Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಕಲಾವಿದರ ಕಾಲ್ನಡಿಗೆ ಜಾಥಾ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕು ಕಲಾವಿದರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಕಾಲ್ನಡಿಗೆ ಜಾತಾವನ್ನು ಹಮ್ಮಿಕೊಳ್ಳಲಾಗಿತ್ತು.


ನಗರದ ವಿನಾಯಕ ನಗರದ ಸಂಘದ ಕಚೇರಿ ಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೂ ಸರಿಸುಮಾರು ಐದುನೂರು ಜನ ಕಲಾವಿದರ ತಂಡ ಸುಮಾರು ಹತ್ತು ಕಿ.ಮೀ. ಕಾಲ್ನಡಿಗೆ ಯಲ್ಲಿ ತೆರಳಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಕಲಾವಿದರಿಗೆ ಸಹಾಯ- ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.

ಕಲಾವಿದರ ಹನ್ನೆರಡು ಬೇಡಿಕೆಗಳು ಹೀಗಿವೆ: :1.ಕಲಾವಿದರ ಮಾಸಾಶನಕ್ಕೆ ಅರ್ಜಿ ಹಾಕಲು ವಯೋಮಿತಿ 50ವರ್ಷ ನಿಗಧಿಪಡಿಸಬೇಕು. 2.ಕಲಾವಿದರು ‌ಅರ್ಜಿಯನ್ನು ಹಾಕಿದ ಅದೇ ವರ್ಷದಲ್ಲಿ ಕಡತ ವಿಲೇವಾರಿ ಮಾಡ ಬೇಕು.3. ಕಲಾವಿದರ ಮಾಸಾಶನ ಐದು ಸಾವಿರ ರೂಗಳು ನಿಗಧಿ ಪಡಿಸಬೇಕು.

4. ಕಲಾವಿದರ ವಿಧವಾ ವೇತನ ಎರಡೂವರೆ ಸಾವಿರ ರೂ.ನಿಗಧಿಪಡಿಸ ಬೇಕು 5.ಕಲಾವಿದರ ಮಾಸಾಶನವನ್ನು ಪ್ರತಿ ತಿಂಗಳ ಹತ್ತನೇ ತಾರೀಖಿನ ಒಳಗಾಗಿ ಖಾತೆಗೆ ಜಮಾ ಮಾಡ ಬೇಕು.6.ಕಲಾವಿದರ ಆರೋಗ್ಯ ವಿಮೆ ಜಾರಿ ಗೊಳಿಸಬೇಕು.

7 ಕಲಾವಿದರ ಮಾಸಾಶನಕ್ಕೆ ಅರ್ಜಿ ಹಾಕಲು ತಹಶೀಲ್ದಾರರ ದೃಢೀಕರಣ ಪತ್ರವನ್ನು ರದ್ದುಗೊಳಿಸ ಬೇಕು. 8.ಕಲಾವಿದರ ಮಾಸಾಶನ ಬಿಡುಗಡೆಯಾದ ನಂತರ ತಹಶೀಲ್ದಾರ ರಿಂದ ದೃಢೀಕರಣದ ನಂತರವೇ ಇತರೆ ಮಾಸಾಶನಗಳನ್ನು ರದ್ದು ಗೊಳಿಸುವುದು.

9.ಕಲಾವಿದರಿಗೆ ಉಚಿತ ಬಸ್‌ಪಾಸ್‌ ನೀಡುವಂತೆ ಮತ್ತು10.ಕಲಾ ಸಂಘ, ಸಂಸ್ಥೆಗಳಿಗೆ ಶೀಘ್ರವೇ ಧನ ಸಹಾಯ ಬಿಡುಗಡೆ ಮಾಡುವುದು.11.ಎಲ್ಲಾ ಕಲಾ ವಿದರಿಗೆ ಗುರುತಿನ ಚೀಟಿಯನ್ನು ನೀಡುವುದು. 12.ಕಲಾವಿದರ ಅಂತ್ಯ ಕ್ರಿಯೆಗೆ ಹತ್ತುಸಾವಿರ ರೂಗಳು ಸಹಾಯಧನ ನೀಡ ಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕಾಲ್ನಡಿಗೆ ಪ್ರತಿಭಟನಾ ಜಾತಾದಲ್ಲಿ ಸಂಘದ ಪದಾಧಿಕಾರಿಗಳು ಸೇರಿದಂತೆ ತಾಲ್ಲೂಕು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಲಾವಿದರು ನೂರಾರು ಸಂಖ್ಯೆಯಲ್ಲಿ ಭಾಗವಹಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ