ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸಿಎಂಸಿಆರ್‍ಐ ಬೋಧಕ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಇದೇ ಜುಲೈ 24ರಂದು ಬೆಳಿಗ್ಗೆ 10.30ಕ್ಕೆ ವಿಶ್ವ ಮೆದುಳು ದಿನದ ಪ್ರಯುಕ್ತ ಉಚಿತ ನರರೋಗ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ.
Also read
ಈ ಕಾರ್ಯಕ್ರಮಕ್ಕೆ ನರರೋಗ ತಜ್ಞರಾದ ಡಾ.ಕಿರಣ್ ಗೌಡ ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ತಲೆನೋವು ಅಪಸ್ಮಾರ, ಪಾಶ್ವವಾರ್ಯ, ಮರೆವಿನ ಖಾಯಿಲೆ ಹಾಗೂ ನರರೋಗ ಸಂಬಂಧಿಸಿದ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.
ಸ್ವೀಚ್‍ಥೆರಪಿ, ಫಿಜಿಯೋಥೆರಪಿ ಕೌನ್ಸಿಲಿಂಗ್ ಲಭ್ಯವಿರುತ್ತದೆ. ಸಾರ್ವಜನಿಕರು ಮತ್ತು ಪೋಷಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಎಂಸಿಆರ್‍ಐ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ವೈದ್ಯಕೀಯಕೀಯ ಅಧೀಕ್ಷಕರು ತಿಳಿಸಿದ್ದಾರೆ.



