ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಪುಸ್ತಕಗಳ ಬರವಣಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ‘ಡಾ.ಟಿ.ಆರ್.ಅನಂತರಾಮು ಹೆಸರಿನಲ್ಲಿ ಜನಪ್ರಿಯ ವಿಜ್ಞಾನ ಪುಸ್ತಕ ಪ್ರಶಸ್ತಿಗಾಗಿ ವಿಜ್ಞಾನ ಬರಹಗಾರರು ಹಾಗೂ ಪ್ರಕಾಶಕರಿಂದ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕನ್ನಡ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
ಆಯ್ಕೆಯಾಗುವ ಅತ್ಯುತ್ತಮ ಜನಪ್ರಿಯ ವಿಜ್ಞಾನ ಪುಸ್ತಕಕ್ಕೆ ರೂ.20,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಆಸಕ್ತ ಲೇಖಕರು, ಬರಹಗಾರರು ಅಥವಾ ಪ್ರಕಾಶಕರು 2026ರ ನವೆಂಬರ್ 30ರೊಳಗಾಗಿ ತಮ್ಮ ಪುಸ್ತಕಗಳನ್ನು ಅಕಾಡೆಮಿಯ ವಿಳಾಸಕ್ಕೆ ತಲುಪಿಸಬೇಕಾಗಿದೆ.
ಪುಸ್ತಕಗಳನ್ನು ‘ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಪ್ರೊ.ಯು. ಆರ್. ರಾವ್ ವಿಜ್ಞಾನ ಭವನ, ತೋಟಗಾರಿಕೆ ವಿಜ್ಞಾನಗಳ ಕಾಲೇಜು ಮಹಾದ್ವಾರದ ಹತ್ತಿರ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ದೊಡ್ಡಬೆಟ್ಟಹಳ್ಳಿ ಬಡಾವಣೆ, ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು-560097' ಈ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-29721550, ಅಕಾಡೆಮಿಯ ವೆಬ್‍ಸೈಟ್ https://kstacademy.in ಸಂಪರ್ಕಿಸಬಹುದಾಗಿದೆ ಎಂದು ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



