ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಗುರುಪೂರ್ಣಿಮೆಯ ಅಂಗವಾಗಿ ಹಿರಿಯೂರಿನಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು. ಇಲ್ಲಿನ ಶಂಕರ ಮಠದಲ್ಲಿ ಶಂಕರಾಚಾರ್ಯರಿಗೆ ಪಾದುಕಾ ಸೇವಾ ಪೂಜೆ, ನಂತರ ಅನ್ನಸಂತರ್ಪಣೆ ನಡೆಸಲಾಯಿತು .
ವಿ ವಿ ಸರ್ಕಲ್ ನಲ್ಲಿರುವ ಕಣಿವೆ ಮಾರಿಕಾಂಬ ಚಾರಿಟಬಲ್ ಟ್ರಸ್ಟ್ ನಲ್ಲಿ ವೃದ್ದರಿಗೆ ಹಾಗೂ ಅಂಗವಿಕಲರಿಗೆ ಹಣ್ಣು ಮತ್ತು ಬ್ರೆಡ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಂಕರ ಜ್ಞಾನ ಮಂದಿರ ಟ್ರಸ್ಟ್ ಮುಖಂಡರಾದ ಶ್ರೀನಾಥ್, ಸ್ವಾಮಿನಾಥ್, ಡಿ.ಕೆ ನರಸಿಂಹಮೂರ್ತಿ, ವೆಂಕಟೇಶ್, ದೀಕ್ಷಿತ್, ಶ್ರೀನಿವಾಸರಾವ್, ರವಿಶಂಕರ್ ,ಗಣೇಶ್, ರಾಮಮೂರ್ತಿ, ಹರಿಪ್ರಸಾದ್, ಶ್ರೀ ಹರ್ಷ ದೀಕ್ಷಿತ್ ಹಾಗೂ ಇತರೆ ಮುಖಂಡರು ಭಾಗವಹಿಸಿದ್ದರು.



