Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದೆ ಮಾದಕ ವ್ಯಸನ--ಡಾ.ನವೀನ್ ಕುಮಾರ್

Advertisement
ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದೆ ಮಾದಕ ವ್ಯಸನ--ಡಾ.ನವೀನ್ ಕುಮಾರ್

ಚಂದ್ರವಳ್ಳಿ news ದೊಡ್ಡಬಳ್ಳಾಪುರ:                          ದೇಶದ ಪ್ರಗತಿಗೆ ಅಡ್ಡಿಯಾಗುತ್ತಿರುವ ಮಾದಕ ವ್ಯಸನದಿಂದ ಯುವಜನತೆ ದೂರವಿರಬೇಕು ಎಂದು ದೊಡ್ಡಬಳ್ಳಾಪುರ ಮಹಿಳಾ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಕರೆಕೊಟ್ಟರು.


ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏರ್ಪಡಿಸಿದ್ದ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ  ಯುವ ಜಾಗೃತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ,ಮಾತನಾಡಿದ ಅವರು ಯುವಕರ ಶಕ್ತಿಯನ್ನು ಹಾಳುಗೆಡವಲು ಮಾದಕ ವ್ಯಸನವು ಭೂತದ ತರ ಕಾಡುತಿದ್ದು ಬೀಡಿ.ಸಿಗರೇಟ್ ಮದ್ಯಪಾನ ಜೂಜಾಟದಂತ ಅನೇಕ ದುಶ್ಚಟಗಳಿಂದ ವಿದ್ಯಾರ್ಥಿಗಳು ಹಾಗು ಯುವ ಜನತೆ ಒಳಗಾಗಬಾರದು,ನಮಗಿರುವ 24ಘಂಟೆಗಳ ಸಮಯದಲ್ಲಿ ಎಂಟು ಘಂಟೆ ನಿದ್ದೆ ಮತ್ತು ಊಟ ಮತ್ತು ಸ್ವಚ್ಚತೆಗೆ ಮೀಸಲಿಟ್ಟು ದಿನದಲ್ಲಿ ಕನಿಷ್ಟ ಐದು ಘಂಟೆಗಳ ಕಾಲ ಓದಿಗೆ ಮೀಸಲಿಟ್ಟು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಲಹೆ ನೀಡಿದರು.ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.


ನಂತರ ಮಾತನಾಡಿದ ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಸಾದಿಕ್ ಪಾಷ ಸೋಷಿಯಲ್ ಮೀಡಿಯಾದಿಂದ ಆಗುವ ಸೈಬರ್ ವಂಚನೆ,ಆನ್ ಲೈನ್ ಗೇಮಿಂಗ್, ರಮ್ಮೀ ಆಪ್ ಗಳಿಂದ  ವಿದ್ಯಾರ್ಥಿಗಳು ಎಚ್ಚರಿಕೆಯಿಂದಿರಬೇಕು, ಇತ್ತೀಚೆಗೆ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಎಂಬ ಅಸ್ತ್ರ ಬಳಸಿ ಅನೇಕರಿಂದ ಹಣ ಸುಲಿಗೆ ಮಾಡುತಿದ್ದು ಇಂತಹ ಬಲೆಗಳಿಗೆ ಸಿಲುಕಿದವರು ಮೊಬೈಲ್ ನಲ್ಲಿ ಕರೆ ಮಾಡುವಾಗ ಬರುವ  ಕಾಲರ್ ಟ್ಯೂನ್ ನಲ್ಲಿ ಬರುವ ಸಂಖ್ಯೆಗೆ ಕರೆ ಮಾಡಿ ಸೈಬರ್ ವಂಚಕರ ವಿರುದ್ದ ದೂರು ದಾಖಲು ಮಾಡಲು ತಿಳಿಸಿದರು.


ದೊಡ್ಡಬಳ್ಳಾಪುರ ನಗರ ಠಾಣೆಯ ಇನ್ ಪೆಕ್ಟರ್ ಅಮರೇಶ್ ಗೌಡ ರವರು ಮಾತನಾಡಿ  ನಾವು ಮೊದಲು ಭಯ ಪಡಬೇಕಿರುವುದು ನಾವು ಮಾಡಿದ ತಪ್ಪಿಗೆ ತಪ್ಪೇ ಮಾಡಿಲ್ಲ ಎಂದಾಗ ಯಾರಿಗೂ ಶಿಕ್ಷೆಯಾಗುವುದಿಲ್ಲ,ವಿದ್ಯಾರ್ಥಿಗಳು ಹಾಗು ಯುವ ಜನತೆ ಐ.ಪಿ.ಎಲ್ ಬೆಟ್ಟಿಂಗ್ ನಂತಹ ದುಶ್ಚಟಗಳಿಂದ ದೂರವಿರಬೇಕು.


ಮತ್ತು ಅಪ್ರಾಪ್ತರು ಯಾವುದೇ ಕಾರಣಕ್ಕು ವಾಹನ ಚಲಾಯಿಸಬಾರದು ಚಲಾಯಿಸಿದಲ್ಲಿ ವಾಹನದ ಮಾಲಿಕರಿಗೆ ದಂಡ ಹಾಗು ಒಂದು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕಾಗಿತ್ತದೆ,ವಿದ್ಯಾರ್ಥಿಗಳು ಓದಿನ ಬಗ್ಗೆ  ಹೆಚ್ಚಿನ ಗಮನ ನೀಡಬೇಕು ಸಾಮಾಜಿಕ ಜಾಲತಾಣದಿಂದ ವಿದ್ಯಾರ್ಥಿಗಳು ಹಾಗು ಯುವ ಜನತೆ ಜಾಗೃತೆಯಿಂದ ಇರಬೇಕು ಎಂದರು.ಈ ಸಂದರ್ಭದಲ್ಲಿ ಪೋಕ್ಸೋ ಕಾಯಿದೆಯಿಂದಾಗುವ ಶಿಕ್ಷೆ ಬಗ್ಗೆ ಸಾಮಾಜಿಕ ಜಾಲತಾಣದಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.


ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರದಾನ ಕಾರ್ಯದರ್ಶಿ ರಾಘವೇಂದ್ರ,ಕಾನೂನು ಸಲಹೆಗಾರರು ವಿಜಯಕುಮಾರ್, ಯುವ ಘಟಕದ ರಾಜ್ಯಾದ್ಯಕ್ಷರಾದ  ಸತೀಶ್ ಎಂ,ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಡಿ.ಉಪ್ಪಾರ್,ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ರಾಜ್ಯ ಸಂಚಾಲಕರಾದ ಕೆ.ಹೆಚ್ ವೆಂಕಟೇಶ್,ವಕೀಲರಾದ ವಿಜಯ್ ಕುಮಾರ್,ಮಾಹಿತಿ ಹಕ್ಕು ಕಾರ್ಯ ಕರ್ತರ ವೇದಿಕೆ ರಾಜ್ಯ ಸಂಚಾಲಕ ಕೆಹೆಚ್. ವೆಂಕಟೇಶ್,ರಾಜ್ಯ ಪ್ರದಾನ ಕಾರ್ಯದರ್ಶಿ ರಾಘವೇಂದ್ರ,


ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಅಧ್ಯಕ್ಷ  ಎಂ ಸತೀಶ್ , ಉಪಾದ್ಯಕ್ಷರಾದ ಸುಮೇಶ್, ವಿನಯಗೌಡ, ಸಂಘಟನ ಕಾರ್ಯದರ್ಶಿ ಶಂಕರನಾಗ್,  ಹೋಬಳಿ ಅಧ್ಯಕ್ಷ ದರ್ಶನ್,  ಉಪನ್ಯಾಸಕರಾದ  ಭಾಸ್ಕರ್,ಪ್ರಭಾಕರ್,ಸತೀಶ್  ಸೇರಿದಂತೆ ಕಾರ್ಯಕರ್ತರು,ಶ್ರೀ ವಾಣಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಾಗವಹಿಸಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ