Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಸಾಧನೆ ಚಿತ್ರಪಟಕ್ಕೆ ಕ್ಷೀರಾಭಿಷೇಕ: ರೈತ ಸಂಘ!

ಚಂದ್ರವಳ್ಳಿ ನ್ಯೂಸ್, ಮೈಸೂರು (ಟಿ. ನರಸೀಪುರ): 
ಕಳೆದ ಆರು ವರ್ಷಗಳಲ್ಲಿ 22 ಸಾವಿರಕ್ಕೂ ಹೆಚ್ಚು ಜಟಿಲ ಪ್ರಕರಣಗಳನ್ನು ಇತ್ಯರ್ಥಪಡಿಸಿ ಹೊಸ ಇತಿಹಾಸ ನಿರ್ಮಿಸಿರುವ ಕರ್ನಾಟಕ ಹೈಕೋರ್ಟ್‌ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಅಪೂರ್ವ ಸಾಧನೆಯನ್ನು ಗೌರವಿಸಿ, ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ಶನಿವಾರ ಅವರ ಪೋಸ್ಟರ್‌ಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಲಾಯಿತು.
ರೈತ ನಾಯಕರು ನ್ಯಾ. ನಾಗಪ್ರಸನ್ನ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಹಾಲು ಮತ್ತು ಜೇನಿನಿಂದ ಅಭಿಷೇಕ ಮಾಡಿದ್ದಲ್ಲದೆ, ದೃಷ್ಟಿ ತೆಗೆದು ಅವರ ಪರವಾಗಿ ಜಯಘೋಷಗಳನ್ನು ಕೂಗಿ ಅಭಿನಂದಿಸಿದರು.
ಬಡವರ ಪಾಲಿನ ಆಶಾಕಿರಣ – ಕಳ್ಳೀಪುರ ಮಹದೇವಸ್ವಾಮಿ:

ಕಾರ್ಯಕ್ರಮದಲ್ಲಿ ಮಾತನಾಡಿದ ಹಸಿರು ಸೇನೆ ಹಾಗೂ ರಾಜ್ಯ ರೈತ ಸಂಘದ ಮೈಸೂರು ಗೌರವಾಧ್ಯಕ್ಷ ಕಳ್ಳೀಪುರ ಮಹದೇವಸ್ವಾಮಿ, "ನ್ಯಾ. ನಾಗಪ್ರಸನ್ನ ಅವರ ತೀರ್ಪುಗಳು ಯಾವಾಗಲೂ ಬಡವರ ಪರ ಹಾಗೂ ಭ್ರಷ್ಟರ ವಿರುದ್ಧವಾಗಿರುತ್ತವೆ. ಸಾಮಾನ್ಯ ಜನರಿಗೆ ನ್ಯಾಯ ಸಿಗುವುದು ಕಷ್ಟವಾಗಿರುವ ಈ ದಿನಗಳಲ್ಲಿ ಅವರು ಸಾರ್ವಜನಿಕರ ಪಾಲಿನ ನಿಜವಾದ ಆಶಾಕಿರಣವಾಗಿದ್ದಾರೆ. ರಾಜಕಾರಣಿಗಳು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ನಡೆಯುವ ಲೂಟಿಗೆ ತಮ್ಮ ತೀರ್ಪುಗಳ ಮೂಲಕ ಬ್ರೇಕ್ ಹಾಕಿದ್ದಾರೆ" ಎಂದು ಶ್ಲಾಘಿಸಿದರು. ಅಲ್ಲದೆ, ನಾಗಪ್ರಸನ್ನ ಅವರು ಭವಿಷ್ಯದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ದೇಶದ ನ್ಯಾಯ ವ್ಯವಸ್ಥೆಯನ್ನು ಎತ್ತಿಹಿಡಿಯಲಿ ಎಂದು ಹಾರೈಸಿದರು.
ಒಂದೇ ದಿನ 550 ಪ್ರಕರಣಗಳ ವಿಚಾರಣೆ – ನೂತನ ದಾಖಲೆ:

Advertisement

ಹೈಕೋರ್ಟ್‌ನಲ್ಲಿ ಕ್ರಿಮಿನಲ್‌ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾ. ಎಂ.ನಾಗಪ್ರಸನ್ನ ಅವರು ಇತ್ತೀಚೆಗೆ (ಸೆ. 2 ರಂದು) ಒಂದೇ ದಿನ 550 ಕೇಸುಗಳ ವಿಚಾರಣೆ ನಡೆಸುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನೂತನ ಇತಿಹಾಸ ಬರೆದಿದ್ದಾರೆ. ಅಂದು ಬೆಳಿಗ್ಗೆಯಿಂದ ರಾತ್ರಿ 8 ಗಂಟೆಯವರೆಗೆ ನಿರಂತರ ಕಲಾಪ ನಡೆಸಿದ್ದ ಅವರು, ಮಧ್ಯಾಹ್ನದ ನಂತರವಷ್ಟೇ 270ಕ್ಕೂ ಅಧಿಕ ಪ್ರಕರಣಗಳ ಮೆಮೋ ವಿಚಾರಣೆ ನಡೆಸಿ, 3 ಮುಖ್ಯ ಪ್ರಕರಣಗಳ ತೀರ್ಪು ಪ್ರಕಟಿಸಿದ್ದರು. ಜೊತೆಗೆ, ಪಟ್ಟಿಯಲ್ಲಿದ್ದ ಉಳಿದ 300ಕ್ಕೂ ಹೆಚ್ಚು ಪ್ರಕರಣಗಳನ್ನು ವಿಚಾರಣೆ ನಡೆಸಿ, ಹಲವು ಪ್ರಕರಣಗಳಲ್ಲಿ ಮಧ್ಯಂತರ ಆದೇಶ ಹಾಗೂ ನೋಟಿಸ್ ಜಾರಿಗೊಳಿಸಿದ್ದರು.

ದಿನವೊಂದರಲ್ಲಿ ಸತತ 10 ಗಂಟೆಗಳ ಕಾಲ ಸುದೀರ್ಘ ಕಲಾಪ ನಡೆಸಿ ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಕರಣಗಳನ್ನು ನಿರ್ವಹಿಸಿದ ಅವರ ಕಾರ್ಯವೈಖರಿಯನ್ನು ಹಿರಿಯ-ಕಿರಿಯ ವಕೀಲ ವೃಂದ ಹಾಗೂ ದೇಶದ ನ್ಯಾಯಾಂಗ ಕ್ಷೇತ್ರ ಮುಕ್ತಕಂಠದಿಂದ ಶ್ಲಾಘಿಸಿದೆ.

2019 ರಲ್ಲಿ ವಕೀಲ ವೃಂದದಿಂದ ನೇರವಾಗಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಎಂ. ನಾಗಪ್ರಸನ್ನ ಅವರು, ಅಂದಿನಿಂದಲೂ ಅತ್ಯಂತ ವೇಗವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ನೂತನ ದಾಖಲೆಗಳನ್ನು ಬರೆಯುತ್ತಾ ಸಾಗಿದ್ದಾರೆ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು