Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರು ಮನೆ-ಮನೆ ಸಮೀಕ್ಷೆ ಚುರುಕು, ಸಾರ್ವಜನಿಕರ ಸಹಕಾರಕ್ಕೆ ತಹಶೀಲ್ದಾರ್ ಮನವಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹಿರಿಯೂರು ತಾಲ್ಲೂಕಿನಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ
-2026ರ ಅಂಗವಾಗಿ ಮನೆ-ಮನೆ ಭೇಟಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಪ್ರಗತಿಯಲ್ಲಿದೆ. ಜೂನ್ 30ರಿಂದ ಆರಂಭವಾಗಿರುವ ಈ ಪ್ರಕ್ರಿಯೆಯು ಜುಲೈ 29ರವರೆಗೆ ನಡೆಯಲಿದ್ದು, ತಾಲ್ಲೂಕಿನ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಗಣತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ವಿಧಾನಸಭಾ ಕ್ಷೇತ್ರ ಸಂಖ್ಯೆ-100 (ಹಿರಿಯೂರು) ವ್ಯಾಪ್ತಿಯ ಒಟ್ಟು 287 ಮತಗಟ್ಟೆ ಭಾಗಗಳ ಜುಲೈ 15ರವರೆಗಿನ ಗಣತಿ ಮತ್ತು ಪ್ರಗತಿ ವಿವರಗಳು ಈ ಕೆಳಗಿನಂತಿವೆ.
ಒಟ್ಟು ಮತದಾರರು (16.06.2020 ರಲ್ಲಿದ್ದಂತೆ): 2,51,482
ವಿತರಿಸಲಾದ ಗಣತಿ ನಮೂನೆಗಳು: 2,51,163

ಗಣಕೀಕರಣಗೊಂಡ (ಆನ್‌ಲೈನ್ ಅಪ್‌ಲೋಡ್ ಆದ) ನಮೂನೆಗಳು: 1,49,698 ಪರಿಷ್ಕರಣೆ ವೇಳೆ ಪತ್ತೆಯಾದ ವಿವರಗಳು:
ಮರಣ ಹೊಂದಿದವರು: 1,026
ಶಾಶ್ವತವಾಗಿ ವಲಸೆ ಹೋದವರು: 989
ದ್ವಿಪ್ರತಿ (ಡಬಲ್ ಎಂಟ್ರಿ) ಹೊಂದಿರುವವರು: 387
ಗೈರು ಹಾಜರಿ: 18

ತಹಶೀಲ್ದಾರ್ ಮನವಿ:
ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಮತಗಟ್ಟೆ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದಾಗ ನಿಖರ ಮಾಹಿತಿ ನೀಡಿ ಸಹಕರಿಸಬೇಕು
," ಎಂದು ಹಿರಿಯೂರು ತಾಲ್ಲೂಕು ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಆದ ಎಂ. ಸಿದ್ದೇಶ್ ಸಾರ್ವಜನಿಕರಲ್ಲಿ ಕೋರಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.