LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರತಿ ತಿಂಗಳ ಮೊದಲ ಬುಧವಾರ ಮಕ್ಕಳ ಹೃದಯ ಉಚಿತ ತಪಾಸಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಚಿತ್ರದುರ್ಗ:
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೋಧಕ ಆಸ್ಪತ್ರೆ (ಸಿಎಂಸಿಆರ್‍ಐ) ಮತ್ತು ದಾವಣಗೆರೆ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಗರದ ಸಿಎಂಸಿಆರ್‍ಐ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಮೊದಲನೇ ಬುಧವಾರ ಉಚಿತವಾಗಿ ಮಕ್ಕಳ ಹೃದಯ ತಪಾಸಣೆ ನಡೆಸಲಾಗುವುದು.

ಪ್ರತಿ ತಿಂಗಳ ಮೊದಲನೇ ಬುಧವಾರದಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ರವರೆಗೆ ಮಕ್ಕಳ ಹೃದಯ ತಜ್ಞ ಡಾ.ಜಿ.ಎಸ್.ಅನಿಲ್ ಕುಮಾರ್ ತಪಾಸಣೆ ನಡೆಸುವರು. ಮಕ್ಕಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಸೋಂಕು ಹಾಗೂ ಚರ್ಮ ಮತ್ತು ತುಟಿಗಳು ನೀಲಿ ಬಣ್ಣಕ್ಕೆ ತಿರುಗುವುದು,  ಉಸಿರಾಟದಲ್ಲಿ ತೊಂದರೆ ಅಥವಾ ಏದುಸಿರು ಬಿಡುವುದು, ಅನಿಯಮಿತ ಹೃದಯ ಬಡಿತ,  ಮರುಕಳಿಸುವ ಕೆಮ್ಮುನಂತಹ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಈ ಉಚಿತ ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ 9535025743, 7259759982 ಗೆ ಸಂಪರ್ಕಿಸಬಹುದು ಎಂದು  ಚಿತ್ರದುರ್ಗ ಸಿಎಂಸಿಆರ್‍ಐ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜವಳಿ ಉತ್ಪನ್ನ ರಫ್ತುಗೆ ಸರ್ಕಾರ ಉತ್ತೇಜನ:ಆಯುಕ್ತ ಎ.ಬಿ. ಬಸವರಾಜು ಎಂಪಿಆರ್ ಎಸಿಎಸ್ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಸ್ಪಷ್ಟ ಬಹುಮತಕಾಮನ್‌ವೆಲ್ತ್‌ಕ್ರೀಡಾಕೂಟದಲ್ಲಿ ಭಾರತಕ್ಕೆ 39 ಪದಕ: ಕ್ರೀಡಾಪಟುಗಳಿಗೆ ಹಾರ್ದಿಕ ಅಭಿನಂದನೆಕಾವೇರಿ ವಿಚಾರದಲ್ಲಿ ಸರ್ಕಾರದ ವಿಫಲತೆ: ಮಳೆಯಿಂದಷ್ಟೇ ರೈತರಿಗೆ ಆಸರೆ—ವಿಪಕ್ಷ ನಾಯಕ ಆರ್‌‌. ಅಶೋಕ್ ವಾಗ್ದಾಳಿನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ, ವೈಫಲ್ಯ: ಸರ್ಕಾರದ ವಿರುದ್ಧ ಅಶೋಕ್ ತೀವ್ರ ವಾಗ್ದಾಳಿಸಂಪುಟ ವಿಸ್ತರಣೆ ಹೈ ಡ್ರಾಮಾ: ಕೊನೆ ಕ್ಷಣದಲ್ಲಿ ಮಂಕಾಳಗೆ ಕೊಕ್, ಎಸ್.ಎಸ್.ಎಂಗೆ ಒಲಿದ ಸಚಿವ ಸ್ಥಾನ!ಕೈ ಸಂಪುಟ ಪುನಾರಚನೆ ಬಿರುಗಾಳಿ: ಸಿದ್ದರಾಮಯ್ಯ ಆಪ್ತರಾಗಿದ್ದ 12 ಹಿರಿಯ ನಾಯಕರಿಗೆ ಕೊಕ್!ಕಾಂಗ್ರೆಸ್‌ಗೆ ಸಂಪುಟ ವಿಸ್ತರಣೆ ಬಿಸಿ: ಜಯಚಂದ್ರ ಬೆಂಬಲಿಗರು, ಕುಂಚಿಟಿಗ ಸಮಾಜ ಆಕ್ರೋಶ – ರಾಜೀನಾಮೆಗೆ ಜಯಚಂದ್ರ ಸಿದ್ಧ?ಕೈ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಾಟೀಲ್ ವೇದಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿದ ಸನಾತನ ಧರ್ಮದ ಪ್ರಸಾರಕ ವೇದವ್ಯಾಸರು: ಎಚ್ ಲಕ್ಷ್ಮೀದೇವಮ್ಮ