ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2026-27ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ 33 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ್ನು ಇದೇ ಸೆ.05ರಂದು ಬೆಳಿಗ್ಗೆ 9.30ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ನಡೆಯುವ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.
ಪ್ರಾಥಮಿಕ-ಕಿರಿಯ ವಿಭಾಗ-6, ಪ್ರಾಥಮಿಕ ಹಿರಿಯ ವಿಭಾಗ-6, ಪ್ರೌಢಶಾಲಾ ವಿಭಾಗ-6 , ಪ್ರಾಥಮಿ-ಕಿರಿಯ ವಿಭಾಗ ವಿಶೇಷ ಪ್ರಶಸ್ತಿ-1, ಪ್ರಾಥಮಿಕ-ಹಿರಿಯ ವಿಭಾಗ ವಿಶೇಷ ಶಿಕ್ಷಕ ಪ್ರಶಸ್ತಿ-7, ಪ್ರೌಢಶಾಲಾ ವಿಭಾಗ ವಿಶೇಷ ಶಿಕ್ಷಕ ಪ್ರಶಸ್ತಿ-7 ಸೇರಿದಂತೆ ಒಟ್ಟು 33 ಮಂದಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ವಿವರ ಇಂತಿದೆ. ಪ್ರಾಥಮಿಕ-ಕಿರಿಯ ವಿಭಾಗ: ಚಳ್ಳಕೆರೆ ತಾಲ್ಲೂಕು ಯಲಗಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಜಿ.ಚಂದ್ರಣ್ಣ, ಚಿತ್ರದುರ್ಗ ತಾಲ್ಲೂಕು ಚಿಕ್ಕಾಲಘಟ್ಟ ಹೊಸ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಡಿ.ಮಾದಪ್ಪ, ಹೊಳಲ್ಕೆರೆ ತಾಲ್ಲೂಕು ಗುಂಡೇರಿ ಉರ್ದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ರೆಹಮತ್ ಉನ್ನೀಸಾ, ಹೊಸದುರ್ಗ ತಾಲ್ಲೂಕು ದಳವಾಯಿಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಎ.ಎಸ್.ಗೀತಮ್ಮ, ಮೊಳಕಾಲ್ಮುರು ತಾಲ್ಲೂಕು ಬಸವೇಶ್ವರ ನಗರ (ಗೌ) ಸಹ ಶಿಕ್ಷಕ ಎ.ನೇಮಕಲ್ಲಪ್ಪ ಅವರು ಉತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ-ಹಿರಿಯ ವಿಭಾಗ: ಚಳ್ಳಕೆರೆ ತಾಲ್ಲೂಕು ರಂಗವ್ವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಜಿ.ವಿಜಯಲಕ್ಷ್ಮಿ, ಚಿತ್ರದುರ್ಗ ತಾಲ್ಲೂಕು ಯಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಿ.ಎನ್.ಮಹೇಶ್, ಹೊಳಲ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಎಂ.ವಿ.ನಾಗಶಿಲ್ಪ, ಹೊಸದುರ್ಗ ಜಿ.ಎನ್.ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಆರ್.ಗೋಪಾಲಪ್ಪ, ಹಿರಿಯೂರು ಕೆಇಬಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕಿ ಎಚ್.ಲೋಕಮ್ಮ, ಮೊಳಕಾಲ್ಮುರು ತಾಲ್ಲೂಕಿನ ರಾಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ಬುಳ್ಳಪ್ಪ ಅವರು ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗ: ಚಿತ್ರದುರ್ಗ ತಾಲ್ಲೂಕು ಯಳಗೋಡು ಸರ್ಕಾರಿಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸಹ ಶಿಕ್ಷಕ ಹೆಚ್.ಬಿ.ಗೋವಿಂದರಾಜು, ಚಿತ್ರದುರ್ಗ ತಾಲ್ಲೂಕು ಕಡಬನಕಟ್ಟೆ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಭೀಮಪ್ಪ ಮಾದರ, ಚಳ್ಳಕೆರೆ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ಕಲಾ ವಿಭಾಗದ ಸಹ ಶಿಕ್ಷಕಿ ಡಿ.ಪ್ರಮಿಳಮ್ಮ, ಹೊಳಲ್ಕೆರೆ ತಾಲ್ಲೂಕು ಶಿವಪುರ ಶ್ರೀ ನುಲಿಯ ಚಂದಯ್ಯ ಪ್ರೌಢಶಾಲೆ ಗಣಿತ ಸಹ ಶಿಕ್ಷಕ ಸಿ.ಎನ್.ಮೃತ್ಯುಂಜಯಪ್ಪ, ಹಿರಿಯೂರು ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಆಂಗ್ಲಭಾಷೆ ಶಿಕ್ಷಕ ಆರ್.ವೆಂಕಟೇಶ, ಹೊಸದುರ್ಗ ತಾಲ್ಲೂಕು ಶ್ರೀರಾಂಪುರ ಕೆಪಿಎಸ್ ಶಾಲೆಯ ವಿಜ್ಞಾನ ಸಹ ಶಿಕ್ಷಕಿ ಸಿ.ರೂಪ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ-ಕಿರಿಯ ವಿಭಾಗದ ಜಿಲ್ಲಾಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಹಿರಿಯೂರು ತಾಲ್ಲೂಕು ಬೆನಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಸ್.ಶಶಿಧರ್ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ-ಹಿರಿಯ ವಿಭಾಗದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಚಳ್ಳಕರೆ ತಾಲ್ಲೂಕು ಹೆಗ್ಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಆರ್.ಪ್ರಸನ್ನ, ಚಿತ್ರದುರ್ಗ ತಾಲ್ಲೂಕು ಉಪ್ಪನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಜಿ.ಇಂದಿರಾ, ಹೊಸದುರ್ಗ ತಾಲ್ಲೂಕು ಮರಬಗಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಚ್.ಸಿ.ಯೋಗರಾಜ, ಹಿರಿಯೂರು ತಾಲ್ಲೂಕು ಹರಿಯಬ್ಬೆ ಕೆಪಿಎಸ್ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಂ.ಮಂಜುನಾಥ, ಮೊಳಕಾಲ್ಮುರು ಶ್ರೀ ಯರಮಂಚನಾಯಕ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಾಕೀರ್ ಹುಸೇನ್, ಚಿತ್ರದುರ್ಗ ವಿ.ಪಿ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಎ.ಎನ್.ಸುರೇಶ್, ಚಳ್ಳಕೆರೆ ತಾಲ್ಲೂಕು ದುರ್ಗಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಂ.ಜಿ.ಮಂಜುನಾಥ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಚಿತ್ರದುರ್ಗ ತಾಲ್ಲೂಕು ಚೌಲಿಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆಯ ಗಣಿತ ಸಹ ಶಿಕ್ಷಕರಾದ ಬಿ ಅರುಣ, ಚಳ್ಳಕೆರೆ ತಾಲ್ಲೂಕು ಟಿ.ಎನ್.ಕೋಟೆ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗದ) ಆಂಗ್ಲಭಾಷೆ ಸಹ ಶಿಕ್ಷಕ ಎಸ್.ಮಂಜುನಾಥ, ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಕೆಪಿಎಸ್ ಪ್ರೌಢಶಾಲೆ ಗಣಿತ ಸಹ ಶಿಕ್ಷಕಿ ಸಿ.ಡಿ.ವಾಣಿ, ಚಿತ್ರದುರ್ಗ ತಾಲ್ಲೂಕು ಗುಡ್ಡದರಂಗವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಬಿ.ಓ.ಕವಿತಾ, ಹೊಳಲ್ಕೆರೆ ತಾಲ್ಲೂಕು ದುಮ್ಮಿ ಅರುಣೋದಯ ಪ್ರೌಢಶಾಲೆ ವೃತ್ತಿ ಶಿಕ್ಷಣ ಶಿಕ್ಷಕಿ ಕೆಪಿಎಂ ಉಷಾದೇವಿ, ಹೊಳಲ್ಕೆರೆ ತಾಲ್ಲೂಕು ತೇಕಲವಟ್ಟಿ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಎಚ್.ರವಿಕುಮಾರ್, ಮೊಳಕಾಲ್ಮುರು ತಾಲ್ಲೂಕು ಬಾಂಡ್ರಾವಿ ಸರ್ಕಾರಿ ಪ್ರೌಢಶಾಲೆ ಗಣಿತ ಸಹ ಶಿಕ್ಷಕ ಯು.ಬಸವರಾಜ ಅವರು ಜಿಲ್ಲಾಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ..ಆರ್.ಮಂಜುನಾಥ ತಿಳಿಸಿದ್ದಾರೆ.




