Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ: 321 ವಿದ್ಯಾರ್ಥಿಗಳು ಹಾಜರು

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಪ್ರತಿಭಾವಂತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು
2026-27ನೇ ಸಾಲಿಗೆ ಜಿಲ್ಲೆಯ 22 ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಆಯ್ಕೆ ಮಾಡುವ ಅರ್ಹತಾ ಪರೀಕ್ಷೆಯು ಮಂಗಳವಾರ ಯಶಸ್ವಿಯಾಗಿ ಜರುಗಿತು.

ಯೋಜನೆಯಡಿ 5ನೇ ತರಗತಿ ಪೂರೈಸಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಏಪ್ರಿಲ್ 15 ರಿಂದ ಮೇ 04ರವರೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 336 ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮೇ.12 ಮಂಗಳವಾರ ಬೆಳಿಗ್ಗೆ 11:00 ಗಂಟೆಗೆ ನಗರದ ನಗರಸಭೆ ಕಚೇರಿ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪರೀಕ್ಷೆ ನಡೆಯಿತು.

ನೋಂದಾಯಿಸಿಕೊಂಡಿದ್ದ ಒಟ್ಟು ವಿದ್ಯಾರ್ಥಿಗಳಲ್ಲಿ 321 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ (ಡಯಟ್) ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ.ಬಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಾ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಈ ಪರೀಕ್ಷೆಯ ಮೂಲಕ ಆಯ್ಕೆಯಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವ ಅವಕಾಶ ಲಭ್ಯವಾಗಲಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನ್ಮದಿನಾಚರಣೆಗಳು ದುಂದು ವೆಚ್ಚದ ತೋರಿಕೆಯ ಆಚರಣೆಗಳಾಗಬಾರದು- ಚಂದ್ರಮೋಹನ್ಇನ್ಸ್ಪೆಕ್ಟರ್ ಕಲ್ಲಪ್ಪ ಎಸ್. ಖರತ್ ರವರಿಗೆ ಡಿಜಿ-ಐಜಿಪಿ ಪದಕಕಂಠಪೂರ್ತಿ ಕುಡಿದು ರಸ್ತೆಯಲ್ಲಿ ದಾವಣಗೆರೆ ಯುವತಿ ಹೈಡ್ರಾಮಾ; ಪ್ರಶ್ನಿಸಿದ ಮಹಿಳಾ ಪಿಎಸ್‌ಐಗೆ ಕಾಲಿನಿಂದ ಒದ್ದು ದರ್ಪ!ಸಚಿವ ಜಾರಕಿಹೊಳಿ ಬಾಮೈದನ ನಿವಾಸದ ಮೇಲೆ ಇಡಿ ದಾಳಿ; 13 ಕೋಟಿ ಆಸ್ತಿ, ನೂರಾರು ಬೇನಾಮಿ ಬಾರ್ ಲೈಸೆನ್ಸ್ ಪತ್ತೆ!ತ್ರಿವಳಿ ಕೊಲೆ: ಹಂತಕಿ ಶ್ವೇತಾ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಪ್ರಿಯಕರ ಕೆನ್ನೆತ್ ಬಂಧನ!ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: 8 ಜನರ ವಿರುದ್ಧ FIR ದಾಖಲಿಸಿದ SITಡಿಕೆಶಿ ಜೊತೆ ಯಾವುದೇ ವ್ಯವಹಾರವಿಲ್ಲ, ಹೊಂದಾಣಿಕೆಯೂ ಇಲ್ಲ; ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ!ಮೆಟ್ರೋ ಬಾಗಿಲು ಲಾಕ್ ಆಗದಿರಲು ತಾಂತ್ರಿಕ ದೋಷವಲ್ಲ, ಪ್ರಯಾಣಿಕರ ಸರ ಕಾರಣ! ಅಸಲಿ ಸತ್ಯ ಬಿಚ್ಚಿಟ್ಟ ಬಿಎಂಆರ್‌ಸಿಎಲ್ನಟಿ ಕೃಷಿ ತಾಪಂಡ ಫ್ಲ್ಯಾಟ್‌ಬೆಡ್‌ರೂಮ್‌ನಲ್ಲಿ ಗೆಳೆಯ ಆತ್ಮಹತ್ಯೆ; ಪೊಲೀಸರ ಮುಂದೆ ನಟಿ ಬಿಚ್ಚಿಟ್ಟ ಸತ್ಯ ಇಲ್ಲಿದೆ!ಪ್ರದೀಪ್ ಈಶ್ವರ್‌ಆರೋಪಕ್ಕೆ ಕೈಯಲ್ಲಿದ್ದ HMT ವಾಚ್ ತೋರಿಸಿ ಕುಮಾರಸ್ವಾಮಿ ಟಾಂಗ್!