Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

Advertisement
ಚಂದ್ರವಳ್ಳಿ ನ್ಯೂಸ್, ಹೈದರಾಬಾದ್‌:
ಬಾಹುಬಲಿ ಹೆಸರಿನ ರಾಕೆಟ್ ಎಲ್‌ವಿಎಂ3-ಎಂ5 ಮೂಲಕ 4410 ಕೆಜಿ ತೂಕದ ಸಿಎಂಎಸ್‌03 ಉಪಗ್ರಹವನ್ನು ಯಶಸ್ವಿ ಉಡಾವಣೆ ಮಾಡಿದ್ದು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.
ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಇಸ್ರೋ ತಂಡಕ್ಕೆ ಅಭಿನಂದನೆಗಳ ಸುರಿಮಳೆಯಾಗಿದೆ.


LVM3M5 ಮಿಷನ್‌ನ ಯಶಸ್ವಿ ಉಡಾವಣೆಯೊಂದಿಗೆ ಭಾರತದ ಬಾಹುಬಲಿ ಯಶಸ್ವಿಯಾಗಿ ಆಕಾಶದತ್ತ ಮುಖ ಮಾಡಿ ಏರುತ್ತಿದ್ದು ಇದಕ್ಕೆ ಶ್ರಮಿಸಿದ ಇಸ್ರೋ ಅಧ್ಯಕ್ಷ  ಡಾ. ವಿ. ನಾರಾಯಣನ್ ಸೇರಿದಂತೆ ಇಸ್ರೋ ವಿಜ್ಞಾನಿಗಳನ್ನು ಇಡೀ ದೇಶ ಅಭಿನಂದಿಸಿದೆ.


ಬಾಹುಬಲಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ LVM3-M5 ರಾಕೆಟ್, CMS-03 ಸಂವಹನ ಉಪಗ್ರಹವನ್ನು ಹೊತ್ತೊಯ್ಯುತ್ತಿದೆ, ಇದು ಭಾರತೀಯ ನೆಲದಿಂದ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಗೆ ಉಡಾವಣೆ ಮಾಡಲಾದ ಅತ್ಯಂತ ಭಾರವಾದದ್ದು ಎನ್ನುವುದು ಅತೀ ಮುಖ್ಯವಾದ ವಿಷಯವಾಗಿದೆ.



ಇಸ್ರೋ ಒಂದರ ನಂತರ ಒಂದರಂತೆ ಯಶಸ್ಸು ಸಾಧಿಸುತ್ತಲೇ ಇರುವುದು ದೇಶದ ಹಿರಿಮೆ ಹೆಚ್ಚಿಸಿದೆ.
ಈ ಯಶಸ್ವಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರ ಬೆಂಬಲ ನೀಡುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ
ಅವರಿಗೆ ಇಸ್ರೋ ಧನ್ಯವಾದಗಳನ್ನು ತಿಳಿಸಿದೆ.


ಇಸ್ರೋ ಭಾರತದ ನೆಲದಿಂದ ಅತ್ಯಂತ ಭಾರವಾದ GEO ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭಾರತೀಯ ಬಾಹ್ಯಾಕಾಶ ವಲಯವು ಭಾರತೀಯ ಪ್ರದೇಶ ಮತ್ತು ಸುತ್ತಮುತ್ತಲಿನ ಬಳಕೆದಾರ ಸಮುದಾಯಕ್ಕೆ ಅಮೂಲ್ಯವಾದ ಸೇವೆಗಳನ್ನು ಒದಗಿಸಲು ಎತ್ತರಕ್ಕೆ ಏರುತ್ತಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಮಹತ್ವದ ಮೈಲಿಗಲ್ಲ ಸಾಧಿಸಿದೆ.


ಇಸ್ರೋ ತನ್ನ ಅತಿದೊಡ್ಡ ಭಾರದ(ತೂಕ) ರಾಕೆಟ್ ಎಲ್‌ವಿಎಂ3-ಎಂ5 ಉಡಾಯಿಸಲಾದ ಅತಿ ಹೆಚ್ಚು ತೂಕದ (4.4 ಟನ್) ಸಂವಹನ ಉಪಗ್ರಹ CMS-03 ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಬಾಹುಬಲಿ ಎಂದೇ ಖ್ಯಾತಿ ಪಡೆದಿರುವ ಈ ಉಪಗ್ರಹದ ಉಡಾವಣೆಯನ್ನು ಹೈದರಾಬಾದ್ ನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಾಣಾ ನೆಲೆಯಿಂದ ಭಾನುವಾರ ಉಡಾವಣಾ ಕಾರ್ಯಾಚರಣೆ ಮಾಡಲಾಯಿತು.


ವಿವಿಧ ಹಂತಗಳು-
ಉಡಾವಣೆಯಾದ
16 ನಿಮಿಷಗಳ ನಂತರ ಒಟ್ಟು 642 ಟನ್ ತೂಕದ ಮತ್ತು 43.5 ಮೀಟರ್ ಎತ್ತರದ ರಾಕೆಟ್, 4410 ಕೆಜಿ ತೂಕದ ಸಿಎಮ್ಎಸ್-03 ಉಪಗ್ರಹವನ್ನು ಜಿಯೋ-ಸಿಂಕ್ರೊನಸ್ ಟ್ರಾನ್ಸ್‌ಫರ್‌ಆರ್ಬಿಟ್‌ಗೆ ಇರಿಸಿತು. ಉಡಾವಣೆಯ ಸಮಯದಲ್ಲಿ ಎಸ್‌200 ಬೂಸ್ಟರ್‌ಗಳು ಜ್ವಲಿಸಿ, 131.14 ಸೆಕೆಂಡುಗಳ ನಂತರ ಸುಮಾರು 62.3 ಕಿ.ಮೀ. ಎತ್ತರದಲ್ಲಿ ಬೇರ್ಪಟ್ಟವು. 106.94 ಸೆಕೆಂಡುಗಳಲ್ಲಿ ಎಲ್‌110 ಹಂತವು ಜ್ವಲಿಸಿ, 304.70 ಸೆಕೆಂಡುಗಳಲ್ಲಿ 166.9 ಕಿ.ಮೀ. ಎತ್ತರದಲ್ಲಿ ಬೇರ್ಪಟ್ಟಿತು.

307.10 ಸೆಕೆಂಡುಗಳಲ್ಲಿ ಈ ಹಂತವು ಜ್ವಲಿಸಿ, 950.94 ಸೆಕೆಂಡುಗಳವರೆಗೆ ಮುಂದುವರೆಯಿತು. ಇದು 10.14 ಕಿ.ಮೀ/ಸೆಕೆಂಡಿನ ಜಡ ವೇಗವನ್ನು ಸಾಧಿಸಿತು. ಅಲ್ಲದೆ 965.94 ಸೆಕೆಂಡುಗಳಲ್ಲಿ (ಸುಮಾರು 179.8 ಕಿ.ಮೀ. ಎತ್ತರದಲ್ಲಿ) CMS-03 ಉಪಗ್ರಹವು ಉಡಾವಣಾ ವಾಹನದಿಂದ ಯಶಸ್ವಿಯಾಗಿ ಬೇರ್ಪಟ್ಟು ಉದ್ದೇಶಿತ ಕಕ್ಷೆ ತಲುಪುವ ಮೂಲಕ ಬಹುದೊಡ್ಡ ಸಾಧನೆಗೈಯಿತು.

ಜೀವಿತಾವಧಿ 15 ವರ್ಷ-
ನವೆಂಬರ್-2 ರಂದು ಭಾನುವಾರ ಉಡಾವಣೆಯಾದ ರಾಕೆಟ್ ಯಶಸ್ಸು ಕುರಿತು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಪ್ರತಿಕ್ರಿಯಿಸಿ
, "LVM3-M5 ನಿಖರವಾಗಿ ಅಗತ್ಯವಿರುವ ಕಕ್ಷೆಗೆ CMS-03 ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿದೆ. ಇದು LVM38ನೇ ಸತತ ಯಶಸ್ವಿ ಉಡಾವಣೆಯಾಗಿದೆ ಮತ್ತು CMS-03 GTO ಕಕ್ಷೆಯಲ್ಲಿ ಇರಿಸಲಾದ ಅತಿ ಹೆಚ್ಚು ತೂಕದ ಉಪಗ್ರಹವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ವಾಹನದ ಕಾರ್ಯಕ್ಷಮತೆ ಹೆಚ್ಚಿಸಿ ಅದರ ಪೇಲೋಡ್ ಸಾಮರ್ಥ್ಯವನ್ನು ಶೇ.
10 ರಷ್ಟು ಹೆಚ್ಚಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.


ಈಗ ಉಡಾವಣೆ ಮಾಡಲಾಗಿರುವ ಉಪಗ್ರಹವು 15 ವರ್ಷಗಳ ಜೀವಿತಾವಧಿ ಹೊಂದಿದ್ದು, ಅನೇಕ ಹೊಸ ತಂತ್ರಜ್ಞಾನಗಳನ್ನು ಹೊಂದಿದೆ. ಕಠಿಣ ಹವಾಮಾನ ಪರಿಸ್ಥಿತಿಗಳ ನಡುವೆಯೂ ನಾವು ಈ ಮಿಷನ್ ಅನ್ನು ಪೂರ್ಣಗೊಳಿಸಿದ್ದೇವೆ. ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ನಂತರ ಮೊದಲ ಬಾರಿಗೆ C20 ಕ್ರಯೋಜೆನಿಕ್ ಎಂಜಿನ್ ಅನ್ನು ಮರು-ಜ್ವಲಿಸಲಾಗಿದೆ. ಇದು LVM3 ಅನ್ನು ಬಳಸಿಕೊಂಡು ಉಪಗ್ರಹಗಳನ್ನು ಬಹು ಕಕ್ಷೆಗಳಲ್ಲಿ ಇರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.


ಉಡಾವಣೆಯಾದ ಉಪಗ್ರಹದ ಉದ್ದೇಶ-
CMS-03 ಒಂದು ಬಹು-ಬ್ಯಾಂಡ್ ಸಂವಹನ ಉಪಗ್ರಹವಾಗಿದ್ದು, ಇದು ಭಾರತೀಯ ಭೂಪ್ರದೇಶ ಸೇರಿದಂತೆ ವಿಶಾಲ ಸಾಗರ ಪ್ರದೇಶದ ಮೇಲೆ ಸಂವಹನ ಸೇವೆ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಉಪಗ್ರಹವನ್ನು ನಾಗರಿಕ ಮತ್ತು ಕಾರ್ಯತಂತ್ರದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದು ನೌಕಾಪಡೆಯ ಕಾರ್ಯತಂತ್ರದ ಕಾರ್ಯಾಚರಣೆಗಳಿಗೆ ನಿರ್ಣಾಯಕವಾಗಿದೆ. ಬೆದರಿಕೆಗಳಿಗೆ ಸಂಘಟಿತ ಪ್ರತಿಕ್ರಿಯೆಗಳು, ಸುಧಾರಿತ ಫ್ಲೀಟ್ ಸಮನ್ವಯ ಮತ್ತು ವಿಶಾಲವಾದ ಸಾಗರ ದೂರಗಳಲ್ಲಿ ಸುರಕ್ಷಿತ ಮಾಹಿತಿಯ ಹರಿವನ್ನು ಅನುಮತಿಸುತ್ತದೆ.


ಮುಂಬರುವ ಮಿಷನ್‌ಗಳು-
ಇಸ್ರೋ ಅಧ್ಯಕ್ಷ ನಾರಾಯಣನ್ ಅವರು ಈ ಆರ್ಥಿಕ ವರ್ಷದಲ್ಲಿ ಇನ್ನೂ ಏಳು ಉಪಗ್ರಹಗಳನ್ನು ಉಡಾವಣೆ ಮಾಡಲು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.


ಮುಖ್ಯ ಉಡಾವಣೆಗಳು:
LVM3-M6 ಮಿಷನ್ ಮೂಲಕ ಗ್ರಾಹಕ ಉಪಗ್ರಹದ ಉಡಾವಣೆ. PSLV-C62 ಮತ್ತು SSLV-L1 ಮೂಲಕ ಗ್ರಾಹಕ ಉಪಗ್ರಹಗಳ ಉಡಾವಣೆ, 34 ಹೊಸ ತಂತ್ರಜ್ಞಾನಗಳ PSLV ತಂತ್ರಜ್ಞಾನ ಪ್ರದರ್ಶನ ಮತ್ತು ಗಗನಯಾನದ ಮೊದಲ ಮಾನವರಹಿತ ಮಿಷನ್ ಸೇರಿವೆ ಎಂದು ಅಧ್ಯಕ್ಷರು ತಿಳಿಸಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ