Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಜ್ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿದ ಡಾ.ಅರುಣಕುಮಾರಿ

Advertisement
 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹಜ್ ಯಾತ್ರೆಗೆ ಹೋಗುವವರು ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಶುದ್ದವಾದ ನೀರು
, ಆಹಾರವನ್ನು ಸೇವಿಸಿ ಸುರಕ್ಷಿತವಾಗಿ ಹಿಂದಿರುಗುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ ಮನವಿ ಮಾಡಿದರು.

ಕರ್ನಾಟಕ ಸರ್ಕಾರ ಹಾಗೂ ಹಜ್ ಸಮಿತಿಯಿಂದ ಜಿಲ್ಲಾಸ್ಪತ್ರೆಯ ಡಾ.ಬಿ.ಸಿ.ರಾಯ್ ಸಭಾಂಗಣದಲ್ಲಿ ಶುಕ್ರವಾರ ಹಜ್ ಯಾತ್ರಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹಜ್‌ನಲ್ಲಿ ನೂಕು ನುಗ್ಗಲಿರುತ್ತದೆ. ಅವಸರ ಮಾಡಿಕೊಳ್ಳಬೇಡಿ. ತಾಳ್ಮೆಯಿಂದ ಯಾತ್ರೆಯನ್ನು ಮುಗಿಸಿ. ಅಲ್ಲಿಯೂ ಆರೋಗ್ಯ ತಪಾಸಣೆಗೆ ಕ್ಯಾಂಪ್‌ಗಳಿರುತ್ತವೆ. ಸಕ್ಕರೆ ಕಾಯಿಲೆ, ರಕ್ತದೊತ್ತಡವಿರುವವರು ಸಮಯಕ್ಕೆ ಸರಿಯಾಗಿ ಮಾತ್ರೆಗಳನ್ನು ಸೇವಿಸಿ ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರ ವಹಿಸುವಂತೆ ಡಾ.ರವೀಂದ್ರ ಸೂಚಿಸಿದರು.

ಆರ್.ಸಿ.ಹೆಚ್.ಅಧಿಕಾರಿ ಡಾ.ಅಭಿನವ ಮಾತನಾಡಿ ದೇವರ ಕೆಲಸವೆಂದರೆ ಪುಣ್ಯದ ಕೆಲಸವಿದ್ದಂತೆ ಪ್ರತಿ ವರ್ಷವೂ ಹಜ್ ಯಾತ್ರಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಲಸಿಕೆಗಳನ್ನು ನೀಡಲಾಗುವುದು. ಪೋಲಿಯೋ ಮಾದರಿ ಒಂದು ಲಸಿಕೆ, ನಿಮೋನಿಯಾ ಹಾಗೂ ಮೆದುಳು ಜ್ವರ ಹರಡದಂತೆ ಲಸಿಕೆ ಕೊಡಲಾಗುತ್ತದೆ. ಎರಡು ಇಂಜೆಕ್ಷನ್ ಒಂದು ಡ್ರಾಪ್ಸ್ ನೀಡಲಾಗುವುದು. ಒಟ್ಟು ಮೂರು ಹಂತದಲ್ಲಿ ಲಸಿಕೆ ಕೊಟ್ಟು ಹಜ್‌ಗೆ ಯಾತ್ರಾರ್ಥಿಗಳನ್ನು ಕಳಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

ಹಜ್ ಕಮಿಟಿ ಕಾರ್ಯದರ್ಶಿ ಹಾಜಿ ಆರ್.ದಾದಾಪೀರ್ ಮಾತನಾಡಿ ಹಜ್ ಯಾತ್ರಾರ್ಥಿಗಳ ಸೇವೆ ಮಾಡುವುದೆಂದರೆ ಪುಣ್ಯದ ಕೆಲಸ. ಲಾಟರಿ ಮೂಲಕ ಆಯ್ಕೆ ಮಾಡಿ ಹಜ್‌ಗೆ ಯಾತ್ರಾರ್ಥಿಗಳನ್ನು ಕಳಿಸಲಾಗುವುದು. ಸೃಷ್ಠಿಕರ್ತ ಪರಮಾತ್ಮನ ಬಳಿ ಹೋಗುವ ನೀವುಗಳು ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಕ್ಷೇಮದಿಂದ ಹಿಂದಿರುಗಿ ಎಂದು ಹಾರೈಸಿದರು.

ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ. ಕೊಲ್ಲಿ ರಾಷ್ಟ್ರಗಳ ನಡುವೆ ಯುದ್ದವಾಗುತ್ತಿರುವುದರಿಂದ ಪ್ರಪಂಚದ ಮನುಕುಲದ ಒಳಿತಿಗಾಗಿ ಕೂಡಲೆ ಯುದ್ದ ನಿಲ್ಲಿಸುವಂತೆ ಹಜ್‌ನಲ್ಲಿ ಪ್ರಾರ್ಥಿಸಿ. ವಿಧಿ ವಿಧಾನಗಳ ಪ್ರಕಾರ ಯಾತ್ರೆಗೆ ಯಾವುದೇ ತೊಂದರೆಯಿಲ್ಲದಂತೆ ಹಿಂದಿರುಗಿ ಎಂದು ಯಾತ್ರಾರ್ಥಿಗಳಲ್ಲಿ ವಿನಂತಿಸಿದರು.

ಡಾ.ಸತೀಶ್, ಡಾ.ನಿಖಿಲ್, ಡಾ.ಅರುಣಕುಮಾರಿ ಇವರುಗಳು ವೇದಿಕೆಯಲ್ಲಿದ್ದರು. ಹಜ್ ಕಮಿಟಿಯ ಆದಿಲ್, ಸಾಧಿಕ್, ಮುಜಾಮಿಲ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು. ೧೦೮ ಮಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ