Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನವೀಯತೆ ಜೀವಂತವಿದೆ, ಹೊರ ದೇಶದಲ್ಲೂ ಕನ್ನಡಿಗರ ಸಹಾಯಕ್ಕೆ ಬಂದ ಮಾಧವ್

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನವೀಯತೆ ಜೀವಂತವಿದೆ. ಮಾಧವ್ ಅವರ ಮಹಾನ್ ಮನಸ್ಸು. ಶ್ರೀಯುತ ಮಾಧವ್ ಅವರು ವ್ಯವಹಾರ ಸಂಬಂಧವಾಗಿ ದುಬೈಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ಅಚಾನಕ್ ಯುದ್ಧದ ಪರಿಸ್ಥಿತಿ ಉಂಟಾದ ಹಿನ್ನಲೆಯಲ್ಲಿ, ಕರ್ನಾಟಕದಿಂದ ಪ್ರವಾಸಕ್ಕೆ ಬಂದಿದ್ದ ಸುಮಾರು 50 ಜನರು ಸಂಕಷ್ಟಕ್ಕೆ ಸಿಲುಕಿದ ಪರಿಸ್ಥಿತಿ ಎದುರಾಯಿತು.
ಆ ಸಮಯದಲ್ಲಿ ಅವರತ್ತ ಕೈಚಾಚಿ
, ಅವರ ಸುರಕ್ಷತೆ ಹಾಗೂ ದಿನನಿತ್ಯದ ಸಂಪೂರ್ಣ ಖರ್ಚು ವೆಚ್ಚವನ್ನು ಸ್ವತಃ ಹೊತ್ತುಕೊಂಡು ನೋಡಿಕೊಳ್ಳುತ್ತಿರುವುದು ನಿಜವಾಗಿಯೂ ಅಪರೂಪದ ಮಾನವೀಯತೆ.

ಇವತ್ತಿನ ಕಾಲದಲ್ಲಿ ಮನೆಯಲ್ಲಿರುವ ಮೂರ್ನಾಲ್ಕು ಜನರ ಕಷ್ಟವನ್ನು ನೋಡಿಕೊಳ್ಳುವುದೇ ಕೆಲವರಿಗೆ ಕಷ್ಟವಾಗುತ್ತಿರುವ ಸಮಯದಲ್ಲಿ, ವಿದೇಶದ ನೆಲದಲ್ಲಿ ಸಂಕಷ್ಟದಲ್ಲಿರುವ 50 ಜನರನ್ನು ತಮ್ಮವರಂತೆ ಕಾಣಿಸಿ ಅವರ ಊಟ, ವಸತಿ ಹಾಗೂ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತಿರುವುದು ನಿಜಕ್ಕೂ ಅಸಾಮಾನ್ಯವಾದ ಸಹೃದಯತೆಯ ಉದಾಹರಣೆ. ಇದು ಕೇವಲ ಸಹಾಯವಲ್ಲ, ಮಾನವೀಯತೆ ಎಂಬ ಮೌಲ್ಯ ಇನ್ನೂ ಬದುಕಿದೆ ಎಂಬುದಕ್ಕೆ ಜೀವಂತ ಸಾಕ್ಷಿ.

ಇಂತಹ ಸಂಕಷ್ಟದ ಸಮಯದಲ್ಲಿ ಮುಂದೆ ಬಂದು ಜನರಿಗೆ ಧೈರ್ಯ ತುಂಬುವುದು, ಅವರಿಗೆ ಭದ್ರತೆ ಮತ್ತು ಆಶ್ರಯ ನೀಡುವುದು ಯಾವ ದೊಡ್ಡ ಸಾಧನೆಗೂ ಕಡಿಮೆ ಅಲ್ಲ. ಮಾಧವ್ ಅವರ ಈ ಕಾರ್ಯ ಕೇವಲ ಒಂದು ಸಹಾಯ ಕಾರ್ಯವಲ್ಲ; ಅದು ಮಾನವೀಯತೆಯ ಮಹತ್ವವನ್ನು ಮತ್ತೆ ನೆನಪಿಸುವ ಪುಣ್ಯ ಕಾರ್ಯ.

ಇಂತಹ ಮಹತ್ವದ ಮಾನವೀಯ ಸೇವೆಯನ್ನು ಮಾಡುತ್ತಿರುವ ಮಾಧವ್ ಅವರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು. ಅವರ ಈ ಉದಾತ್ತ ಮನಸ್ಸು ಇನ್ನೂ ಹಲವರಿಗೆ ಪ್ರೇರಣೆಯಾಗಲಿ, ಸಮಾಜದಲ್ಲಿ ಮಾನವೀಯತೆ ಮತ್ತು ಸಹಾನುಭೂತಿ ಮತ್ತಷ್ಟು ಬೆಳೆಯಲಿ ಎಂಬ ಆಶಯ. ನಿಜವಾಗಿಯೂ ಇಂತಹ ವ್ಯಕ್ತಿಗಳು ನಮ್ಮ ನಡುವೆ ಇರುವುದೇ ಸಮಾಜದ ದೊಡ್ಡ ಭಾಗ್ಯ ಎಂದು ಕೆ.ಟಿ ಶ್ರೀನಿವಾಸ್, ಬೆಂಗಳೂರು ಸ್ಮರಿಸಿದ್ದಾರೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ