Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಕಲ್ಲಿನಕೋಟೆ ಪ್ರತಿಭೆ ರಘುರಾಮ್‌ ಮಾಯಾವಿ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಲ್ಲಿನ ಕೋಟೆ ಚಿತ್ರದುರ್ಗದ ಯುವ ಪ್ರತಿಭೆ ರಘು ರಾಮ್‌ನಾಯಕರಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ
ʼಮಾಯಾವಿʼ ಗೆ ಶುಕ್ರವಾರ ಮುಹೂರ್ತ ನಡೆಯಿತು. ಚಿತ್ರದುರ್ಗದ ಬೆಟ್ಟದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಚಿತ್ರ ತಂಡವು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಿತ್ರಕ್ಕೆ ಮುಹೂರ್ತ ಮುಗಿಸಿಕೊಂಡು, ಚಿತ್ರೀಕರಣಕ್ಕೆ ಅಡಿ ಇಟ್ಟಿತು. ಕುಂಚಿಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಅವರು ಕ್ಲಾಪ್‌ಮಾಡುವ ಮೂಲಕ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಭೋವಿ ಮಹಾ ಸಂಸ್ಥಾನದ ಆಡಳಿತಾಧಿಕಾರಿ ಗೋವಿಂದಪ್ಪ ಸೇರಿದಂತೆ ಹಲವರು ಇದ್ದರು.

 ಇದೇ ವೇಳೆ ಚಿತ್ರ ತಂಡಕ್ಕೆ ಶುಭಾಶಯ ಕೋರಿದ ಶ್ರೀಗಳು, ಹೊಸ ಪ್ರಯತ್ನ, ಹೊಸ ಕಲಾವಿದರು, ಹೊಸ ಚಿಂತನೆಗಳೊಂದಿಗೆ ಹೊಸತನ್ನು ಮಾಡುವ ಹಂಬಲದೊಂದಿಗೆ ಈ ತಂಡ ತನ್ನ ಅನುಭವಗಳನ್ನು ಸಿನಿಮಾ ಮೂಲಕ  ಹೇಳುವುದಕ್ಕಾಗಿ ಬಂದಿದೆ. ವಿಶೇಷವಾಗಿ ಮಠದ ಭಕ್ತರು, ಜಿಲ್ಲೆಯವರೇ ಆದ ಯುವ ಪ್ರತಿಭೆ ರಘುರಾಮ್‌ಅವರು ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಡುತ್ತಿರುವುದು ತುಂಬಾ ಸಂತಸ ತಂದಿದೆ. ಒಂದೊಳ್ಳೆಯ ಪ್ರಯತ್ನದೊಂದಿಗೆ ತಮ್ಮ ಅನುಭವಗಳನ್ನು ಹೇಳಿಕೊಳ್ಳುವ ಹಂಬಲದಲ್ಲಿರುವ ಈ ತಂಡಕ್ಕೆ ಜನರ ಸಹಕಾರವೂ ಬೇಕಿದೆ ಎಂದು ಹೇಳಿದರು. 

ಸಿನಿಮಾ ಮಾತ್ರವಲ್ಲ ಧಾರ್ಮಿಕ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲೂ ಹೊಸಬರು ಬರಬೇಕು, ಹೊಸ ಆಲೋಚನೆಗಳು ಹುಟ್ಟಿಕೊಳ್ಳಬೇಕು. ಯಾವುದು ಕೂಡ ನಿಂತ ನೀರಾಗಬಾರದು.

ಎಲ್ಲದಕ್ಕೂ ಚಲನಶೀಲತೆ ಬರಬೇಕಾದರೆ ಹೊಸ ಪ್ರಯತ್ನಗಳು, ಹೊಸ ಆಲೋಚನೆಗಳು, ಹೊಸ ಅನುಭಗಳು ಮೇಳೈಸಿಕೊಳ್ಳಬೇಕು, ಆಗ ಮಾತ್ರ ಎಲ್ಲಾ ರಂಗಕ್ಕೂ ಒಂದು ಚಲನಶೀಲತೆ ಬರುತ್ತದೆ. ಆ ನಿಟ್ಟಿನಲ್ಲಿ ಇವತ್ತು ಸಿನಿಮಾ ರಂಗ ಯುವ ಪ್ರತಿಭೆಗಳ ಮೂಲಕ ಪ್ರಜ್ವಲಿಸುತ್ತಿದೆ. ಆ ಸಾಲಿನಲ್ಲಿ ನಮ್ಮ ಜಿಲ್ಲೆಯವರೇ ಆದ ರಘುರಾಮ್‌ಅವರಂತಹ ಯುವ ಪ್ರತಿಭೆ ಪ್ರಜ್ವಲಿಸಬೇಕು ಎಂದರು.

ಹೊಸಬರಿಗೆ ವೇದಿಕೆಗಳು ಅಗತ್ಯ. ಇವತ್ತು ಚಿತ್ರದುರ್ಗದವರೇ ಆದ ಗಿಲ್ಲಿ ಎನ್ನುವ ನಟ ಇವತ್ತು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ದೊಡ್ಡ ದೊಡ್ಡ ನಟರು ಆತನ ಕಲೆಯನ್ನು ಮೆಚ್ಚಿಕೊಂಡು ಮಾತನಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣವೇ ಸೂಕ್ತ ವೇದಿಕೆ ಸಿಕ್ಕಿದ್ದು. ಅಂತಹ ಸಾಕಷ್ಟು ಪ್ರತಿಭೆಗಳು ಎಲೆಮರೆಯ ಕಾಯಿಗಳಂತೆ ಗ್ರಾಮೀಣ ಭಾಗದಲ್ಲಿವೆ. ಅವೆಲ್ಲವಕ್ಕೂ ವೇದಿಕೆ ಸಿಗಬೇಕು. ಸಿನಿಮಾವೂ ಒಂದು ವೇದಿಕೆ. ಅಲ್ಲಿ ಒಳ್ಳೆಯ ನಟನಾಗಿ ಗುರುತಿಸಿಕೊಂಡರೆ ಜನಪ್ರಿಯತೆ ಜತೆಗೆ ದುಡಿಮೆಯೂ ಆಗುತ್ತದೆ.

ಹಾಗಂತ ಅಲ್ಲಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಸಿನಿಮಾ ಮಾಡಿಯೂ ಹಣ ಮಾಡುತ್ತೇನೆನ್ನುವುದು ಕೂಡ ಅಷ್ಟು ಸರಳ ಇಲ್ಲ, ಒಟಿಟಿ, ಪೈರಸಿ ಬಂದ ಮೇಲೆ ಸಿನಿಮಾ ನಿರ್ಮಾಣ ದೊಡ್ಡ ಸವಾಲಾಗಿ ಎರ್ಪಟ್ಟಿದೆ. ಅವೆಲವನ್ನು ಮೀರಿ ಈ ತಂಡ ಸಕ್ಸಸ್‌ಕಾಣಲಿ ಎಂದು ಶ್ರೀಗಳು ಹಾರೈಸಿದರು.

ಮಹೇಶ್ವರಪ್ಪ ಚಕ್ರಸಾಲಿ ಮತ್ತು ಶ್ರೀಮತಿ ರೂಪ ನಿರ್ಮಾಣದ ಈ ಚಿತ್ರಕ್ಕೆ ಶಂಕರ್‌ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅವರು ʼಉಗ್ರಾವತಾರʼ ಎನ್ನುವ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಮಾಯಾವಿ ಮೂಲಕ ಅವರು ಬಡ್ತಿ ಪಡೆದಿದ್ದಾರೆ. ಕಥೆ, ಚಿತ್ರಕಥೆ ಬರೆಯುವ ಮೂಲಕ ನಿರ್ದೇಶನದ  ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಗುರುದತ್ತ ಮುಸೂರಿ ಛಾಯಾಗ್ರಹಣ ಮಾಡುತ್ತಿದ್ದು, ಅಗಸ್ತ್ಯ ಸಂತೋಷ್‌ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಇನ್ನು ರಘು ರಾಮ್‌ನಾಯಕರಾಗಿರುವ ಈ ಚಿತ್ರಕ್ಕೆ ನಿಶ್ಚಿತ ಶೆಟ್ಟಿ ನಾಯಕಿ. ಅವರೊಂದಿಗೆ ಹಿರಿಯ ಕಲಾವಿದ ಎಂ.ಕೆ. ಮಠ, ಸುರೇಶ್‌ಬಾಬು ಸೇರಿದಂತೆ ಅನುಭವಿ ಕಲಾವಿದರ ತಂಡವೇ ಇದೆ.



ಸಸ್ಪೆನ್ಸ್‌, ಥ್ರಿಲ್ಲರ್‌ಅಂಶಗಳ ಜತೆಗೆ ನವೀರಾದ ಪ್ರೇಮ ಕಥಾ ಹಂದರದ ಈ ಚಿತ್ರಕ್ಕೆ ಒಟ್ಟು ೫೦ ದಿನಗಳ ಕಾಲ ಚಿತ್ರದುರ್ಗ, ಹೊಸಪೇಟೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಹೊಸ ಪ್ರಯತ್ನದಲ್ಲಿ ಹೊಸ ಆಲೋಚನೆಗಳ ಮೂಲಕ ಹೊಸದಾದ ಒಂದು ಒಳ್ಳೆಯ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸುವ ಮೂಲಕ ನಮ್ಮನ್ನು ನಾವು ಭಿನ್ನವಾಗಿ ಗುರುತಿಸಿಕೊಳ್ಳುವ ಹಂಬಲದಲ್ಲಿದ್ದೇವೆ. ಪ್ರಯತ್ನ ನಮ್ಮದು, ಫಲ ಆ ದೇವರದು.
ರಘುರಾಮ್, ನಾಯಕ ನಟ.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು