Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಸೌಭಾಗ್ಯ ಟ್ರಸ್ಟ್ ಹಾಗೂ ಕಿಡ್ಜೀ ಆಡಳಿತ ಮಂಡಳಿಯ ಸಹಯೋಗದಲ್ಲಿ ಫಾದರ್ಸ್ ಡೇ ಆಚರಣೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಮಗುವಿನ ಜೀವನದ ಪ್ರತಿ ಹಂತದಲ್ಲೂ
  ಶಕ್ತಿಯಾಗಿ ನಿಲ್ಲುವ ತಂದೆಯನ್ನು ಗೌರವಿಸಿ, ಸಂಭ್ರಮಿಸುವ ನಿಟ್ಟಿನಲ್ಲಿ  ಫಾದರ್ಸ್ ಡೇ ಪ್ರಯುಕ್ತ  ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಕಿಡ್ಜೀ ( KIDZEE )ಆಡಳಿತ ಮಂಡಳಿ ಮುಖ್ಯಸ್ಥರಾದ ಡಾ. ಸಂದೀಪ್ ತಿಳಿಸಿದರು.

 ನಗರದ ಖಾಸಗಿ ಭವನದಲ್ಲಿ ಸೌಭಾಗ್ಯ ಟ್ರಸ್ಟ್ ಸಹಯೋಗದೊಂದಿಗೆ  ಕಿಡ್ಜೀ ( KIDZEE ) ಆಡಳಿತ ಮಂಡಳಿ ಆಯೋಜಿಸಿದ್ದ  "ಫಾದರ್ಸ್ ಡೇ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ಮಗುವಿಗೂ  ತನ್ನ ತಂದೆಯ ಹೀರೋ ಆಗಿರುತ್ತಾರೆ , ಸಾವಿರಾರು ಕಷ್ಟಗಳನ್ನು ಎದುರಿಸಿದರು ತನ್ನ ಕಷ್ಟಗಳನ್ನು ತೋರ್ಪಡಿಸಿಕೊಳ್ಳದೆ  ಮಗುವಿಗೆ ಸುಖ ಸಂತೋಷವನಷ್ಟೇ  ನೀಡುವ  ವಿಶ್ವದ ಎಲ್ಲ ತಂದೆಯರಿಗೆ ಈ ವೇದಿಕೆ ಅರ್ಪಣೆ ಮಾಡಿದ್ದೇವೆ, ತನ್ನ ಹೆಗಲ ಮೇಲೆ ಹೊತ್ತು  ಪ್ರಪಂಚದ ಪರಿಚಯ ಮಾಡಿಸುವ  ಎಲ್ಲಾ ತಂದೆಯರಿಗೂ  ವಿಶ್ವ ತಂದೆಯರ ದಿನದ  ಶುಭಾಶಯಗಳನ್ನು ಕೋರುತೇನೆ ಅಲ್ಲದೇ ಇಂದಿನ ಈ ವೇದಿಕೆ ವಿಶೇಷವಾಗಿದ್ದು ಅಂತಹ ಎಲ್ಲ ತಂದೆಯರನ್ನು ಸಂಭ್ರಮಿಸುವ ನಿಟ್ಟಿನಲ್ಲಿ  ನಾವೆಲ್ಲರೂ ಒಟ್ಟಾಗಿದ್ದೇವೆ  ಕಿಡ್ಜೀ ( KIDZEE ) ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ವಿಶೇಷ ಕುತೂಹಲಕಾರಿ  ಆಟಗಳನ್ನು  ಆಯೋಜನೆ ಮಾಡಿದ್ದು  ಒಟ್ಟಾರೆ  ಪೋಷಕರೊಂದಿಗೆ ಸಂಭ್ರಮಿಸಲಿದ್ದೇವೆ ಎಂದರು.

  ಫಾದರ್ಸ್ ಡೇ ಸ್ಪೆಷಲ್ ಫ್ರೇಮ್ ಅಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಪೋಷಕರು ಫಾದರ್ಸ್ ಡೇ ಸ್ಪೆಷಲ್ ಫೋಟೋ ಫ್ರೇಮ್  ಎಲ್ಲರ ಗಮನ ಸೆಳೆಯಿತು  ಕಾರ್ಯಕ್ರಮಕ್ಕೆ ಬಂದ ಪುಟಾಣಿಗಳು  ತಮ್ಮ ಪೋಷಕ ರೊಟ್ಟಿಗೆ ಕುಳಿತು  ಫೋಟೋ ಕ್ಲಿಕ್ಕಿಸಿಕೊಂಡಿದ್ದು  ವಿಶೇಷವಾಗಿತ್ತು  ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಪೋಷಕರು ತುಂಬಾ ಉತ್ಸಾಹಕರಾಗಿದ್ದು  ಕಾರ್ಯಕ್ರಮ ಕುರಿತು ಸಂತಸ ವ್ಯಕ್ತಪಡಿಸಿದರು.

 ಸ್ಥಳೀಯ ಮುಖಂಡರು ಸೌಭಾಗ್ಯ ಟ್ರಸ್ಟ್ ನ  ಮುಖ್ಯಸ್ಥ ಎಚ್ ರಾಜಗೋಪಾಲ್ ಮಾತನಾಡಿ  ತಂದೆಯರಿಗಾಗಿ  ಮೀಸಲಿರುವ  ವಿಶೇಷ ದಿನವನ್ನು ಕಿಡ್ಜೀ ( KIDZEE ) ತಂಡವು  ಅತ್ಯಂತ ಅರ್ಥಪೂರ್ಣವಾಗಿ  ಆಚರಿಸುತ್ತಿದೆ,ಕಿಡ್ಜೀ ( KIDZEE ) ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದಕ್ಕೆ  ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು .

ಅಲ್ಲದೇ ಸೌಭಾಗ್ಯ ಟ್ರಸ್ಟ್ ವತಿಯಿಂದ ತುರ್ತು ಸಂದರ್ಭಗಳಿಗಾಗಿ  ರಕ್ತ ನಿಧಿ ಕೇಂದ್ರ , ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ   ಆಪ್ತ ಸಹಾಯವಾಣಿ ಕೇಂದ್ರಗಳನ್ನು  ತೆರೆಯಲಾಗುತ್ತಿದ್ದು ಅತಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು , ಸಾರ್ವಜನಿಕರು  ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು  ಮನವಿ ಮಾಡಿದರು.
 ಈ ಸಂದರ್ಭದಲ್ಲಿ ಸೌಭಾಗ್ಯ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಕಿಡ್ಜೀ ( KIDZEE )ಆಡಳಿತ ಮಂಡಳಿ, ಭೋದಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು