ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಿಂದ ಪ್ರತಿ ತಿಂಗಳು ಜೀವ ಶಿವ ಸೇವೆಯ ಕಾರ್ಯಕ್ರಮದ ಅಂಗವಾಗಿ ನೀಡುವ ದಿನಬಳಕೆಯ ದಿನಸಿ ವಸ್ತುಗಳನ್ನು ಒಳಗೊಂಡ ಕಿಟ್ ಗಳನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ಚಿಂದಿ ಆಯುವ ಇಪ್ಪತ್ತೆರಡು ಕುಟುಂಬಗಳ ಮಹಿಳೆಯರಿಗೆ ಆಶ್ರಮದ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ,ಆರತಿಯೊಂದಿಗೆ ವಿತರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ನಾಲ್ಕು ದಾನಗಳಾದ ಅನ್ನದಾನ,ಪ್ರಾಣದಾನ, ಜ್ಞಾನದಾನ, ಆಧ್ಯಾತ್ಮಿಕ ವಿದ್ಯಾದಾನಗಳ ಬಗ್ಗೆ ಪ್ರವಚನ ನೀಡಿದರು.
ಸತ್ಸಂಗದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ, ಸಂನ್ಯಾಸಿ ಗೀತೆಯ ಗಾಯನ, ಪ್ರಸಾದ ವಿನಿಯೋಗ ನಡೆಯಿತು.
ವಿತರಣಾ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ರಾಘವೇಂದ್ರ, ವನಜಾಕ್ಷಿ,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಕವಿತಾ, ಬಿ.ಸುಮನಾ, ರಶ್ಮಿ,ಉಷಾ ಶ್ರೀನಿವಾಸ್, ಹೃತಿಕ್, ಯತೀಶ್ ಎಂ ಸಿದ್ದಾಪುರ, ಡಾ.ಭೂಮಿಕಾ, ಮಾನ್ಯ,ಸಂತೋಷ್, ಡಿ.ಕಾವೇರಿ, ಮಂಜುಳಮ್ಮ, ಕಿರಣ್, ಸಾಯಿಸ್ಪೂರ್ತಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.



