LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಷರ್‌ಗಳ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯ ಸರ್ಕಾರ ೪೪ ಎ. ಕಾಯಿದೆಯನ್ನು ಹಿಂದಕ್ಕೆ ಪಡೆದು ನಮ್ಮನ್ನು ಕರೆಸಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಕ್ರಷರ್‌ಗಳನ್ನು ನಿಲ್ಲಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಜಿಲ್ಲಾ ಕ್ವಾರೆ ಮತ್ತು ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಎಚ್ಚರಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಂಟ್ರಾಕ್ಟರ್ ಮತ್ತು ಕ್ರಷರ್ ಇಬ್ಬರ ಬಳಿಯೂ ಸರ್ಕಾರ ರಾಯಲ್ಟಿ ಸಂಗ್ರಹಿಸುತ್ತಿದೆ. ಇಂತಹ ದ್ವಿಮುಖ ನೀತಿಯಿಂದ ನಮಗೆ ನಷ್ಟವಾಗುತ್ತಿದೆ. ೪೪ ಎ. ಕಾಯಿದೆಯನ್ನು ಸರ್ಕಾರ ಹಿಂದಕ್ಕೆ ಪಡೆದು ಒಂದೆ ನೀತಿ ಅನುಸರಿಸಲಿ. ಆಂಧ್ರ ತಮಿಳುನಾಡಿನಿಂದ ಇಲ್ಲಿಗೆ ಜೆಲ್ಲಿಗಳು ಬರುತ್ತಿವೆ. ಆದರೆ ಅವರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿಯಾಗುತ್ತಿಲ್ಲ. ಒಂದು ವರ್ಷದಿಂದ ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸುತ್ತಿದ್ದೇವೆ. ಇನ್ನು ನಾಲ್ಕೈದು ದಿನಗಳು ಕಾಯುತ್ತೇವೆ. ಸಚಿವ ಸಂಪುಟ ವಿಸ್ತರಣೆಯಾದರೆ ನೂತನ ಸಚಿವರಿಗೂ ಮನವಿ ಅರ್ಪಿಸುತ್ತೇವೆ. ಸರ್ಕಾರಕ್ಕೆ ಸಂದಾಯವಾಗಬೇಕಾದ ರಾಯಲ್ಟಿ ಎಲ್ಲಾ ಹೋಗಿದೆ. ಆದರೂ ನಮಗೆ ಕಿರುಕುಳ ನಿಂತಿಲ್ಲ. ಸಾಲ ತೀರಿಸಲಾಗದೆ ರೈತ ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೋ ಅದೇ ರೀತಿ ಕ್ರಷರ್‌ನವರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆಂದು ಹೇಳಿದರು.

ಕಲ್ಲು ಗಣಿಗೆ ಸಂಬಂಧಿಸಿದಂತೆ ಡಿ.ಎಂ.ಜಿ. ಕಡೆಯಿಂದ ಪ್ರತಿ ವರ್ಷ ಆಡಿಟ್ ಆಗುತ್ತಿರುವುದರಿಂದ ಕೆ.ಇ.ಬಿ. ಬಿಲ್ ಪಾವತಿಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು. ಜಿ.ಎಸ್.ಟಿ. ರೂಲ್ಸ್ ಪ್ರಕಾರ ಐವತ್ತು ಸಾವಿರ ರೂ.ಗಳ ಒಳಗಡೆ ಜಿ.ಎಸ್.ಟಿ. ಬಿಲ್ ಇದ್ದರೆ ಈ-ವೇ ಬಿಲ್ ಅವಶ್ಯಕತೆಯಿರುವುದಿಲ್ಲ. ಎಂದು ಕಾನೂನು ಹೇಳುತ್ತದೆ. ಆದರೆ ಡಿ.ಎಂ.ಜಿ. ಇಲಾಖೆಯವರು ನಮ್ಮ ಸರಕು ಸಾಗಾಣಿಕೆ ಮಾಡುವ ಬಿಲ್ಲಿನ ಮೊತ್ತ ಎರಡು ಸಾವಿರ ರೂ.ಗಳಿಂದ ಹದಿನೈದು ಸಾವಿರ ರೂ. ಒಳಗಡೆಯಿರುತ್ತದೆ.  ಈಗಿರುವಾಗ ಈ-ವೇ ಬಿಲ್‌ನ ಅಗತ್ಯವಿಲ್ಲ. ಆದ್ದರಿಂದ ಈ-ವೇ ಬಿಲ್ ಪದ್ದತಿಯನ್ನು ರದ್ದುಪಡಿಸುವಂತೆ ಅಬುಲ್ ಮಜೀದ್ ಸರ್ಕಾರವನ್ನು ಒತ್ತಾಯಿಸಿದರು.

ಕಾಂ.ಜಿ.ಸಿ.ಸುರೇಶ್‌ಬಾಬು ಮಾತನಾಡಿ ಹೊರ ರಾಜ್ಯದಿಂದ ಬರುವ ಜೆಲ್ಲಿಗೆ ನಮ್ಮ ರಾಜ್ಯ ಸರ್ಕಾರ ತೆರಿಗೆ ವಸೂಲಿ ಮಾಡುತ್ತಿಲ್ಲ. ನಮ್ಮ ಉದ್ದಿಮೆಯ ಮೇಲೆ ಸರ್ಕಾರ ಇಲ್ಲ ಸಲ್ಲದ ಕಾನೂನುಗಳನ್ನು ಜಾರಿಗೊಳಿಸಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್‌ಗಳಿಗೆ ದಂಡ ವಿಧಿಸುತ್ತಿರುವುದನ್ನು ತಕ್ಷಣವೆ ನಿಲ್ಲಿಸಬೇಕು. ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿಲ್ಲ. ಕಾನೂನು ಬದ್ದವಾಗಿ ಎಂ.ಡಿ.ಪಿ, ಜಿಎಸ್‌ಟಿ. ಮುಖಾಂತರ ಸರಕು ಪಡೆದು ಕ್ರಷಿಂಗ್ ಮಾಡಿ ಸಾಗಾಣಿಕೆ ಮಾಡುತ್ತಿದ್ದೇವೆಂದು ತಿಳಿಸಿದರು.

ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರಂಜನ್, ವೆಂಕಟೇಶ್, ಅಶೋಕ್‌ರೆಡ್ಡಿ, ಮಲ್ಲಿಕಾರ್ಜುನ್, ಅಭಿಷೇಕ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿ ವಿಲಾಸ ಸಾಗರ ಹಾಗೂ ಗಾಯತ್ರಿ ಜಲಾಶಯಗಳಿಗೆ ಪ್ರವಾಸಿಗರ ಪ್ರವೇಶ ತಾತ್ಕಾಲಿಕ ನಿರ್ಬಂಧಆಗಸ್ಟ್ 12ಕ್ಕೆ 'ಶತಮಾನದ ಖಗ್ರಾಸ ಸೂರ್ಯಗ್ರಹಣ': ಭಾರತದಲ್ಲಿ ಗೋಚರವಿಲ್ಲ, ಯಾವುದೇ ಆಚರಣೆ ಅಗತ್ಯವಿಲ್ಲರಾಣಿ ಎಲಿಜಬೆತ್ ಹೊಗಳಿದ್ದ ನಮ್ಮ ವಿಧಾನಸೌಧವೇ ನನಗೆ ಸ್ಫೂರ್ತಿ-ಟಿ.ಬಿ ಜಯಚಂದ್ರಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ ಸಿಕ್ಕಿದೆ- ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಣ್ಣಚಿತ್ತಯ್ಯ ಯುವ ಜನತೆಗೆ ಯೋಗ, ವ್ಯಾಯಾಮ ಅತ್ಯಂತ ಅವಶ್ಯ:ದಿವ್ಯ ಜ್ಞಾನಾನಂದ ಶ್ರೀಎಸ್. ನಾಗೇನಹಳ್ಳಿ ಎಂಪಿಸಿಎಸ್ ನೂತನ ಅಧ್ಯಕ್ಷರಾಗಿ ಮುನಿಕೃಷ್ಣಪ್ಪ ಆಯ್ಕೆಅಪಘಾತದಲ್ಲಿ ಮೃತಪಟ್ಟ ಕೋಳಿಗಳು 'ಜೀವಸಂಪತ್ತು': ವಿಮಾ ಪರಿಹಾರ ಎತ್ತಿಹಿಡಿದ ಹೈಕೋರ್ಟ್ಸವರ್ಣೀಯ ಮುಖಂಡರಿಂದ ದಲಿತ ಅಧಿಕಾರಿಗಳಿಗೆ ಕಿರುಕುಳ-ಮಾರಸಂದ್ರ ಮುನಿಯಪ್ಪಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ವಿತರಣೆಮೈಸೂರಲ್ಲಿ  'ಜೋಡೆತ್ತು' ಚಿತ್ರದ ಅದ್ದೂರಿ ಕ್ಲೈಮ್ಯಾಕ್ಸ್