Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ : 
ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೫ ನೇ ಜಯಂತಿ ಆಚರಿಸಲಾಯಿತು.

ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‌ವುಲ್ಲಾರವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಸಂವಿಧಾನವನ್ನು ಮೊದಲು ಎಲ್ಲರೂ ತಿಳಿದುಕೊಂಡಾಗ ಕಾನೂನಿನ ಅರಿವು ಮೂಡುತ್ತದೆ. ರಾಜ ಮಹಾರಾಜರು, ಪುರಾತನ ಕಾಲದಿಂದಲೂ ಕಾನೂನಿದೆ. ಸಮಾನತೆ, ಹಕ್ಕು ಮತ್ತು ಕರ್ತವ್ಯವನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಕೊಳಗೇರಿ ನಿವಾಸಿಗಳು ಬಡತನವನ್ನು ಮುಂದಿಟ್ಟುಕೊಂಡು ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು. ಸಂವಿಧಾನದಡಿ ಸಿಗುವ ಹಕ್ಕುಗಳನ್ನು ಬಳಸಿಕೊಳ್ಳಬೇಕಾದರೆ ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿಸಿದರು.

ಬಾಲ್ಯದಲ್ಲಿಯೇ ಸಾಕಷ್ಟು ಹಿಂಸೆ, ನೋವು, ಅವಮಾನ, ಅಸ್ಪೃಶ್ಯತೆಯನ್ನು ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ದ ಧರ್ಮಕ್ಕೆ

ಸೇರ್ಪಡೆಯಾದರು. ಅತ್ಯಂತ ಬಲಿಷ್ಟವಾದ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ನರಕವೆಂದು ಹೇಳಿ ಅಮಾನಿಸಿರುವುದನ್ನು ಯಾರು ಖಂಡಿಸುತ್ತಿಲ್ಲದಿರುವುದು ನೋವಿನ ಸಂಗತಿ. ಸಾವಿರಾರು ಜಾತಿ ಧರ್ಮಗಳಿರುವ ಭಾರತದಲ್ಲಿ ಎಲ್ಲರೂ ಸಹೋದರತ್ವದಿಂದ ಬದುಕುತ್ತಿದ್ದಾರೆ. ನಮ್ಮ ದೇಶದ ಬಗ್ಗೆ ಹಗುರುವಾಗಿ ಮಾತನಾಡುವ ಟ್ರಂಪ್‌ಗೆ ಪ್ರಧಾನಿ ಮೋದಿರವರು ತಕ್ಕ ಉತ್ತರ ಕೊಡಬೇಕೆಂದು ಮನವಿ ಮಾಡಿದರು.

ಕೆಕೆಎನ್‌ಎಸ್‌ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಪ್ರತಿಯೊಬ್ಬ ಪ್ರಜೆಗೂ ಸಮಾನತೆಯನ್ನು ನೀಡಿದ್ದಾರೆ. ಸಂವಿಧಾನದಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಕೊಳಗೇರಿ ನಿವಾಸಿಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿದಾಗ ಮಾತ್ರ ಸಂವಿಧಾನದ ಆಶಯಗಳು ಈಡೇರುತ್ತವೆಂದರು.

ಎನ್.ರಂಗಸ್ವಾಮಿ, ಶಬಿನಾಜಾನ್, ಲೀಲಾವತಿ, ಚಂದ್ರಮ್ಮ, ರಜಿಯಾಬಿ, ಸರೋಜಮ್ಮ, ಗಂಗಮ್ಮ ಇನ್ನು ಮುಂತಾದವರು ಅಂಬೇಡ್ಕರ್ ಜಯಂತಿಯಲ್ಲಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉಚಿತ ಅರೋಗ್ಯ ತಪಾಸಣಾ ಶಿಬಿರಟಾಟಾ ಏಸ್ ವಾಹನಕ್ಕೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಸಂಭ್ರಮದ ದೊಡ್ಡ ಜಾತ್ರೆ: ಹೊಸೂರಾಂಭಾ ದೇವಿಗೆ ಮಡಿಲು ಅಕ್ಕಿ ಸಮರ್ಪಣೆಗಮಕ ಕಲೆಯುತ್ತ ಚಿಕ್ಕ ವಯಸ್ಸಿನ ಪ್ರತಿಭೆಗಳನ್ನು ಆಕರ್ಷಿಸಿಮಧುರವಾದ ಗೀತೆಗಳ ಕೇಳುವಿಕೆಯಿಂದ ಸಂತೋಷ ಹೆಚ್ಚಾಗುವುದು- ಇಂದುಶೇಖರ್ಪದ್ಮಶ್ರೀ ಪುರಸ್ಕೃತ ಹಿರಿಯ ಪೊಟೋ ಜರ್ನಲಿಸ್ಟ್ ರಘು ರಾಯ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪಬಸವ-ಶಂಕರ-ರಾಮಾನುಜಾರ್ಚಾರ್ಯರ ಶಿಷ್ಯರ ಗುರುಭಕ್ತಿ ಅಸಾಧಾರಣವಾದದ್ದು:-ಮಾತಾಜೀ ತ್ಯಾಗಮಯೀಆಟೋಮೊಬೈಲ್ ಪಿಎಲ್‌ಐ ಯೋಜನೆ: 39,081 ಕೋಟಿ ಹೂಡಿಕೆ, 61,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಮಹಿಳಾ ಸಬಲೀಕರಣವೇ ಸಮಾಜದ ನಿಜವಾದ ಪ್ರಗತಿ - ಡಾ. ಪ್ರಭಾ ಮಲ್ಲಿಕಾರ್ಜುನ್ಮಹಿಳೆಯರೊಂದಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂವಾದ: ಆಟೋಟಗಳಲ್ಲಿ ಭಾಗವಹಿಸಿ ಸಂಭ್ರಮ