Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಸ್ಕಾಂ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ ಕಿಸಾನ್ ಸಂಘ

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತೀಯ ಕಿಸಾನ್ ಸಂಘದಿಂದ ಬೆಸ್ಕಾಂ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಬೆಸ್ಕಾಂ ಇಲಾಖೆಯಿಂದ ರೈತರಿಗೆ ಕೊಡುತ್ತಿರುವ ದುರಸ್ತಿಯಾದ ಪರಿವರ್ತಕಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ವಿತರಿಸಿದ ಒಂದು ದಿನದೊಳಗೆ ಸುಟ್ಟು ಹೋಗುತ್ತಿರುವ ವರದಿಗಳು ಹಾಗೂ ಆಯಿಲ್ ಲೀಕೇಜ್  ಆಗಿ ಸುಟ್ಟು ಹೋಗುತ್ತಿರುವ ವರದಿಗಳು ಸಂಘಟನೆ ಮುಖಂಡರಿಗೆ ಹಲವಾರು ರೈತರಿಂದ ಕೇಳಿ ಬಂದಿರುತ್ತವೆ ಆದ್ದರಿಂದ ಭಾರತೀಯ ಕಿಸಾನ್ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರೈತರ ಜೊತೆಗೂಡಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಿಲಾಯಿತು.


ಈ ವಿಚಾರವಾಗಿ ಕರ್ನಾಟಕ ರಾಜ್ಯ ರೈತ ಸಂಘ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಚೇತನ್ ಯಳನಾಡು ಮಾತನಾಡಿ 72 ಗಂಟೆಯ ಯೊಳಗೆ ಸುಟ್ಟು ಹೋದ ಪರಿವರ್ತಕವನ್ನು ಬದಲಾಯಿಸಿಕೊಡುವ ಆದೇಶವಿದ್ದರೂ ಕೂಡ ನೀವು ಅದನ್ನು ಗಾಳಿಗೆ ತೂರಿ ಆಯಿಲ್ ಬಂದಿಲ್ಲ ದುರಸ್ಥಿಯಾದ ಪರಿವರ್ತಕ ಗಳು ಸ್ಟಾಕ್ ಇಲ್ಲವೆಂದು ಸಬೂಬು ಹೇಳಿಕೊಂಡು ರೈತರನ್ನು ಇಲಾಖೆಯ ಮುಂದೆ ಅಲೆದಾಡುಸುತ್ತಿರುವ ವಿಚಾರ ಕಂಡು  ಬಂದಿರುತ್ತದೆ.

ಹಾಗೂ ದೂರದ ಮೊಳಕಾಲ್ಮೂರು ತಳುಕು ಚಳ್ಳಕೆರೆ ತಾಲೂಕುಗಳಿಂದ ರೈತರು ಬಂದು ಅಧಿಕಾರಿಗಳ ಹತ್ತಿರ  ಅಲೆದು ಸಾಕಾಗಿ ಕೊನೆಗೆ ಊಟವಿಲ್ಲದೆ ಮರದಡಿ ಮಲಗಿಕೊಂಡಿರುತ್ತಾರೆ. ದುರಸ್ಥಿಯಾದ  ಪರಿವರ್ತಕಗಳು ಎಲ್ ಟಿ ಲೈನ್ ಚಾರ್ಜ್ ಆಗದೆ ಸುಟ್ಟು ಹೋಗಿರುವ ವರದಿಗಳಿವೆ. ಹಾಗೂ ಈ ವಿಚಾರವನ್ನು ನೀವು ಮನ ಗಂಡು ಈ ರೀತಿ ಕಳಪೆ ಪರಿವರ್ತಕಗಳನ್ನು ದುರಸ್ಥಿ ಮಾಡಿ ಕೊಡುವ ಕಂಪನಿ ಮಾಲೀಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವ ಬದಲು ರೈತರು ಅಕ್ರಮವಾಗಿ ಅಳವಡಿಸಿಕೊಂಡಿರುತ್ತಾರೆ ಎಂದು ಸಬೂಬು ಹೇಳಿ ರೈತರಿಗೆ ಪರಿವರ್ತಕಗಳನ್ನು ಕೊಡುವ ವಿಚಾರವಾಗಿ ವಿಳಂಬ ನೀತಿ ತೋರಿಸುತ್ತಿರುವುದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಹಾಗಯೇ ಇಷ್ಟು ದಿನ ಸುಟ್ಟು ಹೋಗದೆ ಇರುವ ಪರಿವರ್ತಕಗಳು ಈಗ ಸುಡುತ್ತಿರುವುದಕ್ಕೆ ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡುಬರುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ವಿಚಾರವಾಗಿ ಇಲಾಖೆಯವರು ಈ ರೀತಿ ಕಳಪೆ ಪರಿವರ್ತಕ ದುರಸ್ಥಿ ಮಾಡುವವರ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಿ ಸಮಸ್ಯೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ನಿಮ್ಮ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಮಾಡಬೇಕಾಕಾಗುತ್ತದೆ ಆಗ್ರಹಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾತ್ರಿಕೇನಹಳ್ಳಿ ಮಾತನಾಡಿ ಆಕ್ರಮ ಸಕ್ರಮದ ಬಗ್ಗೆ ಸರ್ಕಾರ ಗಡುವು ನೀಡಿರುವುದರ ವಿರುದ್ಧ ನೀವು ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಂಡು ರೈತರಿಗೆ ಸಮಸ್ಯೆಯಾಗದ ರೀತಿ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹ ಮಾಡಿದರು. ಅಧಿಕಾರಿಗಳ ಮುಖಾಂತರ ನೀವು ಮುಟ್ಟುಗೋಲು ಹಾಕಲು ಮುಂದಾದರೆ ಬಹು ದೊಡ್ಡ ಸಮಸ್ಯೆಯನ್ನು ಸರ್ಕಾರ ಹಾಗೂ ಇಲಾಖೆ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮಂಜುನಾಥ್ ಎಚ್ಚರಿಕೆ ನೀಡಿದರು.


ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಗಡಾರಿ ಕೃಷ್ಣಪ್ಪ, ಕಾರ್ಯದರ್ಶಿ ಚಂದ್ರಗಿರಿ, ಸಹ ಕಾರ್ಯದರ್ಶಿ ಜಯಪ್ರಕಾಶ್ ಕೆ.ಕೆ.ಹಟ್ಟಿ, ಸಿಐಟಿಯು ತಾಲ್ಲೂಕು ಅಧ್ಯಕ್ಷೆ ನಿಂಗಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಣ್ಣ ಪಿಲಾಜನಹಳ್ಳಿ, ವಿಶ್ವನಾಥ್, ರಾಕೇಶ್, ಕಾರ್ತಿಕ್, ಭೈರೇಶ್, ಗಿರೀಶ್, ಮುಂತಾದ ರೈತರು ಇದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ