Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಕೃತಕ ಆಭರಣ ತಯಾರಿಕೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಉದ್ಯಮ ಶೀಲತೆ ಹಾಗು ಮಹಿಳಾ ಸಬಲೀಕರಣ ಯಿಂದ  26 ದಿನಗಳ ಕಾಲ   ಉಚಿತ ತರಬೇತಿಯನ್ನು ಆಯೋಜಿಸಿ
, ಮಹಿಳೆಯರಿಗೆ ವಿವಿಧ ರೀತಿಯ ಪರಿಸರ ಸ್ನೇಹಿ ಕೃತಕ ಆಭರಣ ತಯಾರಿಕೆ   ಉಚಿತ ತರಬೇತಿಯನ್ನು ನಡೆಸಲಾಯಿತು.

ನಗರದ ಕೆ ಎಸ್ ಆರ್ ಟಿ ಸಿ ನಿಲ್ದಾಣದ ಮೊದಲನೆ ಮಹಡಿಯಲ್ಲಿ ಅಯೋಜನೆ ಮಾಡಲಾದ ಭಾರತೀಯ ಉದ್ಯಮ ಶೀಲ ಅಭಿವೃದ್ಧಿ ಸಂಸ್ಥೆ( ಇಡಿಐಐ) ಸಂಸ್ಥೆಯು ಆಯೋಜಿಸಿದ್ದ ತರಬೇತಿ ಪೂರ್ಣಗೊಂಡಿದ್ದು, ತರಬೇತಿ  ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರವನ್ನು ಪಂಚಾಯಿತಿಯ ಸುತ್ತಮುತ್ತಲಿನ ಗ್ರಾಮಗಳ ಸುಮಾರು 55 ಮಹಿಳೆಯರು ಶಿಬಿರದ ಪ್ರಯೋಜನ ಪಡೆದರು.

ಇಡಿಐಐ ಸಂಸ್ಥೆಯ ಯೋಜನಾ ಸಂಸ್ಥಾಪಕಿ ಲಲಿತಾರವರು ಕಾರ್ಯಕ್ರಮ ನಡೆಸಿಕೊಟ್ಟರು.
ನಂತರ ಶಿಬಿರಾರ್ಥಿ ಶ್ರೀಮತಿ, ರಮ್ಯಾ ಮಾತನಾಡಿ ತರಬೇತಿಯಲ್ಲಿ ಕಲಿತ ವಿದ್ಯೇಯನ್ನು ನಾವು ಬಳಸಿಕೊಂಡು ಈ ಉದ್ಯಮವನ್ನು ಮುಂದುವರೆಸಿಕೊಂಡು ಇನ್ನು ಹತ್ತಾರು ಜನರಿಗೆ ಈ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ನೀಡಲು ಸಹಕಾರಿಯಾಗುತ್ತೇನೆ ಎಂದು ತಮ್ಮ ಉದ್ಯಮ ಮನೋಭಾವವನು ವ್ಯಕ್ತಪಡಿಸಿ ಮಹಿಳೆಯರನ್ನು ಉದ್ಯಮ ಕ್ಷೇತ್ರದತ್ತ ಹುರಿದುಂಬಿಸಿದರು.

ಭಾರತೀಯ ಉದ್ಯಮ ಶೀಲ ಅಭಿವೃದ್ಧಿ ಸಂಸ್ಥೆ (ಇಡಿಐಐಸಂಸ್ಥೆಯ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪರಿಸರ ಸ್ನೇಹಿ ಕೃತಕ ಆಭರಣ ತಯಾರಿಕೆ ಮುಗಿಸಿದ 55 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ  ದೇವನಹಳ್ಳಿ  ಲೀಡ್ ಬ್ಯಾಂಕ್ ಮ್ಯಾನೇಜರ್  ರಾಮಾಂಜಿ , ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ವಡ್ಡರಹಳ್ಳಿ ರವಿಕುಮಾರ್, ಭಾರತೀಯ  ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಕುಮಾರ ನಾಯ್ಕ , ದೊಡ್ಡಬಳ್ಳಾಪುರ  ಸಮಾಜ ಸೇವಕರುಗಳಾದ ಅಂಬಿಕಾ , ಚಂದ್ರಕಲಾ ಉದ್ಯಮ ಶೀಲತಾ ತರಬೇತಿಯ ಶಿಬಿರಾರ್ಥಿಗಳು ಹಾಜರಿದ್ದರು.

ಕೃತಕಾ ಆಭರಣ ತಯಾರಿಕೆ ತರಬೇತಿ ನಮ್ಮ ಜೀವನಕ್ಕೆ ಮುಖ್ಯ ಆಶಾದಾಯಕವಾಗಿದೆ ಬಂಗಾರ ದಿನದಿಂದ ದಿನಕ್ಕೆ ಗಗನ ಕುಸುಮವಾಗಿದ್ದು ಬಂಗಾರ ಖರೀದಿಸಲು ಸಾದ್ಯವಾಗದೆ ಇದ್ದಾಗ ಸಾಮಾನ್ಯ ಜನ ಕೃತಕಾ ಆಭರಣ ಬಳಕೆ ತುಂಬಾ ಅನಿವಾರ್ಯವಾಗಿದೆ”.
ಗಾಯಿತ್ರಿ, ಉದ್ಯಮ ಶೀಲತೆಯ ಶಿಬಿರಾರ್ಥಿ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು