LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ: ಅರ್ಜಿ ಆಹ್ವಾನ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2020-21
ರಿಂದ 2023-24ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ವಿವಿಧ ಘಟಕಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 30 ಅರ್ಜಿ ಸಲ್ಲಿಸಲು ಕೊನೆಯ ದಿನ.


ಈ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ರಷ್ಟು ಹಾಗೂ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಜೂನ್ 30 ರೊಳಗಾಗಿ ತಮ್ಮ ವ್ಯಾಪ್ತಿಯ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಲು ಕೋರಿದೆ.


ಯೋಜನೆಯಡಿ ಇನ್ಸುಲೇಟೆಡ್ ವಾಹನಗಳು (ಘಟಕ ವೆಚ್ಚ ರೂ. 20 ಲಕ್ಷ, ಗುರಿ-1, ಪರಿಶಿಷ್ಟ ವರ್ಗ), ಐಸ್ ಬಾಕ್ಸ್ ಒಳಗೊಂಡ ಮೋಟಾರ್ ಸೈಕಲ್ (ಘಟಕ ವೆಚ್ಚ ರೂ. 0.75 ಲಕ್ಷ, ಗುರಿ-3, ಸಾಮಾನ್ಯ ವರ್ಗ), ಮೀನು ಮಾರಾಟಕ್ಕಾಗಿ ಐಸ್ ಬಾಕ್ಸ್ ಒಳಗೊಂಡ ತ್ರಿಚಕ್ರ ವಾಹನ/ಇ-ರಿಕ್ಷಾ (ಘಟಕ ವೆಚ್ಚ ರೂ. 3 ಲಕ್ಷ, ಗುರಿ-1, ಸಾಮಾನ್ಯ ವರ್ಗ) ಹಾಗೂ ಸಜೀವ ಮೀನು ಮಾರಾಟ ಕೇಂದ್ರಗಳ ಸ್ಥಾಪನೆಗೆ (ಘಟಕ ವೆಚ್ಚ ರೂ. 20 ಲಕ್ಷ, ಗುರಿ-1, ಪರಿಶಿಷ್ಟ ವರ್ಗ) ಅವಕಾಶ ಕಲ್ಪಿಸಲಾಗಿದೆ.


ಹೆಚ್ಚಿನ ವಿವರಗಳಿಗಾಗಿ ತಾಲ್ಲೂಕುಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ. ಚಿತ್ರದುರ್ಗ ಮತ್ತು ಮೊಳಕಾಲ್ಮುರು ಮೀನುಗಾರಿಕೆ  ಸಹಾಯಕ ನಿರ್ದೇಶಕ ತುಳಸೀದಾಸ್-9342187356, ಹಿರಿಯೂರು ಮೀನುಗಾರಿಕೆ ಸಹಾಯಕ ನಿರ್ದೇಶಕ ಎನ್.ಮಂಜುನಾಥ್-7022933310, ಚಳ್ಳಕೆರೆ ಮೀನುಗಾರಿಕೆ ಸಹಾಯಕ ನಿರ್ದೇಶಕಿ ದೀಪಾಲಿ-9740900866 ಹಾಗೂ ಹೊಸದುರ್ಗ ಮತ್ತು ಹೊಳಲ್ಕೆರೆ ಮೀನುಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶ್ವರ-9945004235 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾತ್ರೆ ಮರುಳೋ ಜನ ಮರುಳೋ ಯಾವುದಯ್ಯ ಹುರಳು?ಐಶ್ವರ್ಯ ಕರಗುತ್ತದೆ, ಆದರ್ಶ ಉಳಿಯುತ್ತದೆಭೋವಿ ಸಮುದಾಯದ ಪ್ರಮುಖ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಇಮ್ಮಡಿ ಸ್ವಾಮೀಜಿ ಮನವಿಚಿತ್ರದುರ್ಗದಲ್ಲಿ ಜುಲೈ 29ಕ್ಕೆ ಗುರುಪೂರ್ಣಿಮೆ ಪ್ರಯುಕ್ತ 'ಗುರುವಂದನೆ'ಜೋಗಿ ಸಮುದಾಯ ಭವನ ನಿರ್ಮಾಣಕ್ಕೆ ₹2 ಕೋಟಿ ಅನುದಾನ ಹಾಗೂ ಹಕ್ಕುಪತ್ರ ವಿತರಣೆಗೆ ಮನವಿ2028ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ರಾಜಕೀಯ ಸಂನ್ಯಾಸದ ಸುಳಿವು ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯವಿದ್ಯಾರ್ಥಿ ಹೋರಾಟದ ನೆಪದಲ್ಲಿ ಬೆಂಕಿ ಹಚ್ಚಲು ಯತ್ನಿಸಿದ 'ಮುಲ್ಲಾ'ನ ಕೃತ್ಯ ಖಂಡಿಸಿದ್ದೇನೆಯೇ ಹೊರತು ಮುಸ್ಲಿಂ ಸಮುದಾಯವನ್ನಲ್ಲ: ಸಿ.ಟಿ. ರವಿ ಸ್ಪಷ್ಟನೆ ಕಾರ್ಯಕರ್ತರೊಂದಿಗೆ 'ಮನ್ ಕೀ ಬಾತ್' ವೀಕ್ಷಿಸಿದ ಬಿ.ವೈ. ವಿಜಯೇಂದ್ರ ದೋಷರಹಿತ ಮತದಾರರ ಪಟ್ಟಿಯೇ ಸದೃಢ ಪ್ರಜಾಪ್ರಭುತ್ವದ ಅಡಿಪಾಯ: ಆರ್. ಅಶೋಕ್ ಮನೆ ಮನೆ ಅಭಿಯಾನಕೇಂದ್ರ ಸಚಿವರು ರಾಜೀನಾಮೆ ನೀಡಿದ್ದಾರೆ; ದುರಂತಗಳಿಗೆ ಯಾರು ಹೊಣೆ? - ಆರ್. ಅಶೋಕ್ ಪ್ರಶ್ನೆ