Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪತ್ರಕರ್ತರಿಗೂ ಸಾಮಾಜಿಕ ಜವಾಬ್ದಾರಿ ಇದೆ: ಬೊಮ್ಮಾಯಿ

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕಾರಣಿ ಹಾಗೂ ಅಧಿಕಾರದಲ್ಲಿರುವವರಿಗೆ ಸಾರ್ವಜನಿಕವಾಗಿರುವ ಜವಾಬ್ದಾರಿ  ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಪತ್ರಕರ್ತರಿಗೂ ಇದೆ. ನಾವು ತೆಗೆದುಕೊಳ್ಳುವ ತೀರ್ಮಾನ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ತಾವು ಬರೆಯುವ ವರದಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಬುದ್ದಿವಂತಿಕೆ ಸಮಾಜದ ಒಳಿತಿಗೆ ಬಳಕೆ ಆಗಬೇಕು. ಸಮಾಜದಲ್ಲಿನ ದೃಷ್ಕೃತ್ಯ ಮುಚ್ಚುವುದಕ್ಕೆ ಬಳಕೆ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು. 

Advertisement

ಪತ್ರಕರ್ತರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸುವ ಸದುದ್ದೇಶಿತ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ. ಅದಕ್ಕಾಗಿ ಕೆಯುಡಬ್ಲ್ಯೂಜೆ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ. ನಾನು ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.

ತಾವು ಸಿಎಂ ಆಗಿದ್ದ ಸಂದರ್ಭದಲ್ಲಿ ಜಾಹಿರಾತುಗಳು ಸೇರಿದಂತೆ ಹಲವು ರೀತಿಯಲ್ಲಿ ಸಹಕಾರ ನೀಡಿದ್ದನ್ನು ಸ್ಮರಿಸಿಕೊಂಡರು.

ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದಾಗ ಕರೆಯುವುದು ಬಹಳ ಸಹಜ.ಆದರೆ ಅಧಿಕಾರದಲ್ಲಿ ಇಲ್ಲದಿರುವಾಗ ನನ್ನನ್ನು ನೆನಪು ಮಾಡಿಕೊಂಡು ಕರೆದಿರುವುದು ನಿಮ್ಮದೊಡ್ಡ ಗುಣ. ಇದು ನಿಮ್ಮ ಕೃತಜ್ಞತಾ ಗುಣ. ಬೈಬಲ್‌ನಲ್ಲಿ ಹೇಳುತ್ತಾರೆ ಕೃತಜ್ಞತೆ ಇಲ್ಲದವರು ಮನುಷ್ಯರು ಅಲ್ಲವೇ ಅಲ್ಲ ಎಂದರು.

ಜಾಗತೀಕರಣ, ಖಾಸಗೀಕರಣದ ನಡುವೆ ನಾವು ಅಂತಕರಣವನ್ನು ಮರೆಯುತ್ತಿದ್ದೇವೆ. ಅಂತಕರಣ ಇಲ್ಲದಿರುವ ಮನುಷ್ಯರ ಸಂಬಂಧವೇ ಇರುವುದಿಲ್ಲ. ಅಂತದರಲಿ ತಾವು ಅಂತಕರಣವನ್ನು ಪುನರ್ ಸ್ಥಾಪನೆ ಮಾಡಿದ್ದೀರಿ ಎಂದು ಹೇಳಿದರು.

ಪ್ರಶ್ನಿಸುವ ಅಧಿಕಾರ:
ಯಾವುದಾದರೂ ಒಂದು ಶಕ್ತಿ ಬೆಳೆಯಬೇಕೆಂದರೆ ಅದನ್ನು ಪ್ರಶ್ನೆ ಮಾಡಲೇಬೇಕು. ನಂಬಿಕೆಗೆ ಯಾವುದೇ ಆಧಾರ ಇಲ್ಲ. ಆದರೆ, ವಿಜ್ಞಾನಕ್ಕೆ ಆಧಾರ ಬೇಕು. ವಿಜ್ಞಾನಕ್ಕೆ ತರ್ಕಬದ್ಧ ಚಿಂತನೆ ಬೇಕಾದರೆ ಹೊಸ ಚಿಂತನೆ ಹುಟ್ಟು ಹಾಕುತ್ತದೆ. ಪ್ರಜಾಪಭುತ್ತದಲ್ಲಿ ಪಶ್ನೆ ಕೇಳುವ ಅಧಿಕಾರ ಕೊಟ್ಟಿರುವುದು ಪತ್ರಕರ್ತರಿಗೆ ನೀವು ಎಷ್ಟು ಅರ್ಥಗರ್ಭವಾದ ಪ್ರಶ್ನೆಗಳನ್ನು ಕೇಳುತ್ತಿರೋ ಅಷ್ಟು ಒಳ್ಳೆಯ ವಿಚಾರಗಳು ಸಮಾಜಕಷ್ಟೇ ಅಲ್ಲದೇ ರಾಜಕಾರಣಕ್ಕೂ ಬರುತ್ತದೆ. ನೀವು ಕೇಳುವ ಪಶ್ನೆ ಸರಳವಾಗಿದ್ದರೆ ಸರಿಯಾದ ಉತ್ತರ ಬರುವುದಿಲ್ಲ. ಪಶ್ನೆ ಕೇಳುವ ಹಕ್ಕು ಪತ್ರಕರ್ತರಿಗಿದೆ ಎಂದರು.

ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಒಳ್ಳೆಯ ಸಂಬಂಧ ಇದ್ದರೆ ಕಳ್ಳರು ಪೊಲೀಸರ ನಡುವಿನ ಸಂಬಂಧ ಇದ್ದಂಗೆ ಆಗಿದೆ. ಎಲ್ಲಿವರೆಗೂ ಕಠಿಣ ಪಶ್ನೆ ಕೇಳುವುದಿಲ್ಲವೋ ಅಲ್ಲಿಯವರೆಗೂ ರಾಜಕಾರಣಿಗಳಿಂದ ಒಳ್ಳೆಯ ಆಡಳಿತ ನಿರೀಕ್ಷೆ ಮಾಡಬೇಡಿ ಎಂದು ಹೇಳಿದರು.

ಆಡಳಿತಗಾರರಿಗೆ ಒಳ್ಳೆಯ ಪಶ್ನೆ ಕೇಳಿದರೆ ಆಡಳಿತಗಾರರಿಗೂ ಉತ್ತಮ ಆಡಳಿತ ನಡೆಸಲು ಅನುಕೂಲವಾಗುತ್ತದೆ. ಎಲ್ಲರ ಮನೆಯಲ್ಲಿಯೂ ಇಡ್ಲಿ ದೋಸೆ ಇದ್ದೇ ಇರುತ್ತದೆ. ಅದರ ಬಗ್ಗೆ ಎಷ್ಟು ದಿನ ಬರೆಯುತ್ತೀರಿ ಎಂದು ಪಶ್ನಿಸಿದರು.

ಗಂಡ ಹೆಂಡತಿ ಸಂಬಂಧ:
ಈಗ ಡಿಜಿಟಲ್ ಪತ್ತಿಕೋದ್ಯಮ ಬಂದಿದೆ. ಅದರಲ್ಲಿ ಸತ್ಯ ಎಷ್ಟು ಸುಳ್ಳು ಎಷ್ಟು ಅನ್ನುವುದು ಗೊತ್ತಿಲ್ಲ. ರಾಜಕಾರಣಿಗಳಿಗೆ ಪತಕರ್ತರಿಗೆ ಅವಿನಾಭಾವ ಸಂಬಂಧ. ಗಂಡ ಹೆಂಡತಿ ಸಂಬಂಧ ಇದ್ದಹಾಗೆ. ಪತ್ರಿಕೆ ಇಲ್ಲದಿದ್ದರೆ ರಾಜಕಾರಣಿಗಳ ಪರಿಸ್ಥಿತಿ ಏನಾಗುತ್ತಿತ್ತು. ಅವರು ಮಾಡಿರುವ ಕೆಲಸ, ಅವರ ಸರ್ಕಾರಕ್ಕೆ ಬೇಕಾಗಿರುವ ಪ್ರಚಾರ ಸಿಗದಿದ್ದರೆ ರಾಜಕಾರಣಿಗೆ ಯಾವುದೇ ಪ್ರಯೋಜನ ಇಲ್ಲ. ಪತ್ರಿಕೆಗಳಿಗೂ ರಾಜಕಾರಣಿಯ ಸುದ್ದಿ ಬರೆಯದಿದ್ದರೆ ಅವರ ಪತ್ರಿಕೆಯನ್ನೂ ಓದುವುದಿಲ್ಲ. ಇದೊಂದು ರೀತಿ ಗಂಡ ಹೆಂಡತಿ ಸಂಬಂಧ ಇದ್ದಹಾಗೆ ಎಂದರು.

ರಾಜಕಾರಣಿಗೆ ನಿವೃತ್ತಿ ಇಲ್ಲ. ರಾಜಕಾರಣಕ್ಕೆ ಬರಲು ಅರ್ಹತೆಯೂ ಇಲ್ಲ. ಹಾಗೇ ಪತ್ರಕರ್ತರಿಗೆ ಎಲ್ಲಿಯವರೆಗೂ ಬರೆಯುವ ಶಕ್ತಿ ಇರುತ್ತದೆಯೋ ಅವರು ಪತ್ರಕರ್ತರೇ ಆಗಿರುತ್ತಾರೆ. ಸೇವಕರೆ ಜನಪರ ಇರುವ ರಾಜಕಾರಣಿ. ಪತ್ರಕರ್ತರೂ ಅಷ್ಟೇ ಎಲ್ಲಿಯವರೆಗೂ ಬರೆಯುವ ಇಚ್ಚಾಶಕ್ತಿ ಇದೆಯೋ ಅಲ್ಲಿವರೆಗೂ ನಿಮ್ಮ ವೃತ್ತಿ ಮುಂದುವರೆಸಬಹುದು ಎಂದರು.

ತಾವು ಬರೆಯುವ ವರದಿ :
ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಒಂದು ರೀತಿಯಲ್ಲಿ ನೀವೂ ಕೂಡ ರಾಜಕಾರಣಿಗಳು, ನಾವು ಪತ್ರಕರ್ತರು. ನಿಮಗೆ ಏನು ಉತ್ತರ ಬೇಕೊ ಅದನ್ನು ಪಶ್ನೆ ಕೇಳುತ್ತೀರಿ. ನಾವೂ ಬುದ್ದಿವಂತರಿದ್ದೇವೆ. ಪತ್ರಿಕೆಯಲ್ಲಿ ಏನು ಬರಬೇಕೊ ಅದನ್ನು ಹೇಳುತ್ತೇವೆ. ಈ ಬುದ್ಧಿವಂತಿಕೆ ಸಮಾಜದ ಒಳಿತಿಗೆ ಬಳಕೆ ಆಗಬೇಕು. ಸಮಾಜದ ದೃಷ್ಕೃತ ಮುಚ್ಚುವುದಕ್ಕೆ ಬಳಕೆ ಆಗಬಾರದು ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಪ್ರತಿ ವರ್ಷ ಮಕ್ಕಳ ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಸುಧಾಕರ್, ಸಂಸದ ಡಾ. ಕೆ. ಸುಧಾಕರ, ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಬೆಂಗಳೂರು ಉತ್ತರ ವಿವಿ ಕುಲಪತಿ ಡಾ. ಬಿ.ಕೆ. ರವಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು, ಕೆಯುಡಬ್ಲ್ಯೂಜೆ ಪದಾಧಿಕಾರಿಗಳು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾಧ್ಯಕ್ಷ ರವಿಕುಮಾರ್ ಹಿತಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು