Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಯುವ ಪೀಳಿಗೆಯ ಭವಿಷ್ಯ ಹಾಗೂ ಆರೋಗ್ಯ ಹೈಜಾಕ್ ಮಾಡುತ್ತಿರುವ ಡ್ರಗ್ಸ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು: 
ಯುವ ಪೀಳಿಗೆಯ ಭವಿಷ್ಯ ಹಾಗೂ ಆರೋಗ್ಯವನ್ನು ಹೈಜಾಕ್ ಮಾಡುತ್ತಿರುವ ಡ್ರಗ್ಸ್ ಎಂಬ ಹೆಮ್ಮಾರಿಯನ್ನು ರಾಜ್ಯದಿಂದ ಸಂಪೂರ್ಣವಾಗಿ ತೊಲಗಿಸಲು ಕರ್ನಾಟಕ ಸರ್ಕಾರ ಬೃಹತ್ ಸಂಕಲ್ಪ ಮಾಡಿದೆ. ಮನುಷ್ಯನ ಸಾಮರ್ಥ್ಯ, ಪ್ರತಿಭೆ ಮತ್ತು ಬದುಕನ್ನೇ ಕಸಿಯುವ ಈ ನಶೆಯ ಪಿಡುಗಿನಿಂದ ರಾಜ್ಯವನ್ನು ಮುಕ್ತಗೊಳಿಸಲು ಗೃಹ ಇಲಾಖೆಯು ಎರಡು ಪ್ರಮುಖ ವಿಶೇಷ ಅಭಿಯಾನಗಳ ಮೂಲಕ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ.

​ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ಡ್ರಗ್ಸ್ ಜಾಲವನ್ನು ಬೇರು ಸಮೇತ ಕಿತ್ತುಹಾಕಲು ಸರ್ಕಾರ ರೂಪಿಸಿರುವ ಮಾಸ್ಟರ್ ಪ್ಲಾನ್ ಅನ್ನು ವಿವರಿಸಿದ್ದಾರೆ.

Advertisement

ಡ್ರಗ್ಸ್ ದಂಧೆಗೆ ಬ್ರೇಕ್ ಹಾಕಲು RISE ಅಭಿಯಾನ!
​ಡ್ರಗ್ಸ್ ಜಾಲಗಳ ಬೆನ್ನೆಲುಬು ಮುರಿಯಲು ಗೃಹ ಇಲಾಖೆಯು
RISE ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
​ಕಠಿಣ ಕಾನೂನು ಕ್ರಮ: ರಾಜ್ಯದ ವಿವಿಧ ಭಾಗಗಳಲ್ಲಿ ಜಾಲ ಕವಲೊಡೆದಿರುವ ಮಾದಕ ಪದಾರ್ಥಗಳ ಜಾಲವನ್ನು ಭೇದಿಸಿ
, ದೊಡ್ಡ ಪ್ರಮಾಣದಲ್ಲಿ ನಶೆ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

​ಪೆಡ್ಲರ್‌ಗಳಿಗೆ ಸಿಂಹಸ್ವಪ್ನ: ಡ್ರಗ್ಸ್ ದಂಧೆಯ ಹಿಂದಿರುವ ಪೆಡ್ಲರ್‌ಗಳು ಹಾಗೂ ಕಿಂಗ್‌ಪಿನ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಗೃಹ ಇಲಾಖೆ ಈ ಕಾರ್ಯಾಚರಣೆಗೆ ತೀವ್ರ ವೇಗ ನೀಡಿದೆ.

ಮಾನವೀಯ ನೆಲಗಟ್ಟಿನಲ್ಲಿ BRO ಜಾಗೃತಿ ಕಾರ್ಯಕ್ರಮ:
​ಕೇವಲ ಅಪರಾಧಿಗಳನ್ನು ಹಿಡಿಯುವುದಷ್ಟೇ ಅಲ್ಲದೆ
, ಮಾದಕ ವ್ಯಸನಕ್ಕೆ ತುತ್ತಾದವರನ್ನು ಸನ್ಮಾರ್ಗಕ್ಕೆ ತರಲು ಸರ್ಕಾರ ಮಾನವೀಯ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಬೇಡ BRO ಎಂಬ ಅರ್ಥಪೂರ್ಣ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

​ಪುನರ್ವಸತಿ ಮತ್ತು ಜಾಗೃತಿ: ಡ್ರಗ್ಸ್ ದಾಸರಾದವರನ್ನು ಅದರಿಂದ ಮುಕ್ತಗೊಳಿಸಲು ಕೌನ್ಸಿಲಿಂಗ್, ಪುನರ್ವಸತಿ ಸೌಲಭ್ಯ ಹಾಗೂ ಸಾರ್ವಜನಿಕವಾಗಿ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನು ಈ ಮೂಲಕ ಮಾಡಲಾಗುತ್ತಿದೆ.

ಸಾರ್ವಜನಿಕರಲ್ಲಿ ಸಚಿವರ ಮನವಿ: ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಿ​"ನಶೆ ಮುಕ್ತ ಕರ್ನಾಟಕದ ನಿರ್ಮಾಣ ಕೇವಲ ಸರ್ಕಾರದ ಕೆಲಸವಲ್ಲ, ಇದರಲ್ಲಿ ಸಾರ್ವಜನಿಕರ ಕೊಡುಗೆಯೂ ಮುಖ್ಯವಾಗಿದೆ. ನಿಮ್ಮ ಸುತ್ತಮುತ್ತ ಡ್ರಗ್ಸ್ ಜಾಲದ ಬಗ್ಗೆ ಅಥವಾ ಮಾದಕ ವ್ಯಸನಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಇಲಾಖೆಗೆ ತಿಳಿಸಿ. ಸರ್ಕಾರದ ಈ ಮಹತ್ಕಾರ್ಯಕ್ಕೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಬೇಕು."
ಪ್ರಿಯಾಂಕ್ ಖರ್ಗೆ, ಸಚಿವರು

​ಸರ್ಕಾರದ ಈ ಕಠಿಣ ನಿಲುವು ಮತ್ತು ಜನಸ್ನೇಹಿ ಅಭಿಯಾನಗಳು ರಾಜ್ಯದ ಯುವಜನತೆಯನ್ನು ಮಾದಕ ಲೋಕದ ಕರಾಳತೆಯಿಂದ ರಕ್ಷಿಸಿ, ಸುರಕ್ಷಿತ ಕರ್ನಾಟಕವನ್ನು ನಿರ್ಮಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಲಿವೆ.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು