Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎಸ್.ಐ.ಆರ್ ಬಗ್ಗೆ ಗೊಂದಲ, ಭಯ ಬೇಡ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನಲ್ಲಿ ಜೂನ್ 20 ರಿಂದ ಎಸ್‌ಐಆರ್‌ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ. ತಾಲ್ಲೂಕಿನಲ್ಲಿ 2,23,457 ಮಂದಿ ಮತದಾರರಿದ್ದಾರೆ. ಈ ಪೈಕಿ ಯಾರೆಲ್ಲಾ ಮತದಾನಕ್ಕೆ ಅರ್ಹರು ಎಂಬುದನ್ನು ಎಸ್‌ಐಆರ್‌ನಿರ್ಧರಿಸಲಿದೆ. ಈಗಾಗಲೇ ಶೇ.90 ರಷ್ಟು ಮತದಾರರ ಮ್ಯಾಪಿಂಗ್‌ಕಾರ್ಯ ಪೂರ್ಣಗೊಂಡಿದೆ. 276 ಮಂದಿ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ (ಎನುಮೆರೇಷನ್‌ಫಾರ್ಮ್‌) ವಿತರಣೆ ಹಾಗೂ ಸಂಗ್ರಹಣೆ ಮಾಡಲಿದ್ದಾರೆ ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ
, ಚುನಾವಣಾಧಿಕಾರಿಯಾದ ಟಿ.ಆರ್ ಮಂಜುನಾಥ ತಿಳಿಸಿದರು.

ಎಸ್‌ಐಆರ್‌ಕುರಿತು ಬುಧವಾರ ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಎಸ್ಐಆರ್ ಬಗ್ಗೆ ಜನರಲ್ಲಿ ಯಾವುದೇ ಗೊಂದಲ ಭಯಪಡುವ ಅವಶ್ಯಕತೆ ಇಲ್ಲ. ಮೃತರ ಹೆಸರು ತೆಗೆಯುವುದು ಸೇರಿದಂತೆ ಯಾರೊಬ್ಬರು ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲಾಗುವುದು. ಸಿಬ್ಬಂದಿಗೆ ಜೂನ್‌20 ರಿಂದ 29 ರವರೆಗೆ ಎಸ್ ಐ ಆರ್ ಗೆ ಸಿದ್ಧತೆ, ಬಿ ಎಲ್ ಒ ಗಳ ತರಬೇತಿ ಹಾಗೂ ಮುದ್ರಣ ಕಾರ್ಯ, ಜೂನ್‌30 ರಿಂದ ಜುಲೈ 29 ರವರೆಗೆ ಬಿಎಲ್‌ಒಗಳಿಂದ ಮನೆ ಮನೆ ಭೇಟಿ, ಜುಲೈ 29 ರೊಳಗೆ ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ಕಾರ್ಯ ನಡೆಯಲಿದೆ‌ಎಂದು ತಿಳಿಸಿದರು.

Advertisement

ಎಸ್‌ಐಆರ್‌ಪ್ರಕ್ರಿಯೆ, ನಮೂನೆಗಳು ಹಾಗೂ ವೇಳಾಪಟ್ಟಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳ ಅಧಿಕೃತ ಜಾಲತಾಣಗಳು, ಮುಖ್ಯ ಚುನಾವಣಾಧಿಕಾರಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಅಧಿಕೃತ ಜಾಲತಾಣಗಳಲ್ಲಿ ಹೆಚ್ಚಿನ ಮಾಹಿತಿ ಪ್ರಕಟಿಸಲಾಗುವುದು. ಮತದಾರರ ಅನುಕೂಲಕ್ಕಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್‌ಮಟ್ಟದಲ್ಲಿ ಮತದಾರರ ಸಹಾಯ ಕೇಂದ್ರ ಸ್ಥಾಪಿಸಲಾಗುತ್ತದೆ. ಅರ್ಹ ಮತದಾರರು ಕೈ ಬಿಟ್ಟು ಹೋಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು‌ಎಂದು ವಿವರಿಸಿದರು.

ಎನುಮೆರೇಷನ್‌ಫಾರ್ಮ್‌
ಎಸ್‌ಐಆರ್‌ಪ್ರಕ್ರಿಯೆಯಲ್ಲಿ ಗಣತಿ ನಮೂನೆಗಳನ್ನು (ಎನುಮೆರೇಷನ್‌ಫಾರ್ಮ್‌) ಪ್ರತಿ ಮತದಾರರಿಗೂ ದ್ವಿಪತ್ರಿಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ತಲುಪಿಸುತ್ತಾರೆ. ಬಿಎಲ್‌ಒ ಹಸ್ತಾಕ್ಷರ ಇರುವ ಒಂದು ಪ್ರತಿಯನ್ನು ಮತದಾರರು ತಮ್ಮ ಬಳಿ ಇಟ್ಟುಕೊಂಡು
, ಮತ್ತೊಂದು ಪ್ರತಿಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಬಿಎಲ್‌ಒಗಳಿಗೆ ಹಿಂದಿರುಗಿಸಬೇಕು. ಮತದಾರರ ಪಟ್ಟಿಯಲ್ಲಿರುವಂತೆ ಭಾವಚಿತ್ರ, ಹೆಸರು, ಮತಗಟ್ಟೆ ಸಂಖ್ಯೆ, ವಿಧಾನಸಭಾ ಕ್ಷೇತ್ರದ ಹೆಸರು ಈ ಅರ್ಜಿಯಲ್ಲಿ ಮುದ್ರಣವಾಗಿರುತ್ತದೆ. ಪ್ರತಿ ಮತದಾರರಿಗೂ ನೀಡುವ ಅರ್ಜಿಯಲ್ಲಿ ಕ್ಯೂಆರ್‌ಕೋಡ್‌ವಿಭಿನ್ನವಾಗಿರುತ್ತದೆ. ಬಿಎಲ್‌ಒ ಆ್ಯಪ್‌ಮೂಲಕ ಕ್ಯೂಆರ್‌ಕೋಡ್‌ಸ್ಕ್ಯಾ‌ನ್‌ಮಾಡಿದರೆ ಮತದಾರರ ಮಾಹಿತಿ ಲಭ್ಯವಾಗುತ್ತದೆ. ಒಂದು ವೇಳೆ ಮತದಾರರ ಭಾವಚಿತ್ರ ಹಳೆಯದಾಗಿದ್ದರೆ ಎನುಮೆರೇಷನ್‌ಅರ್ಜಿಯೊಂದಿಗೆ ಹೊಸ ಭಾವಚಿತ್ರ ನೀಡಬಹುದು. ಇಲ್ಲದಿದ್ದರೆ ಬಿಎಲ್‌ಒಗಳೇ ಆ್ಯಪ್‌ಮೂಲಕ ಭಾವಚಿತ್ರ ಪಡೆದುಕೊಳ್ಳುತ್ತಾರೆ. 2002ರ ಮತದಾರರ ಪಟ್ಟಿಯಲ್ಲಿತಮ್ಮ ಹೆಸರು ಇದ್ದರೆ ಅದರ ವಿವರವನ್ನು ನೀಡಬೇಕು. ಇಲ್ಲದಿದ್ದರೆ ತಮ್ಮ ಸಂಬಂಧಿಯ (ತಂದೆ, ತಾತ ಇತ್ಯಾದಿ) ಮಾಹಿತಿ ಒದಗಿಸಬೇಕು ಎಂದರು.

 ಅರ್ಜಿಯಲ್ಲಿ ಮತದಾರರು ಸಹಿ ಅಥವಾ ಎಡಗೈ ಹೆಬ್ಬೆರಳಿನ ಗುರುತು ಹಾಕಬಹುದು. ಒಂದು ವೇಳೆ ಮತದಾರರು ಆ ಸಂದರ್ಭದಲ್ಲಿ ಲಭ್ಯವಿಲ್ಲದಿದ್ದರೆ ಕುಟುಂಬದಲ್ಲಿನ ವಯಸ್ಕ ಸದಸ್ಯರು ಸಹಿ ಮಾಡಿ ಬಿಎಲ್‌ಒಗಳಿಗೆ ಅರ್ಜಿ ಹಸ್ತಾಂತರಿಸಬಹುದು. ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಅಕ್ಟೋಬರ್ 7 ರಂದು ಪ್ರಕಟ ಮಾಡಲಾಗುವುದು ಎಂದು ತಿಳಿಸಿದರು.

ಒಟ್ಟು ಮತದಾರರ ವಿವರಗಳು (2/6/2026ರಂತೆ ಮತದಾರರ ಪಟ್ಟಿಯ ವಿವರ) ಒಟ್ಟು ಮತಗಟ್ಟೆ - 276
ಗಂಡು – 109627, ಹೆಣ್ಣು – 113828, ಇತರೆ -   2, ಒಟ್ಟು - 2,23,457

ಒಟ್ಟು ಮತಗಟ್ಟೆಗಳು & ಬಿ.ಎಲ್.ಒ ವಿವರಗಳು
ಹೋಬಳಿ ಮತಗಟ್ಟೆಗಳು                 ಬಿಎಲ್ಒಗಳು
ಸಾಸಲು -  34                               34
ದೊಡ್ಡಬೆಳವಂಗಲ-46                    46
ಕಸಬಾ -77                                   77
ಮಧುರೆ -37                                  39
ನಗರಸಭೆ -79                                 79
ಒಟ್ಟು 276 ಮತಗಟ್ಟೆಗಳು 276 ಬಿ.ಎಲ್.ಒ.ಗಳು
ಈ ವೇಳೆ ಸಹಾಯಕ ಚುನಾವಣಾಧಿಕಾರಿ
, ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳ, ಜಿಲ್ಲಾ ಬಿಎಲ್ಓಗಳ ತರಬೇತಿದಾರ ಶ್ರೀನಿವಾಸ, ಚುನಾವಣಾ ಶಿರಸ್ತೇದಾರ ಶಿವಮೂರ್ತಿ, ರವಿಕುಮಾರ್ ಮತ್ತಿತ್ತರರು ಇದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು