Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜಕೀಯ ಕಾರಣಕ್ಕೆ ಭೇಟಿ ಮಾಡಿಲ್ಲ-ಡಾ.ಪರಮೇಶ್ವರ್

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯ ಕಾರಣಕ್ಕಾಗಿ ಭೇಟಿ ಮಾಡಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು. ‌

ಬೆಂಗಳೂರಿನಲ್ಲಿ ‌ ಕುಮಾರಸ್ವಾಮಿ ಭೇಟಿಯಾದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಹೊಸ ಕೈಗಾರಿಕೆಗಳ ಸ್ಥಾಪನೆ ಸಂಬಂಧ ಭೇಟಿ ಮಾಡಿದ್ದೆ. ನಾವು ಹಿಂದೆ ಒಟ್ಟಾಗಿ ಸರ್ಕಾರ ನಡೆಸಿದವರು. ಭೇಟಿ ಆಗಿರೋದೇ ತಪ್ಪು ಅನ್ನೋದು ಸರಿಯಲ್ಲ. ನಾನು ರಾಜಕೀಯ ಕಾರಣಕ್ಕೆ ಕುಮಾರಸ್ವಾಮಿಯವರನ್ನ ಭೇಟಿ ಮಾಡಿಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲೂ ನಮ್ಮ ಸಿದ್ಧಾಂತ ನಾವು ಕಾಪಾಡಿಕೊಂಡೆವು, ಅವರ ಸಿದ್ಧಾಂತ ಅವರು ಕಾಪಾಡಿಕೊಂಡರು ಎಂದು ಗೃಹ ಸಚಿವರು ತಿಳಿಸಿದರು.

ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಹಾಗೂ ಜಿ. ಪರಮೇಶ್ವರ್ ಭೇಟಿ ಸಾಕಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕುಮಾರಸ್ವಾಮಿ ಅವರನ್ನು ಪ್ರತ್ಯೇಕವಾಗಿ ಪರಮೇಶ್ವರ್ ಅವರು ಭೇಟಿ ಮಾಡಿರುವುದು ನಾನಾ ಆಯಾಮಗಳನ್ನು ಹುಟ್ಟು ಹಾಕಿದ್ದು ಚರ್ಚೆಗೆ ಗ್ರಾಸವಾಗುತ್ತಿದೆ. ಗೌಪ್ಯವಾಗಿ ಭೇಟಿ ಮಾಡಿರುವ ಉದ್ದೇಶ ಏನು ಎಂಬುದು ಕೂಡಾ ಚರ್ಚೆಗೆ ಗ್ರಾಸವಾಗಿದೆ.

ಮೊದಲ ಬಾರಿ ಗೆದ್ದ ಶಾಸಕರು ಬರೆದಿರುವ ಪತ್ರ ಕುರಿತು ಮಾತನಾಡಿದ ಅವರು, ಮೊದಲ ಸಲ ಶಾಸಕರಾಗಿ ಆಯ್ಕೆಯಾಗಿರುವ ಶಾಸಕರು ಸಂಪುಟ ಸೇರುವ ಬೇಡಿಕೆ ಇಟ್ಟಿದ್ದಾರೆ.‌ಅವರನ್ನು ಸಂಪುಟಕ್ಕೆ ತಗೋಬಾರದು ಅಂತ ಏನೂ ಇಲ್ಲ. ಆದರೆ, ಅನುಭವ ಬರಲಿ ಅಂತ ಕೇಳಿದ್ದಾರೆ. ಅವರ ಬೇಡಿಕೆ ತಪ್ಪೇನಿಲ್ಲ. ನಾನೂ 1999ರಲ್ಲಿ ಸಚಿವ ಆದವನು. ಅವರನ್ನು ಸಂಪುಟಕ್ಕೆ ತಗೊಳ್ಳೋದು ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟದ್ದು. ಅವರ ಬೇಡಿಕೆ ಸರಿಯಾಗಿದೆ. ಆದ್ರೆ ಹೈಕಮಾಂಡ್ ಯಾವ ರೀತಿ ಸ್ವೀಕರಿಸುತ್ತೆ ಅಂತ ನೋಡಬೇಕು ಎಂದು ಪರಮೇಶ್ವರ್ ತಿಳಿಸಿದರು.

ಶಾಸಕರಾಗಿ ಗೆದ್ದವರೆಲ್ಲ ಮಂತ್ರಿ ಆಗಲು ಅರ್ಹರೇ ಆಗಿದ್ದಾರೆ. ಮಾರ್ಗಸೂಚಿಗಳ ಪ್ರಕಾರ ಕೇವಲ 33 ಮಂದಿಗೆಷ್ಟೇ ಸಚಿವರನ್ನಾಗಿ ಮಾಡಲು ಅವಕಾಶ ಇರೋದು, ಹೊಸಬರೂ ಬೇಕು, ಹಳಬರೂ ಬೇಕು. ಈಗ ಪುನಾರಚನೆ ಚರ್ಚೆ ನಡೀತಿದೆಯಲ್ಲ. ಈ ಸಂದರ್ಭ ಅಂತ ಅವರು ಪತ್ರ ಬರೆದಿರಬಹುದು ಎಂದು ಪರಮೇಶ್ವರ್ ಹೇಳಿದರು.
ಸಂಪುಟ ಪುನಾರಚನೆ ಆಗುತ್ತೋ ಅಥವಾ
ನಾಯಕತ್ವ ಬದಲಾವಣೆ ಆಗುತ್ತೋ ಗೊತ್ತಿಲ್ಲ. ಏನೋ ಒಂದು ವಿದ್ಯಮಾನ ಅಂತೂ ಆಗುತ್ತಲ್ವಾ ಎಂದು ಪರಮೇಶ್ವರ್ ಮಾರ್ಮಿಕವಾಗಿ ಮಾಧ್ಯಮದವರನ್ನೇ ಪ್ರಶ್ನಿಸಿದರು.

ದಲಿತ ಮುಖ್ಯಮಂತ್ರಿ ಕೂಗು ಮುನ್ನಲೆಗೆ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ದಲಿತ ಸಿಎಂ ಚರ್ಚೆ ಆಗಲಿ, ಇನ್ನೂ ಹೆಚ್ಚು ಚರ್ಚೆ ಆಗಲಿ. ಅದರಲ್ಲಿ ನನಗೆ ತಪ್ಪು ಕಾಣ್ತಿಲ್ಲ. ಆದ್ರೆ ತೀರ್ಮಾನ ಮಾಡೋದು ಹೈಕಮಾಂಡ್ ಎಂದು ಡಾ.ಜಿ ಪರಮೇಶ್ವರ್ ತಿಳಿಸಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ