ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಬಸವಭವನದಲ್ಲಿ ತಾಲ್ಲೂಕು ಪುಟ್ಟಣ್ಣ ಅಭಿಮಾನಿ ಬಳಗದವರಿಂದ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಅಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸಭಾಪತಿ ಹಾಲಿ ಸದಸ್ಯರಾದ ಪುಟ್ಟಣ್ಣ ನವರು ಮಾತನಾಡಿ ಶಿಕ್ಷಕರ ಉಪನ್ಯಾಸಕರ ಪ್ರಮುಖ ಸಮಸ್ಯೆಗಳನ್ನು ಹಲವಾರು ಬೇಡಿಕೆಗಳನ್ನು ಹಂತ ಹಂತ ವಾಗಿ ಬಗೆಹರಿಸಲಾಗುವುದು.
ಶಿಕ್ಷಣದಲ್ಲಿನ ಅವ್ಯವಸ್ಥೆ ತೊಂದರೆಗಳನ್ನು ಬಗೆಹರಿಸಲು ಶಿಕ್ಷಕರ ಪ್ರತಿನಿದಿಯಾಗಿ ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು. ಶಿಕ್ಷಕರನ್ನು ಎಸ್ ಐ ಆರ್ ಜನಗಣತಿ ಜಾತಿಗಣತಿ ಆರ್ಥಿಕ ಸಮಿಕ್ಷೆಗಳು ಮತ್ತಿತರರ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಅದಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಶಿಕ್ಷಕರು ಉಪನ್ಯಾಸಕರು ಪಾಠ ಪ್ರವಚನಗಳಿಗೆ ಮಾತ್ರ ತೊಡಗಿಸಿಕೊಳ್ಳುವಂತೆ ಮಾಡುವ ಕೆಲಸ ಮಾಡುತ್ತೇನೆ. ಓಪಿಎಸ್ ವ್ಯವಸ್ಥೆ ಜಾರಿಗೆ ಬರುವಂತೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನಿರ್ದೇಶಕ ಗಂಗಮಾರೇಗೌಡ ಮಾತನಾಡಿ ಪುಟ್ಟಣ್ಣನವರು ಶಿಕ್ಷಕರ ಉಪನ್ಯಾಸಕರ ಕಣ್ಮಣಿಯಾಗಿ ಕಾರ್ಯನಿರ್ವಹಣೆ ಮಾಡುತಿದ್ದಾರೆ. ತಾಲ್ಲೂಕಿನ ಎಲ್ಲಾ ಶಿಕ್ಷಕರ ಉಪನ್ಯಾಸಕರ ಸಂಪೂರ್ಣ ಬೆಂಬಲ ಪುಟ್ಟಣ್ಣ ನವರಿಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖಾಸಗಿ ಆಡಳಿತ ಮಂಡಳಿಯ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎ ಸುಬ್ರಮಣಿ, ಎಸ್. ಎಲ್. ಆರ್.ರಮೇಶ್, ತಾಲ್ಲೂಕು ಕಸಪಾದ ಅಧ್ಯಕ್ಷರಾದ ಪಿ. ಗೊವಿಂದರಾಜು, ಲಾವಣ್ಯ ಪದವಿ ಪೂರ್ಯ ಕಾಲೇಜು ಪ್ರಾಂಶುಪಾಲ ಎಂ. ಸಿ ಮಂಜುನಾಥ್, ಶ್ರೀ ವಾಣಿ ಕಾಲೇಜು ಪ್ರಾಂಶುಪಾಲ ಬಿ. ಆರ್.ವೇಣುಗೋಪಾಲ್, ವಿದ್ಯಾನಿಧಿ ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಪ್ರಾಂಶುಪಾಲರುಗಳಾದ ಟಿ.ಆರ್ ಶ್ರೀರಾಮೇಗೌಡ, ಉಮೇಶ್ ಬಾವಿಕಟ್ಟೆ, ಶ್ರೀನಿವಾಸ್, ಬಿಎಡ್ ಕಾಲೇಜು ಪ್ರಾಂಶುಪಾಲ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ರಾಜಶೇಖರ್, ಪ್ರತಿನಿಧಿ ನಾಗಸಂದ್ರ ಮಹೇಶ್, ಶಿವಕುಮಾರ್, ಚಿಕ್ಕೇಗೌಡ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಹಲವಾರು ಪದಾಧಿಕಾರಿಗಳು ವಿವಿಧ ಶಾಲೆ ಕಾಲೇಜುಗಳ ಸಿಬ್ಬಂದಿಗಳು ಬಾಗವಹಿಸಿದ್ದರು.




