Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗುವೆ- ಕೆ.ಎಚ್. ಮುನಿಯಪ್ಪ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:    
ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರ್‌ರಚನೆಯ ಕಸರತ್ತು ಚುರುಕುಗೊಂಡಿರುವ ಬೆನ್ನಲ್ಲೇ, ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗುವುದಾಗಿ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರಿಗೆ ಸಚಿವ ಸ್ಥಾನ ನೀಡುವ ಚರ್ಚೆಗಳ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

ಪುತ್ರಿಯ ಸಚಿವ ಸ್ಥಾನ: ಹೈಕಮಾಂಡ್ ಅಂಗಳಕ್ಕೆ ಚೆಂಡು:
ಕೆ.ಎಚ್. ಮುನಿಯಪ್ಪ ಅವರ ಪುತ್ರಿ, ಶಾಸಕಿ ರೂಪಾ ಶಶಿಧರ್ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬ ಊಹಾಪೋಹಗಳು ದಟ್ಟವಾಗಿವೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುನಿಯಪ್ಪ, "ನಾನು ಕೇಂದ್ರ ರಾಜಕಾರಣದಲ್ಲಿ 30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನನಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನನ್ನ ಪುತ್ರಿಯ ಸಚಿವ ಸ್ಥಾನದ ವಿಚಾರದಲ್ಲೂ ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನವೇ ಅಂತಿಮ, ಅದಕ್ಕೆ ನಾವು ಬದ್ಧರಾಗಿರುತ್ತೇವೆ."

ಸಿದ್ದರಾಮಯ್ಯ ನಾಯಕತ್ವಕ್ಕೆ ಮುಕ್ತ ಕಂಠದ ಶ್ಲಾಘನೆ:
ಇದೇ ವೇಳೆ ಹಾಲಿ ನಾಯಕತ್ವದ ಕುರಿತು ಮಾತನಾಡಿದ ಮುನಿಯಪ್ಪ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉತ್ತಮ ಬದಲಾವಣೆಗಳಾಗಿವೆ ಎಂದು ಪ್ರಶಂಸಿಸಿದರು.

"ಸಿದ್ದರಾಮಯ್ಯನವರಿಗೆ ನಾವು ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಬೇಕು. ಒಬ್ಬ ವ್ಯಕ್ತಿ ತಾನು ಅಧಿಕಾರದಲ್ಲಿದ್ದಾಗ ಇಷ್ಟು ಸಮಾಧಾನಚಿತ್ತದಿಂದ, ತಾವೇ ಖುದ್ದಾಗಿ ಪ್ರಪೋಸ್ ಮಾಡಿ ಕೆಲಸ ಮಾಡಿರುವುದನ್ನು ಮೆಚ್ಚಲೇಬೇಕು. ಅವರಿಗೆ ನಾವು ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು," ಎಂದು ಮುಕ್ತ ಕಂಠದಿಂದ ಗುಣಗಾನ ಮಾಡಿದರು.

2028ರ ಅಧಿಕಾರದ ಗದ್ದುಗೆಯ ಮೇಲೆ ಕಣ್ಣು:
ಪಕ್ಷದಲ್ಲಿ ಸದ್ಯದ ಅಧಿಕಾರ ಹಸ್ತಾಂತರ ಅಥವಾ ಬದಲಾವಣೆಗಳು ಸುಗಮವಾಗಿ ನಡೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಮುನಿಯಪ್ಪ, ಸಿದ್ದರಾಮಯ್ಯ ಅವರ ನೇತೃತ್ವದ ತಳಹದಿಯ ಮೇಲೆಯೇ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರ್ಜರಿ ಗೆಲುವು ಸಮಾಜಸೇವಕ ಕೆ.ಆರ್. ಶಿವಪ್ರಕಾಶ್ ಸ್ಮರಣೋತ್ಸವ: ಅಧಿಕಾರ ವ್ಯಾಮೋಹವಿಲ್ಲದ ಸರಳ ಸಜ್ಜನಿಕೆಯ ಧೀಮಂತ ವ್ಯಕ್ತಿತ್ವಪತ್ರಕರ್ತರಿಗೂ ಸಾಮಾಜಿಕ ಜವಾಬ್ದಾರಿ ಇದೆ: ಬೊಮ್ಮಾಯಿಜಾಗತಿಕ ತಾಪಮಾನಕ್ಕೆ ಬ್ರೇಕ್ ಹಾಕಲು ಮಕ್ಕಳಿಂದ ಶ್ಲಾಘನೀಯ ಕಾರ್ಯ: 1000 ಬೀಜದ ಉಂಡೆಗಳ ವಿತರಣೆ!ಉಪ್ಪಾರ ಸಮಾಜದ ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿಹಿರಿಯೂರು ಉಪ ಚುನಾವಣೆಗೆ ಜೆಡಿಯು ನಿಂದ ಅಭ್ಯರ್ಥಿ ಕಣಕ್ಕೆಕುರುಬ ಸಮಾಜಕ್ಕೆ ಕನಿಷ್ಠ 5 ಮಂದಿಗೆ ಸಚಿವ ನೀಡಿಭೀಕರ ಸರಣಿ ಅಪಘಾತ: ಆಟೋಗೆ ಗುದ್ದಿದ ಥಾರ್‌ಕಾರ್‌; ಐವರ ದಾರುಣ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯಸಂಪುಟ ರಚನೆ: ಹೈಕಮಾಂಡ್‌ಗೆ ತಲುಪದ ಸಿಎಂ ಪ್ರಸ್ತಾವನೆ; ಜೂನ್ 3ರ ನಂತರ ನಿರ್ಧಾರ ಎಂದ ಖರ್ಗೆಕೈ ಸಂಪುಟ ಸರ್ಕಸ್: '11:11:11' ಸೂತ್ರದೊಂದಿಗೆ ಡಿಕೆಶಿ ಕ್ಯಾಬಿನೆಟ್ ರಚನೆಗೆ ಹೈಕಮಾಂಡ್ ಮುಂದು; ಡಿಸಿಎಂ ಹುದ್ದೆ ಇಲ್ಲ!