ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಗ್ರಾಹಕರ ಬೇಡಿಕೆ ಆಧರಿಸಿ ನೂತನ ಪೈಪ್ ಲೈನ್ ಮಾದರಿಯ ಸಿ ಎನ್ ಜಿ ಗ್ಯಾಸ್ ಬಂಕ್ ನಿರ್ಮಿಸಲಾಗಿದ್ದು ಹಲವು ಗಣ್ಯರ ಮುಖೇನಾ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಘಟಕವನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಸಿ ಎನ್ ಜಿ ಬಂಕ್ ಮಾಲೀಕರಾದ ಬಿ ಕೆ ನಾರಾಯಣಸ್ವಾಮಿ ತಿಳಿಸಿದರು.
ದೊಡ್ಡಬಳ್ಳಾಪುರ - ಯಲಹಂಕ ಮುಖ್ಯ ರಸ್ತೆಯ ಹೊಸಹುಡ್ಯ ಗೇಟ್ ಬಳಿ ನೂತನ ಸಿ ಎನ್ ಜಿ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ 3 ವರ್ಷಗಳ ಹಿಂದೆ ಈ ಪೆಟ್ರೋಲ್ ಬಂಕ್ ಪ್ರಾರಂಭಿಸಿದ್ದೆವು ಅಂದಿನಿಂದ ಪೆಟ್ರೋಲ್ ಡಿಸೇಲ್ ಗಾಗಿ ಬರುವ ಹಲವು ಗ್ರಾಹಕರು ಸಿ ಎನ್ ಜಿ ಸೇವೆ ಆರಂಭಿಸುವಂತೆ ಮನವಿ ಮಾಡುತ್ತಿದ್ದು ಗ್ರಾಹಕರ ಆಶಯದಂತೆ ಇಂದು ತಾಲ್ಲೂಕಿನ ಮೊದಲ ಸಿ ಎನ್ ಜಿ ಸೇವೆ ಆರಂಭಿಸಲಾಗಿದ್ದು ತಕ್ಅಲ್ಲೂಕಿನ ಎಲ್ಲ ಗ್ರಾಹಕರು ಈ ಸೇವೆಯಾ ಸದ್ಬಳಕೆ ಪಡೆದುಕೊಳ್ಳಲಿ ಎಂದರು.
ಗ್ರಾಹಕರ ಸುರಕ್ಷತೆ ನಮಗೆ ಮೊದಲ ಆಧ್ಯತೆ ನಮ್ಮ ಬಳಿ ಇಂಧನ ಪಡೆಯಲು ಬರುವ ಸಾಕಷ್ಟು ಗ್ರಾಹಕರು ನಿತ್ಯ ನಿರಂತರ ನಮ್ಮೊಡನೆ ಉತ್ತಮ ಬಾಂದವ್ಯ ಹೊಂದಿದ್ದು , ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನೆಡೆಯುತ್ತಿದೆ ಎಂದರು.


