ಮಂತ್ರಾಲಯ ಪುಣ್ಯಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಅವರ ಪತ್ನಿ ಜೊತೆ ಭೇಟಿ ನೀಡಿ, ಶ್ರೀ ಗುರುರಾಘವೇಂದ್ರ ಸ್ವಾಮಿಗಳ ದಿವ್ಯ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ತುಲಾಭಾರ ಸೇವೆ ನೆರವೇರಿಸಿದರು.
ಇದೇ ಶುಭ ಸಂದರ್ಭದಲ್ಲಿ, ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಸಮ್ಮುಖದಲ್ಲಿ, ಮಂತ್ರಾಲಯದಲ್ಲಿ ಯಾತ್ರಿಕರಿಗಾಗಿ ನಿರ್ಮಿಸಲಾಗುತ್ತಿರುವ ಬಹುಪಯೋಗಿ ಸೌಲಭ್ಯ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಅಲ್ಲದೆ, ಮಂಗಳ ಜಯಶ್ರೀ ದೇಶಪಾಂಡೆ ಅವರು ನೀಡಿದ ಗೋಪುರ ಗೋಶಾಲೆಯಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲಾಯಿತು. ಪವನ ತನಯ ಸಂಕಟ ಹರಣ - ಮಂಗಳ ಮೂರತಿ ರೂಪ್ । ರಾಮ ಲಖನ ಸೀತಾ ಸಹಿತ - ಹೃದಯ ಬಸಹು ಸುರಭೂಪ್ ॥
ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸುಗೈದ ಪವಿತ್ರ ಭೂಮಿ, ರಾಯಚೂರು ಜಿಲ್ಲೆಯ ಗಾಣದಾಳದಲ್ಲಿಂದು ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಈ ಪುಣ್ಯಕ್ಷೇತ್ರದಲ್ಲಿ ನಾಡಿನ ಸಮಸ್ತ ಜನತೆಯ ಕಲ್ಯಾಣಕ್ಕಾಗಿ ಹಾಗೂ ಸರ್ವರಿಗೂ ಉತ್ತಮ ಆರೋಗ್ಯ, ಸುಖ-ಸಮೃದ್ಧಿ ನೀಡುವಂತೆ ಪ್ರಾರ್ಥಿಸಿದ ಅವರು ಪವನಸುತ ಹನುಮಂತನ ಕೃಪೆ ಎಲ್ಲರ ಮೇಲಿರಲಿ ಎಂದು ಬೇಡಿಕೊಂಡಿದ್ದಾರೆ.


