Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರಸ್ವತಿ ವೀರೇಂದ್ರ ಪಪ್ಪಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೌರವ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮತ್ತು ಆರ್.ಡಿ. ಚೈತ್ರ ಅವರ ಪುತ್ರಿ ಸರಸ್ವತಿ ಕೆ.ಸಿ. ವೀರೇಂದ್ರ ಪಪ್ಪಿ ಅವರು ತಮ್ಮ ಶ್ರಮ
, ಶಿಸ್ತು, ದೈಹಿಕ ಸಾಮರ್ಥ್ಯ ಹಾಗೂ ದೃಢ ನಂಬಿಕೆಯಿಂದ ವಿಶ್ವದ ಗಮನ ಸೆಳೆದಿದ್ದಾರೆ.


ಸರಸ್ವತಿ ಅವರು ಇತ್ತೀಚೆಗೆ Reverse Abdominal Plank Position ವಿಭಾಗದಲ್ಲಿ 100 ಪೌಂಡ್ (ಸುಮಾರು 45 ಕಿಲೊಗ್ರಾಂ) ತೂಕದ ಬ್ಯಾಗ್ ಹೊತ್ತು 2 ನಿಮಿಷ 12 ಸೆಕೆಂಡುಗಳ ಕಾಲ ಸ್ಥಿರವಾಗಿ ಉಳಿದು, “The Longest Time in a Reverse Abdominal Plank Position Carrying a 100 lb Pack”  ವಿಭಾಗದಲ್ಲಿ  ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.

ಈ ಅಪೂರ್ವ ಸಾಧನೆ ಜೂನ್ 21, 2025 ರಂದು ಚಿತ್ರದುರ್ಗದಲ್ಲೇ ದಾಖಲಾಗಿದ್ದು, Guinness World Records ಸಂಸ್ಥೆಯು ಅಧಿಕೃತ ಪ್ರಮಾಣಪತ್ರ ನೀಡಿ ಸರಸ್ವತಿಯನ್ನು ವಿಶ್ವದಾಖಲೆಯ ಧ್ವಜದಾರೆಯನ್ನಾಗಿ ಘೋಷಿಸಿದೆ.


ಹಿಂದಿನ ಸಾಧನೆ: ಈ ಹಿಂದೆ ಸರಸ್ವತಿ ಅವರು “Longest Sit in the Wall Position on Toe” ವಿಭಾಗದಲ್ಲಿ 2 ಗಂಟೆ 36 ಸೆಕೆಂಡುಗಳ ಕಾಲ ಸ್ಥಿರವಾಗಿ ಉಳಿದು, ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರು ದಾಖಲಿಸಿದ್ದರು. ಆ ಸಂದರ್ಭದಲ್ಲೇ ಸರಸ್ವತಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಮುಂದಿನ ಬಾರಿ ನನ್ನ ಹೆಸರು ‘Guinness World Record’ ಪುಸ್ತಕದಲ್ಲೂ ಕಾಣಿಸುವೆ. ಇಂದು ಆ ಮಾತು ನಿಜವಾಗಿದ್ದು, ಅವರು ಭಾರತ ಮತ್ತು ಕರ್ನಾಟಕದ ಹೆಮ್ಮೆಯ ಪುತ್ರಿಯಾಗಿದ್ದಾರೆ.


ಅಭ್ಯಾಸ ಮತ್ತು ತರಬೇತಿ: ಸರಸ್ವತಿ ಪ್ರಸ್ತುತ ಬೆಂಗಳೂರು ನಗರದ ಜೈನ್ ಇಂಟರ್ ನ್ಯಾಷನಲ್ ರೆಸೆಡೆನ್ಸಿಯಲ್  ಸ್ಕೂಲ್‍ನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ತರಬೇತಿದಾರರು  ತುಷಾರ್ ಸೋನಾಲಿಕರ್ ಅವರ ಮಾರ್ಗದರ್ಶನದಲ್ಲಿ ಸರಸ್ವತಿ ತಮ್ಮ ದೈಹಿಕ ಸಾಮರ್ಥ್ಯವನ್ನು ವಿಶ್ವ ಮಟ್ಟಕ್ಕೆ ಬೆಳೆಸಿಕೊಂಡಿದ್ದಾರೆ.


ಪ್ರೇರಣೆಯ ಬೆಳಕು: ಸರಸ್ವತಿ ವೀರೇಂದ್ರ ಪಪ್ಪಿಯವರ ಈ ಸಾಧನೆ ಕೇವಲ ದಾಖಲೆ ಮಾತ್ರವಲ್ಲ, ಅದು ಭಾರತದ ಯುವ ಶಕ್ತಿಯ ಪ್ರತೀಕ. ಕಠಿಣ ಪರಿಶ್ರಮ, ಅಚಲ ನಂಬಿಕೆ ಮತ್ತು ನಿರಂತರ ಅಭ್ಯಾಸದ ಮೂಲಕ ನಾನು ಮಾಡಬಲ್ಲೆ!ಎಂಬ ಮನೋಭಾವದಿಂದ ಅವರು ಸಾಧಿಸಿರುವುದು ಸಾವಿರಾರು ಯುವ ಜನತೆಗೆ ಪ್ರೇರಣೆಯಾಗುತ್ತದೆ.

ಸರಸ್ವತಿ ಅವರಂತಹ ಪ್ರತಿಭಾವಂತ ಯುವತಿಯರು ನಮ್ಮ ದೇಶದ ಹೆಜ್ಜೆ ಗುರುತು ವಿಶ್ವ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರ ಸಾಧನೆ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದೆ, ಚಿತ್ರದುರ್ಗದ ಮಣ್ಣಿಗೆ ಹೊಸ ಮೆರುಗು ನೀಡಿದೆ.


 “ಸರಸ್ವತಿ ವೀರೇಂದ್ರ ಪಪ್ಪಿ ಚಿತ್ರದುರ್ಗದ ಕೀರ್ತಿ, ಕರ್ನಾಟಕದ ಗೌರವ, ಭಾರತದ ಪ್ರೇರಣೆ. ಈ ಸಾಧನೆಗೆ ತಂದೆ ವೀರೇಂದ್ರ ಪಪ್ಪಿ ತಾಯಿ ಚೈತ್ರ ಆರ್.ಡಿ., ತರಬೇತಿದಾರರು ತುಷಾರ್ ಸೋನಾಲಿಕರ್, ಗುರುಗಳು ಹಾಗೂ ಚಿತ್ರದುರ್ಗದ ಜನತೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ