ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಥೈಲ್ಯಾಂಡ್‌ನಲ್ಲಿ ಜು.೩೧ ರಿಂದ ಆ.೨ ರವರೆಗೆ ನಡೆದ ಅಂತರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಜಿಲ್ಲೆಯ ಡಿಜೆ. ಸಂಸ್ಥೆಯ ಚಿತ್ರದುರ್ಗದ ಕಾಂಚನ ಎಂ. ಬಂಗಾರದ ಪದಕ ಹಾಗೂ ಇಷಿತ ಬೆಳ್ಳಿ ಪದಕ ಗಳಿಸಿ ದೇಶ, ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪದಕಗಳನ್ನು ಗಳಿಸಿ ಸಾಧನೆ ಗೈದಿರುವ ಟೇಕ್ವಾಂಡೋ ಪಟುಗಳಿಗೆ ತರಬೇತುದಾರ ರುದ್ರೇಶ್ ಶುಭ ಹಾರೈಸಿದ್ದಾರೆ.



