Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉಪನ್ಯಾಸಕರ ಸಂಘದ ಚುನಾವಣೆ ಪ್ರಧಾನ ಕಾರ್ಯದರ್ಶಿಯಾಗಿ ಕೆಂಚವೀರಪ್ಪ ಆಯ್ಕೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 
 ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅಭೂತಪೂರ್ವ ಗೆಲುವು ಸಾಧಿಸಿದ ಯೋಗಗುರು ಕೆಂಚವೀರಪ್ಪ ಅವರನ್ನು ಧವಳಗಿರಿ ನಾಗರಿಕರು ಹಾಗೂ ಪತಂಜಲಿ ಯೋಗ ಪರಿವಾರದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ನಗರದ ಹೊಳಲ್ಕೆರೆ ರಸ್ತೆಯ ಜ್ಞಾನಭಾರತಿ ಶಾಲೆಯ ಯೋಗ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಯೋಗ ಬಂಧುಗಳು ಒಗ್ಗೂಡಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಜೆ.ಎಸ್. ಗುರುಮೂರ್ತಿ ಅವರು, ಕೆಂಚವೀರಪ್ಪನವರ ಸರಳತೆ, ಸ್ನೇಹಪರತೆ ಹಾಗೂ ಸಮಾಜಕ್ಕೆ ಶ್ರಮಿಸುವ ಅರ್ಪಣಾ ಮನೋಭಾವವೇ ಅವರ ಈ ಯಶಸ್ಸಿಗೆ ಕಾರಣ ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಂಚವೀರಪ್ಪನವರು, ನನಗೆ ಸಿಕ್ಕಿರುವ ಈ ಅಧಿಕಾರ, ಜಯ ಹಾಗೂ ಸನ್ಮಾನಗಳಿಗಿಂತಲೂ ಯೋಗ ಬಂಧುಗಳೊಂದಿಗೆ ನಾನು ಹೊಂದಿರುವ ಒಡನಾಟವೇ ಅತ್ಯಂತ ಅಮೂಲ್ಯವಾದುದು ಎಂದು ನುಡಿದರು.

ಈ ಸಂದರ್ಭದಲ್ಲಿ ಶಶಿಕಿರಣ್, ಜಿ.ಎಮ್. ಲವಕುಮಾರ್, ಕಾಂತಣ್ಣ, ರಂಗನಾಯಕ್, ಹೇಮಣ್ಣ, ಯೋಗ ರಘು, ಶ್ರೀಕಾಂತ್, ಜಯಣ್ಣ, ಹರೀಶ್ ಹಾಗೂ ಮಹಿಳಾ ಮುಖಂಡರಾದ ಮಾಲಾ, ವಿಜಯಲಕ್ಷ್ಮೀ, ಲತಾ, ರತ್ನಮ್ಮ, ಸುಧಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST