Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತೀಯ ಸನಾತನ ಸಂಸ್ಕೃತಿ ವಿಶಿಷ್ಟವಾದದ್ದು: ಹೆಚ್.ಸಿ.ಗೀತಾ

Advertisement
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭಾರತೀಯ ಸನಾತನ ಸಂಸ್ಕೃತಿಯು ವಿಶಾಲ ವ್ಯಾಪ್ತಿಯನ್ನು ಒಳಗೊಂಡಿರುವ ಅತ್ಯಂತ ವಿಶಿಷ್ಟ ಸಂಸ್ಕೃತಿ ಎಂದು ಚಳ್ಳಕೆರೆಯ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹೆಚ್.ಸಿ.ಗೀತಾ ಪ್ರಕಾಶ್ ತಿಳಿಸಿದರು.                          

ಗಾಂಧಿನಗರದ ತಮ್ಮ ಮಂಜುನಾಥ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು "ಭಾರತೀಯ ಸನಾತನ ಸಂಸ್ಕೃತಿ ಮತ್ತು ಪರಂಪರೆ" ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.  

 ಭಾರತೀಯ ಸನಾತನ ಸಂಸ್ಕೃತಿಯ ಸಾಹಿತ್ಯ,ಸಂಗೀತ ಶಿಲ್ಪಕಲೆ,ಆಚಾರ-ವಿಚಾರಗಳು, ಲೋಕರೂಢಿ, ಸಂಪ್ರದಾಯಗಳು, ಸಾಂಸ್ಕೃತಿಕ ಮೌಲ್ಯಗಳು ಸನಾತನ ಸಂಸ್ಕೃತಿಯ ಹೆಗ್ಗುರುತುಗಳಾಗಿದ್ದು ಇವುಗಳನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಆಚರಣೆ ಮಾಡುವುದರ  ಮೂಲಕ ಅವುಗಳನ್ನು ಉಳಿಸಿ-ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ರಾಮಾಯಣದಲ್ಲಿ ಕಂಡುಬರುವ  ಶತ್ರುವಿಗೂ ವಿಜಯವನ್ನು ಹಾರೈಸುವ, ಹೊಂದಾಣಿಕೆ, ಭ್ರಾತೃತ್ವ, ಸೌಹಾರ್ದತೆ, ಪಾತಿವ್ರತ್ಯದ ಮೌಲ್ಯಗಳು ನಮಗೆ ಮಾದರಿಯಾಗಿವೆ. ಮಹಾ ಕುಂಭಮೇಳ ಮತ್ತು ಸಕಲ ದೇವತೆಗಳ ತಾಣವಾದ ಗೋವು,ಸತ್ಸಂಗ  ಸನಾತನ ಪರಂಪರೆಯ ಪ್ರತೀಕಗಳಾಗಿವೆ ಎಂದು ಹೇಳಿದರು. 

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ   ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಕದಳಿ ವಚನ ಮಂಡಳಿ ಮತ್ತು ಶ್ರೀರಾಧಾ ಮಾಧವ ಭಜನಾ ಮಂಡಳಿಯ ಶ್ರೀಮತಿ ಪರಿಮಳಾ ನಾಗರಾಜ್, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆ ನಡೆದರೆ  ಯತೀಶ್ ಎಂ ಸಿದ್ಧಾಪುರ ಅವರು  "ಶ್ರೀಶಾರದಾದೇವಿ ಜೀವನಗಂಗಾ" ಗ್ರಂಥ ಪಾರಾಯಣವನ್ನು ನಡೆಸಿಕೊಟ್ಟರು.

ಕೊನೆಯಲ್ಲಿ ದಿವ್ಯತ್ರಯರಿಗೆ ಮಂಗಳಾರತಿ, ಅನ್ನಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗ ಸಭೆಯಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್, ಪಿ‌.ಎಸ್.ಮಾಣಿಕ್ಯ, ಸತ್ಯನಾರಾಯಣ, ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ನಾಗರಾಜ್, ಗೀತಾ ನಾಗರಾಜ್, ತಳುಕಿನ ತೊಯಜಾಕ್ಷಿ, ವಿಜಯಾಗುರು, ಮಾನಸ, ಸೃಷ್ಟಿ ,ಅಭಿಜ್ವಲ್, ಪ್ರಮೀಳಾ ಜಗದೀಶ್, ಸುಮನಾ ಕೋಟೇಶ್ವರ, ವಿಜಯಾ ರಾಜೇಂದ್ರ, ಲೀಲಾವತಿ , ವೀರಮ್ಮ, ದ್ರಾಕ್ಷಾಯಣಿ, ಜಯಮ್ಮ, ರಶ್ಮಿ ವಸಂತ, ಸಂಗೀತ, ಗೀತಾ ವೆಂಕಟೇಶ್ ರೆಡ್ಡಿ,ಅನ್ವಿಕಾ, ಜಗದಂಬಾ, ಗೀತಾ ಸುಂದರೇಶ್, ಸರಸ್ವತಿ,ಶೃಜನಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ