ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ವೀರಭದ್ರನ ಪಾಳ್ಯದ ಗ್ರಾಮದೇವತೆಗಳಾದ ಶ್ರೀ ದುಗ್ಗಲಮ್ಮ ದೇವಿ ಹಾಗೂ ಶ್ರೀ ದುರ್ಗಮ್ಮ ದೇವಿ ಜಾತ್ರಾ ಮಹೋತ್ಸವ ಸೋಮವಾರದಿಂದ ಗುರುವಾರದ ವರೆಗೂ ಅದ್ದೂರಿಯಾಗಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮೇ 25ರಂದು ಆಂಜನೇಯ ಸ್ವಾಮಿ ಹಾಗೂ ಮೈಲಾರ ಲಿಂಗೇಶ್ವರ ಸ್ವಾಮಿಗೆ ಆರತಿಗಳು ನಡೆಯಲಿವೆ. 26ರಂದು ಬೆಳಿಗ್ಯೆ 10 ಗಂಟೆಗೆ ಮಾರಮ್ಮ ದೇವತೆ ಆಗಮನವಾಗಲಿದ್ದು,
ಮದ್ಯಾನ್ಹ 12 ಗಂಟೆಗೆ ದೊಡ್ಡಬಳ್ಳಾಪುರ ನಗರ ದೇವತೆ ಮುತ್ಯಾಲಮ್ಮ ದೇವಿಗೆ ಆರತಿಗಳು ನಡೆಯಲಿದ್ದು ನಂತರ ಸಂಜೆ ಗ್ರಾಮದೇವತೆಯನ್ನು ಕರೆತರಲಾಗುವುದು. ರಾತ್ರಿ 10 ಗಂಟೆಗೆ ದುರ್ಗಮ್ಮ ದೇವಿ ಹಾಗೂ ದುಗ್ಗಲಮ್ಮ ದೇವಿಗೆ ಆರತಿ ಹಾಗೂ ಪೂಜಾ ಕಾರ್ಯಕ್ರಮವಿರುತ್ತದೆ.27 ರಂದು ಬೆಳಿಗ್ಯೆ 8ಗಂಟೆಗೆ ಎಲ್ಲಮ್ಮ ದೇವಿಗೆ ಆರತಿಗಳು ನಡೆಯಲಿವೆ.
28 ರಂದು ಮದ್ಯಾನ್ಹ ದುಗ್ಗಲಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ಉತ್ಸವ ವೈಭವದಿಂದ ನಡೆಯಲಿದೆ ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.



