ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವೃತ್ತಿ ಜೀವನದಲ್ಲಿ ವಯೋನಿವೃತ್ತಿ ಹಾಗೂ ವರ್ಗಾವಣೆಗಳು ಸಹಜ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬ ನೌಕರನೂ ಇದನ್ನು ಸ್ವೀಕರಿಸಬೇಕಾಗುತ್ತದೆ ಎಂದು ಜಿಲ್ಲಾ ಖಜಾನೆಯ ಉಪನಿರ್ದೇಶಕ ಅಶೋಕ್ ಹೆಚ್.ಟಿ. ಹೇಳಿದರು.
ನಗರದ ಜಿಲ್ಲಾ ಖಜಾನೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಯೋನಿವೃತ್ತಿ ಹೊಂದಿದ ಸಹಾಯಕ ನಿರ್ದೇಶಕ ಎನ್. ಬೋರಯ್ಯ ಹಾಗೂ ವರ್ಗಾವಣೆಗೊಂಡ ಮುಖ್ಯ ಲೆಕ್ಕಿಗ ಗಂಗಾಧರ ಹೆಚ್.ಕೆ. ಅವರಿಗೆ ಬೀಳ್ಕೊಡುಗೆ ನೀಡಿ ಅವರು ಮಾತನಾಡಿದರು.
ಬೀಳ್ಕೊಡುಗೆ ಸ್ವೀಕರಿಸಿದ ಇಬ್ಬರೂ ಸಿಬ್ಬಂದಿಯ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಖಜಾನೆ ಉಪನಿರ್ದೇಶಕ ರಮೇಶ್ ಆರೇಮಲ್ಲಾಪುರ, ಸಹಾಯಕ ನಿರ್ದೇಶಕ ಎ.ನರಸಿಂಹಮೂರ್ತಿ, ಜಗಳೂರು ಉಪ ಖಜಾನೆಯ ಸಹಾಯಕ ಖಜಾನಾಧಿಕಾರಿ ಉಮಣ್ಣ, ನಿವೃತ್ತ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ಉಪಖಜಾನೆಯ ಎಲ್ಲಾ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.



