Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ಮಿಕರ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  
ಉದ್ಯೋಗದಾತರು ತಮ್ಮಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಉದ್ಯೋಗಿಗಳನ್ನು ಒಳಗೊಂಡಂತೆ ಎಲ್ಲಾ ಉದ್ಯೋಗಿಗಳನ್ನು ಸ್ಪ್ರೀ 2025 ಯೋಜನೆಯಡಿಯಲ್ಲಿ ನೋಂದಾಯಿಸಿದ್ದಲ್ಲಿ ನೋಂದಾವಣೆ ದಿನದಿಂದಲೇ ಕಾರ್ಮಿಕರ ವಿಮಾ ಕಾಯ್ದೆಯಡಿ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ.


ಸ್ಪ್ರೀ 2025 (ಉದ್ಯೋಗದಾತರು ಮತ್ತು ಉದ್ಯೋಗಿಗಳನ್ನು ನೋಂದಾವಣೆ ಉತ್ತೇಜಿಸುವ ಯೋಜನೆ 2025) ಯೋಜನೆಯನ್ನು ಕಾರ್ಮಿಕರ ವಿಮಾ ನಿಗಮವು ಜಾರಿಗೆ ತಂದಿದ್ದು, ಈ ಯೋಜನೆಯು 1ನೇ ಜುಲೈನಿಂದ 31ನೇ ಡಿಸೆಂಬರ್ ವರೆಗೆ ಜಾರಿಯಲ್ಲಿದ್ದು, ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಒಂದು ಬಾರಿಯ ಅವಕಾಶವನ್ನು ನೀಡಿದ್ದು, ಈ ಅವಧಿಯಲ್ಲಿ ಉದ್ಯೋಗದಾತರು ನೋಂದಾವಣೆಯಾದಲ್ಲಿ ಹಿಂದಿನ ಅವಧಿಗೆ ಯಾವುದೇ ದಂಡ ಅಥವಾ ಬಾಕಿ ಪಾವತಿಯ ಅವಶ್ಯಕತೆ ಇರುವುದಿಲ್ಲ. ಮತ್ತು ಯಾವುದೇ ತಪಾಸಣೆ ಇರುವುದಿಲ್ಲ.


ಈ ಯೋಜನೆಯ ಅನುಷ್ಠಾನದಂತೆ ಮತ್ತು ಮುಖ್ಯ ಕಛೇರಿಯ ಸೂಚನೆಯಂತೆ ಉಪಪ್ರಾದೇಶಿಕ ಕಛೇರಿ, ಬೊಮ್ಮಸಂದ್ರ ಕಛೇರಿಯು ಫಲಾನುಭವಿಗಳ ಸಹಕಾರದಲ್ಲಿ ಮತ್ತು ರಾಜ್ಯ ಸರ್ಕಾರದ ವಿವಿಧ ಕಛೇರಿಗಳ ಸಹಯೋಗದೊಡನೆ ಹಲವಾರು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಅವಧಿಯಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ನೋಂದಾವಣೆಯಾದಲ್ಲಿ ಅವರಿಗೆ ದೊರಕುವ ಅನುಕೂಲತೆಗಳ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ. ಈ ಅವಧಿಯಲ್ಲಿ ಸಾವಿರಾರು ಉದ್ಯೋಗಿಗಳನ್ನು ಈ ಯೋಜನೆಯಡಿಯಲ್ಲಿ ನೋಂದಾಯಿಸಲಾಗಿದೆ ಮತ್ತು ಅವರ ಅಗತ್ಯತೆಗಳಿಗೆ ಅನುಸಾರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಇದುವರೆವಗೂ ಈ ಕಛೇರಿಯು ವಿವಿಧ ಸ್ಥಳಗಳಲ್ಲಿ 23 ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ಕೈಗಾರಿಕಾ ಸಂಘಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಗಿದೆ ಮತ್ತು ಉದ್ಯೋಗಿಗಳನ್ನು ಸಾಮಾಜಿಕ ಸುರಕ್ಷತೆಯ ವ್ಯಾಪ್ತಿಗೆ ತರಲಾಗಿದೆ.

ಈ ಯೋಜನೆಯು ಒಂದು ಮೈಲಿಗಲ್ಲಾಗಿದ್ದು ಅರ್ಧ ಅವಧಿಯನ್ನು ಕ್ರಮಿಸಿ ಸಫಲತೆಯ ಸಾಗುತ್ತಿದ್ದು ಎಲ್ಲಾ ಉದ್ಯೋಗದಾತರು ಈ ಅವಧಿಯಲ್ಲಿ ತಮ್ಮ ಸಂಸ್ಥೆಗಳು, ಘಟಕಗಳನ್ನು ಹಾಗೂ ಉದ್ಯೋಗಿಗಳನ್ನು ನೋಂದಾವಣೆ ಮಾಡುವುದರ ಮೂಲಕ ಕಾರ್ಮಿಕರ ರಾಜ್ಯ ವಿಮಾ ನಿಗಮದಿಂದ ದೊರೆಯುವ ಹಲವಾರು ರೀತಿಯ ಸೌಲಭ್ಯಗಳನ್ನು ಅನುಕೂಲ ಮಾಡಿಕೊಡಲು ಇಎಸ್‍ಐಸಿಯು ಈ ಮೂಲಕ ಕೋರುತ್ತಿದೆ.

ಪಡೆಯಲು ಇಎಸ್‍ಐಸಿಯ ಈ ಉಪಕ್ರಮವು ಸರಳ ಹಾಗೂ ತಡಹರಿತ ವ್ಯವಹಾರವನ್ನು ಪ್ರೋತ್ಸಾಹಿಸುತ್ತಾ ಉದ್ಯೋಗದಾತರು ಯಾವುದೇ ದಂಡ ಶುಲ್ಕವಿಲ್ಲದೆ ತಮ್ಮ ಸಂಸ್ಥೆಯನ್ನು ನೋಂದಾವಣೆ ಮಾಡಿಕೊಂಡು ಮತ್ತು ಉದ್ಯೋಗಿಗಳನ್ನು ನೋಂದಾವಣೆ ಮಾಡಿ ಆರೋಗ್ಯ ಸೌಲಭ್ಯ ಹಾಗು ಸಾಮಾಜಿಕ ಸುರಕ್ಷೆಯ ವ್ಯಾಪ್ತಿಯನ್ನು ವಿಸ್ತರಿಸುವುದರ ಜೊತೆಗೆ ಈ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವುದಾಗಿದೆ.

ಸ್ಪ್ರೀ / ಅಮ್ನೆಸ್ಟಿ/ ಇಎಲ್‍ಐ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26786391 ಅಥವಾ ಇ-ಮೇಲ್  [email protected]  ಗೆ ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ