ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಿತ್ರದುರ್ಗದ ಮಾರುತಿ ನಗರದ ನಿವಾಸಿ ಟಿ.ರಾಮಾಂಜನೇಯ(ರಾಮು) ಇವರ ಸಮಾಜ ಸೇವೆಯನ್ನು ಗುರುತಿಸಿ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರೀಸರ್ಚ್ ಯೂನಿವರ್ಸಿಟಿ ಏಷಿಯಾ ಇಂಟರ್ ನ್ಯಾಷನಲ್ ಕಲ್ಚರಲ್ ಅಕಾಡೆಮಿಯಿಂದ ಪಾಂಡಿಚೇರಿಯಲ್ಲಿ ಗೌರವ ಡಾಕ್ಟರೇಟ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಆಂಧ್ರ ಪ್ರದೇಶದ ನಿವೃತ್ತ ನ್ಯಾಯಾಧೀಶರಾದ ಡಾ.ಜೆ.ಹರಿದಾಸ್, ಆಂಧ್ರ ಪ್ರದೇಶ ವಿಜಯವಾಡದ ಚಾಮುಂಡೇಶ್ವರಿ ಶಕ್ತಿ ಪೀಠದ ಶಿವಮೂರ್ತಿ ಸ್ವಾಮಿ, ಡಾ.ರವಿಚಂದ್ರನ್, ಡಾ.ಸಿ.ಎಲ್.ಶಿವಮೂರ್ತಿ, ಡಾ.ಅರುಣ್ ಚಿನ್ನದೊರೈ ಇನ್ನು ಮುಂತಾದವರು ಡಾಕ್ಟರೇಟ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಹಾಜರಿದ್ದರು.



