Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತಮ ಪರಿಸರ ಮತ್ತು ಆರೋಗ್ಯ ದೃಷ್ಟಿಯಿಂದ ಜೇನು ಸಾಕೋಣ-ರಜನೀಕಾಂತ್

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಉತ್ತಮ ಪರಿಸರ ಮತ್ತು ನಮ್ಮವರ ಆರೋಗ್ಯ ದೃಷ್ಠಿಯಿಂದ ಜೇನು ಸಾಕೋಣ ಎಂದು ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ್ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಜೇನು ಕೃಷಿಯ ಕುರಿತು ಎರಡು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗ ಜೆಲ್ಲೆಯ ಬೆಳೆ ವೈವಿದ್ಯ ಸ್ವಾಭಾವಿಕ ಸಸ್ಯವರ್ಗ ಹವಾಮಾನ ಮತ್ತು ಹೇರಳ ಮಾನವ ಸಂಪನ್ಮೂಲಗಳು ಜೇನು ಕೃಷಿಗೆ ಪೂರಕವಾಗಿವೆ. ಎಲ್ಲ ರೈತರು ಜೇನು ಸಾಕಲು ಮುಂದಾದಾಗ ಯಾವ ಹೆಚ್ಚಿನ ಖರ್ಚು, ಹೊರಗಿನ ಸಾಮಗ್ರಿ ಇಲ್ಲದೆ ಬೆಳೆ ಇಳುವರಿಯನ್ನು ಕನಿಷ್ಟ ಶೇ. 10 ರಿಂದ ಶೇ. 70 ರಷ್ಟು ಹೆಚ್ಚಿಸಬಹುದಾಗಿದೆಂದರು.

ಜೇನನ್ನು ಭೂಲೋಕದ ಅಮೃತಕ್ಕೆ ಹೋಲಿಸುತ್ತಾ, ಪರಿಶುದ್ದ ಜೇನುತುಪ್ಪವನ್ನು ನಿಂಬೆಹಣ್ಣಿನ ರಸ ಮತ್ತು ನೀರಿನೊಂದಿಗೆ ನಿಯಮಿತವಾಗಿ ಸೇವಿಸಿ 21 ದಿನ ಉಪವಾಸ ಮಾಡಿ ಬೊಜ್ಜು, ದೀರ್ಘಕಾಲಿಕ ಅಸ್ತಮಾ ಮತ್ತು ಗ್ಯಾಸ್ಟ್ರಿಕ್ ನಂತಹ ಕಾಯಿಲೆಯನ್ನು ಗುಣಪಡಿಸಿಕೊಂಡ ವಿಧವನ್ನು ತಮ್ಮ ಸ್ವ ಅನುಭವವನ್ನು ಹಾಜರಿದ್ದ ರೈತರೊಂದಿಗೆ ಹಂಚಿಕೊಂಡರು.
ಜೇನು ಒಂದು ಉತ್ತಮ ದಿವ್ಯ ಔಷಧಿಯಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು. ಮಲಬದ್ಧತೆ ನಿವಾರಣೆಗೆ ರಕ್ತಶುದ್ಧಿ ಮಾಡಲು, ಕೆಮ್ಮು, ಶೀತ, ನೆಗಡಿ, ಜ್ವರವನ್ನು ಉಪಶಮನ ಮಾಡಲು ಸಹಕಾರಿಯಾಗಿದೆ..

ಸಕಲ ಪೋಶಕಾಂಷಭರಿತ ಜೇನು ಅತ್ಯುತ್ತಮ ಶಿಶು ಆಹಾರವಾಗಿದ್ದು, ಮಕ್ಕಳ ಪೋಷಕಾಂಶ ಕೊರತೆ ನೀಗಿಸಲು ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆ ನೀಗಿಸಲು ಮತ್ತು ರಕ್ತದ ವೃದ್ದಿಗೆ ಪರಿಣಾಮಕಾರಿಯಾಗಿದೆ.. ಜೇನನ್ನು ಮಕ್ಕಳಿಗೆ ಪ್ರತಿ ದಿನ 10-15 ಗ್ರಾಂ ಮತ್ತು ಯುವಕರು ಹಾಗೂ ವೃದ್ದರು 20-35 ಗ್ರಾಂ ಸೇವನೆ ಮಾಡಬಹುದು. ಪರಿಶುದ್ದ ಜೇನು ಪಡೆಯಲು ಅತ್ಯಂತ ಸರಳ ಸುಲಭ ಮಾರ್ಗವೆಂದರೆ ನಮ್ಮ ಮನೆ, ಕೈತೋಟ, ತೋಟಗಳಲ್ಲಿ ಜೇನು ಸಾಕಾಣಿಕೆ ಮಾಡುವುದು. ಯಾರಿಗಾಗಿ ಅಲ್ಲವಾದರೂ ನಮಗಾಗಿ, ನಮ್ಮ ಮನೆ ಮಂದಿಯ ಆರೋಗ್ಯದ ಹಿತದೃಷ್ಟಿಯಿಂದ ಹವ್ಯಾಸದ ರೂಪದಲ್ಲಿಯಾದರೂ ಜೇನು ಸಾಕೋಣ. ಆದ ಪ್ರಯುಕ್ತ ಜೇನಿನ ಪ್ರಾಮುಖ್ಯತೆ ಮತ್ತು ಜೇನು ಸಾಕಾಣಿಕೆಯ ತಾಂತ್ರಿಕತೆಯ ಕುರಿತು ಅರಿವುಮೂಡಿಸುವುದು ಈ ತರಬೇತಿಯ ಉದ್ದೇಶವಾಗಿದ್ದು, ರೈತಬಾಂಧವರು ಸದರಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.  



ತಾಂತ್ರಿಕ ಅಧಿವೇಶನದಲ್ಲಿ ಜೇನು ತಜ್ಞರಾದ ಶಾಂತವೀರಯ್ಯ ಮಾತನಾಡಿ, ಜೇನು ತಳಿಗಳಲ್ಲಿ ಹೆಜ್ಜೇನು ಮತ್ತು. ಕೋಲ್ಜೇನುಗಳನ್ನು ಸಾಕಲು ಬರುವುದಿಲ್ಲ. ಆದರೆ ತುಡುವೆ ಜೇನು, ಮೆಲ್ಲಿಫೆರಾ ಮತ್ತು ಮುಝಂಟಿ (ನಸರಿ) ಜೇನು ಸಾಕಲು ಯೋಗ್ಯವಾಗಿವೆ.

ತುಡುವೆ ಜೇನು ಕೆಲಸಗಾರ ಜೇನು ನೊಣಗಳ ಆಹಾರ ತರುವ ಸಾಮಥ್ರ್ಯ ಕಾರ್ಯವ್ಯಾಪ್ತಿ ಗೂಡಿನಿಂದ 1-1.5 ಕಿ.ಮೀ. ದೂರ ತ್ರಿಜ್ಯದ ಕ್ಷೇತ್ರವಿದ್ದು, ಮೆಲ್ಲಿಫೆರ ಜೇನು ನೊಣಗಳು ಗೂಡಿನಿಂದ 2-3 ಕಿ.ಮೀ. ತ್ರಿಜ್ಯದ ಕ್ಷೇತ್ರದಿಂದ ಆಹಾರವನ್ನು ಹೊತ್ತು ತರುತ್ತವೆಂದರು. ಜೇನ್ನೊಣಗಳ ಜೇವನ ಚಕ್ರದಲ್ಲಿ ಮೊಟ್ಟೆ, ಮರಿ (ಲಾರ್ವಾ), ಕೋಶ ಮತ್ತು ಪ್ರೌಢ ಕೀಟವೆಂಬ ನಾಲ್ಕು ಹಂತಗಳಿವೆ. ಜೇನ್ನೊಣಗಳಲ್ಲಿ ಮೊಟ್ಟೆಗಳು ನಿರ್ಲಿಂಗ ರೀತಿಯಲ್ಲಿ ಉತ್ಪಾದನೆ ಆಗುತ್ತವೆ. ಅವು ವೀರ್ಯದಿಂದ ಫಲಿತಾಗಬಹುದು. ಆಗದಿರಬಹುದು. ಫಲಿತ ಮೊಟ್ಟೆಯಿಂದ ರಾಣಿ ಮತ್ತು ಕೆಲಸಗಾರ ಹೊರಬಂದರೆ ಅಫಲಿತ ಮೊಟ್ಟೆಯಿಂದ ಗಂಡು ಹುಟ್ಟುತ್ತದೆಂದರು.

  ಜೇನು ನೊಣಗಳು 180 ಸೆಂಟಿಗ್ರೇಡಿನಿಂದ 360 ಸೆಂಟಿಗ್ರೇಡ್ ತಾಪಮಾನದಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತವೆ. ಹೆಚ್ಚಾದರೂ, ಕಡಿಮೆಯಾದರೂ ಅವುಗಳ ಕೆಲಸದಲ್ಲಿ ಏರುಪೇರಾಗುತ್ತದೆ. ಚಿತ್ರದುರ್ಗದ ಹವಾಮಾನದಲ್ಲಿ ಬಿಸಿಲಿನ ನಿರ್ವಹಣೆ ಅತಿ ಮುಖ್ಯ ಜೇನುಗೂಡುಗಳನ್ನು ನೆರಳಿರುವ ಕಡೆ ಇಡಬೇಕು ಅಥವಾ ನೆರಳು ಮಾಡಬೇಕು ಇಲ್ಲವಾದರೆ, ತುಂಬಾ ಕೆಲಸಗಾರ ಜೇನು ನೊಣಗಳು ಮರಿಗಳಿಗೆ ಗಾಳಿಹಾಕಿ ಒಳಗಿನ ತಾಪ ತಣ್ಣಗಾಗಿಸುವ ಪ್ರಯತ್ನದಲ್ಲಿ ತೊಡಗುತ್ತವೆ. ಆಹಾರ ತರುವ ಕೆಲಸಕ್ಕೆ ಅಡ್ಡಿಯಾಗುತ್ತದೆ, ಕುಟುಂಬ ಬಡವಾಗುತ್ತದೆ ಇಲ್ಲವೆ ಪರಾರಿಯಾಗುತ್ತದೆಂದರು.

ಕೃಷಿಯಲ್ಲಿ ಜೇನ್ನೊಣಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸುತ್ತಾ, ಸಸ್ಯಗಳಲ್ಲಿ ವಂಶಾಭಿವೃದ್ಧಿಯಾಗಲು ಪರಾಗ ಸ್ಫರ್ಶ ಅನಿವಾರ್ಯ. ಅದೇ ಹೂವಿನ ಪರಾಗ ಅದೇ ಹೂವಿನ ಶಲಾಕೆಗೆ ಸ್ಪರ್ಶವಾದಾಗ ಸ್ವಕೀಯ ಪರಾಗ ಸ್ಫರ್ಶವೆಂತಲೂ, ಒಂದು ಹೂವಿನ ಪರಾಗ ಮತ್ತೊಂದು ಹೂವಿನ ಶಲಾಕೆಗೆ (ಹೆಚ್ಚು) ಸ್ಪರ್ಶವಾದಾಗ ಪರಕೀಯ ಪರಾಗ ಸ್ಫರ್ಶವೆಂತಲೂ ಕರೆಯಲಾಗುತ್ತೆ. ಬಹುತೇಕ ಗಿಡಮರ, ಬಳ್ಳಿ, ಬೆಳೆಗಳಲ್ಲಿ ಪರಕೀಯ ಪರಾಗ ಸ್ಪರ್ಶ ಅನಿವಾರ್ಯ. ಪರಕೀಯ ಪರಾಗ ಸ್ಪರ್ಶದ ಶೇ 90 ಕ್ರಿಯೆ ಕೀಟಗಳಿಂದಾದರೆ ಅದರ ಶೇ 90 ಭಾಗ ಕೇವಲ ಜೇನ್ನೊಣಗಳಿಂದ ಆಗುತ್ತದೆ. ಅಡಿಕೆ, ತೆಂಗು, ದಾಳಿಂಬೆ, ಲಿಂಬು, ಸೌತೆ, ಕಲ್ಲಂಗಡಿ ಇನ್ನು ಮುಂತಾದ 1ಲಕ್ಷಕ್ಕೂ ಹೆಚ್ಚಿನ ಜಾತಿಯ ಸಸ್ಯ ಪ್ರಬೇಧÀಗಳಲ್ಲಿ ಜೇನ್ನೊಣಗಳ ಪರಾಗ ಸ್ವರ್ಶ ಅನಿವಾರ್ಯವೆಂದರು.

ಜೇನ್ನ್ನೊಣಗಳು ಸಮರ್ಥ ಪರಾಗ ಸ್ಪರ್ಶಕಗಳು ಏಕೆಂದರೆ ಇವು ರೋಮಭರಿತ ದೇಹವನ್ನು ಹೊಂದಿದ್ದು, ಒಂದು ಹೂವಿನಿಂದ ಮತ್ತೊಂದಕ್ಕೆ ಆಹಾರ ಸಂಗ್ರಹಣೆಗೆ ಹಾರಿದಾಗ ಲಕ್ಷಾಂತರ ಪರಾಗ ಕಣಗಳು ಅದರೊಂದಿಗೆ ಸಾಗಿ ಪರಾಗ ಸ್ಪರ್ಶ ಅಗುತ್ತೆ. ಪರಾಗ ಸಂಗ್ರಹಿಸಲು ಪರಾಗಕ್ಕೂ ಹಾಗೂ ಮಕರಂದ ಸಂಗ್ರಹಿಸಲು ಜೇನುಚೀಲ-ಹೀರಲು ಹೀರುನಳಿಕೆ (ಸೊಂಡಿಲು) ಇದೆ. ಜೇನ್ನೊಣಗಳಿಗೆ ಮಕರಂದ ಶಕ್ತಿ ನೀಡುವ ಆಹಾರವಾದರೆ, ಸಸಾರಜನಕ ಭರಿತ ಪರಾಗ ಲಾರ್ವಾಗಳ ಬೆಳವಣಿಗೆಗೆ ಬೇಕು.

ಆಹಾರ ಸಂಗ್ರಹಿಸುವಾಗ ಅನಿವಾರ್ಯವಾಗಿ ಪರಾಗ ಸ್ಪರ್ಶ ಅಗುತ್ತೆ. ಜೇನ್ನೊಣಗಳು ಸಲವೊಂದಕ್ಕೆ ಒಂದೇ ಜಾತಿಯ ಹೂಗಳಿಂದಲೇ ಆಹಾರ ಸಂಗ್ರಹಿಸುವ ನಿಷ್ಟೆ ಹೊಂದಿವೆ. 25 ರಿಂದ 30 ಮಿ. ಗ್ರಾಂ ಮಕರಂದ ಅಥವಾ 15 ರಿಂದ 20 ಮಿ. ಗ್ರಾಂ ಪರಾಗ ಸಂಗ್ರಹಿಸಲು 100 ರಿಂದ 150 ಹೂಗಳಿಗೆ ಭೇಟಿನೀಡಬೇಕಾಗಬಹುದು ಒಂದು ಕುಟುಂಬದ ವಾರ್ಷಿಕ ಜೇನಿನ ಬೇಡಿಕೆ 100 ರಿಂದ 150 ಕೆ.ಜಿ. ಜೇನು ಮತ್ತು 20-30 ಕೆ. ಜಿ. ಪರಾಗ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಸ್ವಭಾವ, ಮಳೆಯಾಗುತ್ತಿದ್ದು, ಮಳೆನಿಂತÀ ಕೂಡಲೇ ಹೊರಬರುವುವು. ಚಳಿ, ಬಿಸಿಲು ಲೆಕ್ಕಿಸದೆ ದುಡಿಮೆ ಮಾಡುವ ಜೇನ್ನೊಣಗಳು ಉತ್ತಮ ಪರಾಗ ಸ್ಪರ್ಶಕಗಳಾಗಿವೆಂದರು.

ಜೇನು ಸಾಕಾಣಿಕೆಗೆ ಮುಖ್ಯವಾಗಿ ಜೇನುಪೆಟ್ಟಿಗೆ, ಜೇನು ತೆಗೆಯುವ ಯಂತ್ರ ಇತರೆ ವಸ್ತುಗಳೆಂದರೆ ಮರಿ ಪಟ್ಟಿಗೆ, ಹೊಗೆತಿದಿ, ಮುಖ ಪರದೆ, ಹೈವ್ ಟೂಲ್, ಕೈ ಗವಸು, ರಾಣಿ ಪಂಜರ, ಬೀಬ್ರಷ್, ಬುಟ್ಟಿ, ಮೇಣದ ಎರಿ ಬುನಾದಿ, ಇರುವೆ ನಿರೋಧಕ ನಿಲುವು. ಇನ್ನು ಮುಂತಾದ ವಸ್ತುಗಳ ಅವಶ್ಯಕತೆ ಇರುತ್ತದೆಂದರು.
ಜೇನು ಗೂಡುಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಬೇಕು. ಮೇ-ಜೂನ್-ಜುಲೈ ತಿಂಗಳಿನಲ್ಲಿ ಜೇನುಗಳಿಗೆ ಅಷ್ಟಾಗಿ ಪರಾಗ ಮತ್ತು ಮಕರಂದ ದೊರೆಯುವುದಿಲ್ಲ. ಇಂತಹ ಅಭಾವ ಸಮಯದಲ್ಲಿ ಸಂಸಾರ ಕೋಣೆಯಲ್ಲಾಗಲಿ, ಜೇನುಕೋಣೆಯಲ್ಲಾಗಲಿ ಜೇನಿನ ದಾಸ್ತಾನು ಇರುವುದಿಲ್ಲ. ಆಗ 1:1 ರ ಸಕ್ಕರೆ ದ್ರಾವಣ ತಯಾರಿಸಿ ವಾರಕ್ಕೆರಡು ಬಾರಿ ನೀಡಬೇಕು. ಆಹಾರವನ್ನು ಸಂಜೆ ವೇಳೆ ಕೊಡುವುದು ಸೂಕ್ತವೆಂದರು..

3 ದಿನ ಅಥವಾ ವಾರಕ್ಕೊಮ್ಮೆ ಜೇನು ಗೂಡುಗಳ ವಿಕ್ಷಣೆಯಿಂದ ಜೇನುಗಳಿಗೆ ಬರುವ ದಂಡಾಣು ರೋಗಗಳು, ಬೂಸ್ಟು ರೋಗಗಳು, ವೈರಾಣು ರೋಗಗಳ ನಿರ್ವಹಣೆ, ಜೇನುಗಳಿಗಳ  ಪೀಡೆಗಳಾದ ಮೇಣದ ಪತಂಗ, ಕಣಜಗಳು (ಹಳದಿಪಟ್ಟಿ ಕಣಜ), ಪಕ್ಷಿಗಳು, ಇರುವೆ, ಗೊದ್ದಗಳು, ಕಪ್ಪೆ, ಜೇಡರ ಹುಳು, ಡ್ರಾಗನ್ ಫ್ಲೈ, ಅಳಿಲು, ಹಲ್ಲಿ, ಇಲಿ, ಕರಡಿ ಮುಂತಾದವುಗಳನಿರ್ವಹಣೆಗೆ ಸಹಕಾರಿಯಾಗಿದ್ದು ಹೆಚ್ಚಿನ ಮಾಹಿತಿಗಾಗಿ ನನ್ನಂತಹ ಜೇನು ಕೃಷಿ ತಜ್ಞರನ್ನು ಸಂಪರ್ಕಿಸಬಹುದೆಂದರು.

ಕೀಟನಾಶಕಗಳ ಸಿಂಪರಣೆಯಿಂದ ಜೇನು ನೊಣಗಳು ಕೊಲ್ಲುವುದನ್ನು ನಿಯಂತ್ರಿಸಲು, ಹೂ ಇರುವಾಗ ಯಾವುದೇ ಬೆಳೆಗೆ ರಾಸಾಯನಿಕ ಕೀಟನಾಶಕ ಸಿಂಪಡಿಸಬಾರದು. ಅನಿವಾರ್ಯವಾದರೆ, ಬದಲಿ ಅಸಾಂಪ್ರದಾಯಕ ಪದ್ಧತಿಗಳಿಂದ ಕೀಟ ನಿಯಂತ್ರಣ ಸಾಧ್ಯ. ಅಥವಾ ಜೇನು ಗೂಡುಗಳನ್ನೆ ಮತ್ತೊಂದು ಜಾಗಕ್ಕೆ ಸ್ಥಳಾಂತರಿಸಬೇಕೆಂದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆಯೋಜಿಸಲಾದ ಉತ್ತಮ ತರಬೇತಿ ಕಾರ್ಯಕ್ರಮಗಳ ಕಾರ್ಯವೈಖರಿ ಶ್ಲಾಘಿಸಿ ರಾಜ್ಯ ಮಟ್ಟದಲ್ಲಿ ಉತ್ತಮ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಎಂದು ಪ್ರಶಸ್ತಿ ಲಭಿಸಿದ್ದಕ್ಕೆ ಹಾಜರಿದ್ದ ರೈತಬಾಂಧವರು ಮತ್ತು ಗಣ್ಯರು ಸಹಾಯಕ ನಿರ್ದೇಶಕ ಆರ್. ರನಜೀಕಾಂತ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಸುರೇಶ್ ಏಕಬೋಟೆ, ಪ್ರಗತಿಪರ ರೈತರಾದ ದಯನಂದಮೂರ್ತಿ ಹಾಗೂ ರೈತ ಪರ ಹೋರಾಟಗಾರ ಸಿದ್ದವೀರಪ್ಪ ಇದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ