Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೈ ಹಿಂದ್ ಕಟ್ಟೆಯಲ್ಲಿ ಮಂಗಲ್ ಪಾಂಡೆ ಜನ್ಮದಿನಾಚರಣೆ; ದೇಶಭಕ್ತಿ ಪುಸ್ತಕಗಳ ಪ್ರದರ್ಶನ

Advertisement
Advertisement

ಚಂದ್ರವಳ್ಳಿ ನ್ಯೂಸ್ ಚಾಮರಾಜನಗರ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿ ಹಾಗೂ ವೀರ ತ್ಯಾಗಿ ಮಂಗಲ್ ಪಾಂಡೆಯವರ ಧೈರ್ಯ, ಸಾಹಸ, ರಾಷ್ಟ್ರೀಯತೆ, ಸ್ವಾಭಿಮಾನ ಹಾಗೂ ದೇಶಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟ ಆದರ್ಶಗಳನ್ನು ಪ್ರತಿಯೊಬ್ಬ ಭಾರತೀಯನೂ ಸದಾ ನೆನಸಿಕೊಳ್ಳಬೇಕು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

​ನಗರದ ಜೈ ಹಿಂದ್ ಕಟ್ಟೆಯಲ್ಲಿ 'ಜೈ ಹಿಂದ್ ಪ್ರತಿಷ್ಠಾನ' ಹಾಗೂ 'ಋಗ್ವೇದಿ ಯೂಥ್ ಕ್ಲಬ್' ವತಿಯಿಂದ ಹಮ್ಮಿಕೊಂಡಿದ್ದ ಮಂಗಳ ಪಾಂಡೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

​ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ವೀರ ಯೋಧ

​"ಭಾರತೀಯ ಸ್ವಾತಂತ್ರ್ಯ ಹೋರಾಟವು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಆರಂಭವಾಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತೀಯ ಸೈನಿಕರಿಗೆ ಧರ್ಮಕ್ಕೆ ವಿರುದ್ಧವಾದ 'ಎನ್‌ಫೀಲ್ಡ್ ಬಂದೂಕು' ಬಳಸಲು ಆದೇಶಿಸಿದಾಗ, ಅದನ್ನು ವಿರೋಧಿಸಿದ 34ನೇ ಪದಾತಿ ದಳದ ವೀರಯೋಧ ಮಂಗಳ ಪಾಂಡೆ ಬ್ರಿಟಿಷ್ ಅಧಿಕಾರಿಯನ್ನು ಕೊಂದು ಪ್ರತಿಭಟಿಸಿದರು. ಹಸು ಮತ್ತು ಹಂದಿಯ ಕೊಬ್ಬನ್ನು ಸವರಲಾಗಿದೆ ಎಂಬ ವಿಚಾರದಲ್ಲಿ ತೀವ್ರ ಹೋರಾಟ ನಡೆಸಿ ಬ್ರಿಟಿಷರ ಬಂಧನಕ್ಕೊಳಗಾದ ಇವರನ್ನು 1857ರಲ್ಲಿ ಮರಣದಂಡನೆಗೆ ಒಳಪಡಿಸಲಾಯಿತು," ಎಂದು ಋಗ್ವೇದಿ ಇತಿಹಾಸವನ್ನು ಸ್ಮರಿಸಿದರು.

​ಉತ್ತರ ಪ್ರದೇಶದ ನಾಗವ ಗ್ರಾಮದಲ್ಲಿ ಜನಿಸಿ, ತಮ್ಮ 22ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಂಗಳ ಪಾಂಡೆ ಅಂತಹ ಲಕ್ಷಾಂತರ ದೇಶಪ್ರೇಮಿಗಳ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅವರೆಲ್ಲರ ಆತ್ಮಕ್ಕೆ ಶಾಂತಿ ಕೋರುವ ಜೊತೆಗೆ ಪ್ರತಿಯೊಬ್ಬರಲ್ಲೂ ರಾಷ್ಟ್ರಕ್ಕಾಗಿ ಅರ್ಪಿಸಿಕೊಳ್ಳುವ ಭಾವನೆ ಮತ್ತು ದೇಶಸೇವೆಯ ಗುಣ ಮೂಡಲಿ ಎಂದು ಅವರು ಕರೆ ನೀಡಿದರು.

​ಮೂರು ಸಾವಿರಕ್ಕೂ ಹೆಚ್ಚು ರಾಷ್ಟ್ರೀಯ ಚಿಂತನಾ ಕಾರ್ಯಕ್ರಮ

​ಕಾರ್ಯಕ್ರಮದಲ್ಲಿ ದೇಶಭಕ್ತಿಯ ಸ್ಫೂರ್ತಿ ತುಂಬುವ ಹಲವಾರು ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ 'ಓಂ ಶಾಂತಿ ನ್ಯೂಸ್'ನ ಬಿ.ಕೆ. ಆರಾಧ್ಯ ಅವರು, "ಜೈ ಹಿಂದ್ ಕಟ್ಟೆಯಲ್ಲಿ ಸಾವಿರಾರು ದೇಶಭಕ್ತರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ರಾಷ್ಟ್ರೀಯತೆ, ನಾಡು-ನುಡಿ, ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರವೀರರ ಚಿಂತನೆಗಳನ್ನು ಜಾಗೃತಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಯಶಸ್ವಿ ಕಾರ್ಯಕ್ರಮಗಳನ್ನು ಸಂಘಟಿಸಿರುವ ಋಗ್ವೇದಿಯವರ ಸಾಂಸ್ಕೃತಿಕ ಜಾಗೃತಿಯ ಕಾರ್ಯಗಳು ಹೀಗೆಯೇ ಮುಂದುವರಿಯಲಿ," ಎಂದು ಹಾರೈಸಿದರು.

​ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀನಿವಾಸ ಪ್ರಸಾದ್, ಸಚ್ಚಿದಾನಂದ, ಹಾಗೂ ನಂಜೆ ದೇವನಪುರ ಚಿಕ್ಕಸಿದ್ದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.