Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತೀಯ ಸೇನೆಯ ಯುವ ವೈದ್ಯ ಡಾ.ಕ್ಯಾ.ಸಂತೋಷಕುಮಾರ್ ಪರ್ವತಾರೋಹಣ

Advertisement
ಚಂದ್ರವಳ್ಳಿ ನ್ಯೂಸ್, ಕೊಟ್ಟೂರು:
ಅರ್ಜೆಂಟೀನಾ ದೇಶದ ಅತಿ ಎತ್ತರದ ಮೌಂಟ್ ಅಕಾಂಕಾಗುವಾ ಪರ್ವತವನ್ನ 8 ತಾಸಿನ ಒಳಗೆ ಹತ್ತುವ ಮೂಲಕ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ನಾಗರಕಟ್ಟೆ ಗ್ರಾಮದ ಯುವ ವೈದ್ಯ ಡಾ. ಕ್ಯಾಪ್ಟನ್ ಸಂತೋಷ್ ಸಾಧನೆ ಮಾಡಿದ್ದಾರೆ‌.

ಸಂತೋಷ್ ಕುಮಾರ್ ಮತ್ತವರ ತಂಡದೊಂದಿಗಿದ್ದ ಐದು ಜನರು 6,961 ಮೀಟರ್ ಎತ್ತರದ ಪರ್ವತವನ್ನು ಆರೋಹಗೈದಿದ್ದಾರೆ. ಪರ್ವತಾರೋಹಣ ಮಾಡಿದ ತಂಡಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಭಕೋರಿದ್ದಾರೆ.

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಸಂತೋಷ್ ಕುಮಾರ್ 2024ರಲ್ಲಿ ಪರ್ವತಾರೋಹಣಗಳೊಂದಿಗೆ 6010 ರಿಂದ 6330 ಮೀಟರ್ ಎತ್ತರದ ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯ ಪರ್ವತ ಏರಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ನಲ್ಲಿ ದಾಖಲು ಮಾಡಿದ್ರು.

ಡಾ.ಕ್ಯಾ. ಸಂತೋಷ್ ಕುಮಾರ್ 2020ರಲ್ಲಿ ರಷ್ಯಾದಲ್ಲಿ ವೈದ್ಯಕೀಯ ವಿದ್ಯಾರ್ಜನೆಗೈದಿದ್ದಾರೆ. ನಂತರ ಕೊಟ್ಟೂರಿನಲ್ಲಿ ಕೆಲವು ದಿನಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ ದೇಶ ಸೇವೆ ಮಾಡಬೇಕು ಎಂಬ ಹೆಬ್ಬಯಕೆ ಹೊಂದಿ ಶಶಸ್ತ್ರ ಪಡೆಗಳ ವೈದ್ಯಕೀಯ ಸೇವೆ ಪರೀಕ್ಷೆ ಬರೆದು ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂತೋಷ್ ಕುಮಾರ್ ಕೊಟ್ಟೂರು ತಾಲೂಕಿನ ಚಿಕ್ಕಜೋಗಿಹಳ್ಳಿ ನವೋದಯದ ವಿದ್ಯಾರ್ಥಿ. ವಿದ್ಯಾರ್ಥಿ ದಿನಗಳಲ್ಲೇ 21 ದಿನಗಳ ಕಾಲ ಜಪಾನ್ ದೇಶಕ್ಕೆ ತೆರಳಿ ಶೈಕ್ಷಣಿಕ ಪ್ರವಾಸವನ್ನ ಸರ್ಕಾರದ ವತಿಯಿಂದ ಮಾಡಿ ಬಂದಿದ್ದಾರೆ. ಸಂತೋಷ್ ಅವರ ಈ ಸಾಧನೆ ಇಂದಿನ ಯುವ ಸಮುದಾಯಕ್ಕೆ ಸ್ಪೂರ್ತಿ ಆಗಿದೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ