ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕು ತುರುವನೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕೂನಬೇವು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಬಾಲಕರ ವಿಭಾಗದ ಕಬಡ್ಡಿಯಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಬಿ.ಹೆಚ್.ಸಂದೇಶ್ (ಪ್ರಥಮ), ಬಾಲಕರ ತ್ರಿವಿಧ ಜಿಗಿತದಲ್ಲಿ ಮನೋಜ (ಪ್ರಥಮ), 200 ಮೀ. ಬಾಲಕರ ಓಟದಲ್ಲಿ ಸಂತೋಷ (ಪ್ರಥಮ), ಬಾಲಕಿಯರ 200 ಮೀ ಓಟದಲ್ಲಿ ಕೀರ್ತನ ಪ್ರಥಮ ಸ್ಥಾನ, 100 ಮೀ ಬಾಲಕರ ಅಡೆ-ತಡೆ ಓಟದಲ್ಲಿ ಮನೋಜ್ ಪ್ರಥಮ,
ಬಾಲಕಿಯರ 100 ಮೀ ಅಡೆ-ತಡೆ ಓಟದಲ್ಲಿ ಕೆ.ಎಸ್.ಜೀವತ ಪ್ರಥಮ, ಬಾಲಕರ 4*100 ರಿಲೆಯಲ್ಲಿ ಪ್ರಥಮ, ಸರಪಳಿ ಗುಂಡು ಎಸೆತದಲ್ಲಿ ಯುವರಾಜ ಪ್ರಥಮ, ಬಾಲಕರ ಎತ್ತರ ಜಿಗಿತದಲ್ಲಿ ಸಂತೋಷ ಪ್ರಥಮ ಮತ್ತು ಮನೋಜ್ ತೃತೀಯ ಸ್ಥಾನ, 100 ಮೀ ಬಾಲಕರ ಓಟದಲ್ಲಿ ಸಂತೋಷ ದ್ವಿತೀಯ, ಸಂದೇಶ ತೃತೀಯ, ಬಾಲಕರ 400 ಮೀ ಓಟದಲ್ಲಿ ವಿನುಷ್ ದ್ವಿತೀಯ, ಬಾಲಕರ 1500 ಮೀ ಓಟದಲ್ಲಿ ಎಂ.ಆರ್.ಜೀವನ್ ದ್ವಿತೀಯ, ಬಾಲಕಿಯರ 800 ಮೀಟರ್ ಓಟದಲ್ಲಿ ಯಶಸ್ವಿನಿ ದ್ವಿತೀಯ, ಬಾಲಕಿಯರ 3 ಕಿ.ಮೀ ನಡಿಗೆಯಲ್ಲಿ ಟಿ.ಸಾಕಮ್ಮ ದ್ವಿತೀಯ, ಬಾಲಕಿಯರ 4*100 ರಿಲೆಯಲ್ಲಿ ದ್ವಿತೀಯ ಹಾಗೂ ಬಾಲಕಿಯರ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.




