Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಡಾ.ರಾಜ್ ವೃತ್ತ ಎಂದು ನಾಮಫಲಕ ಅಳವಡಿಸಲು ಆಗ್ರಹ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಡಿ.ಕ್ರಾಸ್ ವೃತ್ತಕ್ಕೆ ಪದ್ಮಭೂಷಣ ಡಾ.ರಾಜ್‌ಕುಮಾರ್ ವೃತ್ತ ಎಂದು ನಗರ ಸಭೆಯಿಂದ
20-05-2006 ನೇ ಸಾಲಿನಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನವಾಗಿ ಜಿಲ್ಲಾಧಿಕಾರಿಗಳ ಅನುಮತಿ ಸಹ ಆಗಿದ್ದು ಶ್ರೀ ಪದ್ಮಭೂಷಣ ಡಾ.ರಾಜ್ ಕುಮಾರ್ ವೃತ್ತ ಎಂದು ನಾಮ ಫಲಕ ಸಹ ನಗರ ಸಭೆಯಿಂದ ಹಾಕಲಾಗಿತ್ತು.

 ನಂತರ ಮುತ್ಸಂದ್ರ. ವಾರ್ಡಿನ ನಗರಸಭಾ ಸದಸ್ಯ ಚಂದ್ರಪ್ಪ ನವರು 2009-10ರಲ್ಲಿ ನಗರಸಭೆಯಿಂದ ನೂತನವಾಗಿ ಗ್ರಿಲ್ಸ್ ಹಾಕಿಸಿ ವೃತ್ತ ಮಾಡಿಸಿ  ರಾಘವೇಂದ್ರ ರಾಜಕುಮಾರ್ ಮುಖ್ಯ ಅತಿಥಿಯಾಗಿ ಹಾಗೂ ಅಖಿಲ ಕರ್ನಾಟಕ ಡಾ.ರಾಜಕುಮಾರ್ ಸಂಘದ ಅಧ್ಯಕ್ಷ ಸಾ.ರಾ ಗೋವಿಂದ್ ರವರ ಅಧ್ಯಕ್ಷತೆಯಲ್ಲಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಆಗಿನ ಅಧ್ಯಕ್ಷ ಹ.ರಾಮಕೃಷ್ಣರವರ ಸಾರಥ್ಯದಲ್ಲಿ ಶಿಲಾ ಫಲಕವನ್ನು ಅಳವಡಿಸಲಾಗಿತ್ತು.

ಆದರೆ ಮೂರು ವರ್ಷಗಳ ಹಿಂದೆ ರಸ್ತೆ ಅಗಲೀಕರಣಕ್ಕಾಗಿ ವೃತ್ತ ಹಾಗೂ ಶಿಲಾ ಫಲಕವನ್ನು ತೆಗೆದು ಹಾಕಲಾಗಿದ್ದು ರಸ್ತೆ ಅಗಲೀಕರಣದ ನಂತರ ವೃತ್ತವನ್ನು ಮಾತ್ರ ನಿರ್ಮಾಣ ಮಾಡಿ ಪದ್ಮಭೂಷಣ ಡಾ.ರಾಜಕುಮಾರ್ ಶಿಲಾ ಫಲಕವನ್ನು ಹಾಕದೆ ಇರುವುದರಿಂದ ಮತ್ತೆ ಡಿ.ಕ್ರಾಸ್ ವೃತ್ತದಲ್ಲಿ ನಾಮಫಲಕ ಹಾಗೂ ಶಿಲಾ ಫಲಕ ಅಳವಡಿಸಲು ಆಗ್ರಹಿಸಿ ದೊಡ್ಡಬಳ್ಳಾಪುರ ಡಾ.ರಾಜಕುಮಾರ್ ಅಭಿಮಾನಿ ಸಂಘದಿಂದ  ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ  ಎಸ್ ಸು ನರಸಿಂಹಮೂರ್ತಿ, ಉಪಾಧ್ಯಕ್ಷ ಬಿ.ವಿಠಲ್ ರಾವ್, ಕಾರ್ಯದರ್ಶಿ ಎಂ ವೆಂಕಟೇಶ್, ಖಜಾಂಚಿ ಡಿ.ಎನ್. ತಿಮ್ಮರಾಜ್, ಉಪಾಧ್ಯಕ್ಷ ಆರ್.ಎಂ ಮಹದೇವ್, ಪರಮೇಶ್ ಎಂ, ಶಿವಾಜಿ ರಾವ್, ವಿಠಲ್ ರಾವ್, ಎಂ ಚಂದ್ರಶೇಖರ್, ಸೋಮು, ಆನಂದ್ ಇದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು