಾಲೂಕಿನಲ್ಲಿ ರೂ. 2,167.01 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಡಿ.ಕೆ. ಶಿವಕುಮಾರ್ ಚಾಲನೆಡಿ.ಕೆ ಶಿವಕುಮಾರ್ ಅವರಿಂದ ಹಿರಿಯೂರಿನ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ಭರ್ತಿ ಕಾಮಗಾರಿಗೆ ಚಾಲನೆಹಿರಿಯೂರು ತಾಲೂಕಿನಲ್ಲಿಂದು ಮುಖ್ಯಮಂತ್ರಿ ಪ್ರವಾಸ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ- ಸಚಿವ ಟಿ.ರಘುಮೂರ್ತಿವಿಪ ಉಪಚುನಾವಣೆಯ ಗೆಲುವು-ಸೋಲಿನ ಪ್ರತಿಫಲನ: ಹಿರಿಯೂರು ಅಖಾಡದಲ್ಲಿ ಬದಲಾದ ರಾಜಕೀಯ ಸಮೀಕರಣ!ಅರ್ಥಪೂರ್ಣವಾಗಿ ಜರುಗಿತು 'ಕನ್ನಡ ಕಲರವ-4' ಕನ್ನಡ ರಾಜ್ಯೋತ್ಸವ ಅಕ್ಷರದ ಆದಿಯಿಂದ ಆತ್ಮವೈಭವದವರೆಗೆ ಅರಳಿದ ಕನ್ನಡದ ಕರುನಾಡು: ಕಾಶಿಗೌಸೌಹಾರ್ದದ ತೋಟಕೆ ಸಂಶಯದ ಮುಳ್ಳು, ವಿವೇಕದ ಬೆಳಕಲಿ ಅರಳಲಿ ಒಗ್ಗಟ್ಟಿನ ಹೂವು: ಕಾಶಿಗೌಪ್ರತಿ ಕನ್ನಡ ರಾಜ್ಯೋತ್ಸವದಲ್ಲಿ ನೆನಪಿಸಿಕೊಳ್ಳಬೇಕಾದ ವಿಷಯಗಳುಸೀಮಂತ್ ಕುಮಾರ್ ಸಿಂಗ್ 'ಮುಖ್ಯ ಗುಮಾಸ್ತ'ನಂತೆ ವರ್ತಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿಕೆಪಿಎಸ್‌ಸಿ ತನಿಖೆ ಹೆಸರಲ್ಲಿ ಐಟಿ, ಇಡಿ ದುರುಪಯೋಗಕ್ಕೆ ಕೇಂದ್ರ ಸಚಿವರ ಹುನ್ನಾರ: ಪ್ರಿಯಾಂಕ್ ಖರ್ಗೆ