ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ನಗರದ ಹಿರಿಯ ಪತ್ರಕರ್ತರು ಹಾಗೂ ಸರಳ, ಸಜ್ಜನಿಕೆಯ ಅತ್ಯಂತ ಸ್ನೇಹಮಯ ವ್ಯಕ್ತಿತ್ವದ ಆರ್ಯವೈಶ್ಯ ಮಂಡಳಿ ಸದಸ್ಯ ಪಿ.ಆರ್.ಸತೀಶ್ ಬಾಬುರವರಿಗೆ ಆರೋಗ್ಯ, ಆಯಸ್ಸು, ಯಶಸ್ಸಿನ ಜೊತೆಗೆ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂಬುದಾಗಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ವಿ.ಸತ್ಯನಾರಾಯಣ ಶುಭಹಾರೈಸಿದ್ದಾರೆ.
ನಗರದ ವಾಸವಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಂಡಳಿ ಸದಸ್ಯರಾದ ಪಿ.ಆರ್.ಸತೀಶ್ ಬಾಬುರವರ ಹುಟ್ಟುಹಬ್ಬದ ಪ್ರಯುಕ್ತ ಆರ್ಯವೈಶ್ಯ ಸಮಾಜದ ವತಿಯಿಂದ ಶಾಲು ಹೊದಿಸಿ, ಸನ್ಮಾನಿಸಿ, ಗೌರವಿಸಿ, ನಂತರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ವಿ.ಸತ್ಯನಾರಾಯಣ, ಗೌರವ ಅಧ್ಯಕ್ಷರಾದ ಎಲ್.ಆನಂದಶೆಟ್ಟಿ, ಉಪಾಧ್ಯಕ್ಷ ಕೆ.ವಿ.ಅಮರೇಶ್, ಕಾರ್ಯದರ್ಶಿ ಪಿ.ವಿ.ನಾಗರಾಜ್, ಪಿ.ಆರ್.ಸತೀಶ್ ಬಾಬುರವರ ಮೊಮ್ಮಗ ಸಾಯಿತುಷಾರ್ ಉಪಸ್ಥಿತರಿದ್ದರು.



