Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಭಾರತೀಯ ಸಶಸ್ತ್ರ ಪಡೆಗಳ ಉನ್ನತಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಧನ್ಯವಾದ

​ ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಸಾಂಸ್ಕೃತಿಕ ವೈಭವದ ಸಂಕೇತವಾಗಿರುವ
'ನಾಡಹಬ್ಬ' ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಹಬ್ಬದ ಮೆರುಗನ್ನು ಹೆಚ್ಚಿಸಿದ ಭಾರತೀಯ ಸಶಸ್ತ್ರ ಪಡೆಗಳ ಹಿರಿಯ ಹಾಗೂ ಗಣ್ಯ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದ ಪರವಾಗಿ ಹಾಗೂ ರಾಜ್ಯದ ಸಮಸ್ತ ಜನರ ಪರವಾಗಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

​ನಮ್ಮ ನಾಡಿನ ಭವ್ಯ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ನಾಡಹಬ್ಬದ ಉತ್ಸಾಹ ಹಾಗೂ ಗೌರವವನ್ನು ದೇಶದ ರಕ್ಷಣಾ ಪಡೆಗಳ ಉನ್ನತಾಧಿಕಾರಿಗಳೊಂದಿಗೆ ಹಂಚಿಕೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದ್ದಾರೆ.

​ವಿಶೇಷವಾಗಿ ಧನ್ಯವಾದ ಸಲ್ಲಿಸಿದ ರಕ್ಷಣಾ ಅಧಿಕಾರಿಗಳ ಪಟ್ಟಿ:
​ಲೆಫ್ಟಿನೆಂಟ್ ಜನರಲ್ ಉಲ್ಹಾಸ್ ಕಿರ್ಪೇಕರ್
– ಜನರಲ್ ಆಫೀಸರ್ ಕಮಾಂಡಿಂಗ್, ಹೆಡ್‌ಕ್ವಾರ್ಟರ್ಸ್ ದಕ್ಷಿಣ ಭಾರತ್ ಏರಿಯಾ

​ಮೇಜರ್ ಜನರಲ್ ಅಜಯ್ ಮಿಶ್ರಾ – ಚೀಫ್ ಆಫ್ ಸ್ಟಾಫ್, ಹೆಡ್‌ಕ್ವಾರ್ಟರ್ಸ್ ದಕ್ಷಿಣ ಭಾರತ್ ಏರಿಯಾ
​ಮೇಜರ್ ಜನರಲ್ ಭಾರತ್ ಮೆಹ್ತಾನಿ
– ಜನರಲ್ ಆಫೀಸರ್ ಕಮಾಂಡಿಂಗ್, ಹೆಡ್‌ಕ್ವಾರ್ಟರ್ಸ್ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ

​ರಿಯರ್ ಅಡ್ಮಿಪಲ್ ವಿಕ್ರಮ್ ಮೆನನ್– ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್, ಕರ್ನಾಟಕ ನೇವಿ ಏರಿಯಾ
​ರಿಯರ್ ಅಡ್ಮಿಪಲ್ ರವನೀಶ್ ಸೇಥ್
– ಅಡ್ಮಿಪಲ್ ಸೂಪರಿಂಟೆಂಡೆಂಟ್, ನೇವಲ್ ಶಿಪ್ ರಿಪೇರ್ ಯಾರ್ಡ್, ಕಾರವಾರ
​ಏರ್ ವೈಸ್ ಮಾರ್ಷಲ್ ಜಿ. ಅನಂತ್
– ಹಿರಿಯ ಆಡಳಿತಾಧಿಕಾರಿ, ಹೆಡ್‌ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್, ಭಾರತೀಯ ವಾಯುಪಡೆ, ಬೆಂಗಳೂರು.

​"ಮೈಸೂರು ದಸರಾದ ಕಲಾತ್ಮಕ ವೈಭವ, ಕರ್ನಾಟಕದ ಆತಿಥ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಈ ದೇಶಪ್ರೇಮಿ ಅಧಿಕಾರಿಗಳೊಂದಿಗೆ ಆಚರಿಸಿರುವುದು ನಮಗೆ ಸಿಕ್ಕ ಗೌರವವಾಗಿದೆ. ಅವರ ಉಪಸ್ಥಿತಿಯು ಈ ಬಾರಿಯ ನಾಡಹಬ್ಬಕ್ಕೆ ಮತ್ತಷ್ಟು ವಿಶೇಷ ಕಳೆಯನ್ನು ತಂದಿತ್ತಿದೆ" ಎಂದು ಡಿ. ಕೆ. ಶಿವಕುಮಾರ್ ಅವರು ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿರಿಯೂರು-ಧರ್ಮಪುರ ಮಾರ್ಗದಲ್ಲಿ KSRTC ಚಾಲಕನ ಉದ್ಧಟತನ: ಖಾಸಗಿ ಬಸ್‌ಗಳಿಗೆ ಲಾಭ ಮಾಡಿಕೊಡಲು ಸಾರಿಗೆ ಸಂಸ್ಥೆಗೆ ಆರ್ಥಿಕ ಕನ್ನ?ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಿರಿಯ ಮಗಳ ಅದ್ಧೂರಿ ವಿವಾಹ: 14 ವರ್ಷಗಳ ಪ್ರೀತಿಗೆ ಶುಭಂ ಎಂದ ನವಜೋಡಿ!ರೂಢಿಯ ಗೋಡೆಯಾಚೆ ಚಿಂತನೆಯ ಹೊಸ ಕಿಟಕಿ ತೆರೆಯಲಿಮಹರ್ಷಿ ವಾಲ್ಮೀಕಿ — ವ್ಯಕ್ತಿತ್ವದ ಉನ್ನತಿಗೆ ಜ್ಞಾನದ ದಾರಿದೀಪನವೆಂಬರ್ 2ಕ್ಕೆ ರಾಹುಲ್ ಗಾಂಧಿ ಭೇಟಿಯಾಗಲಿರುವ ಸಿದ್ದರಾಮಯ್ಯ: 'ಸ್ಟಿಂಗ್' ಷಡ್ಯಂತ್ರದ ಕುರಿತು ಚರ್ಚೆಎಸ್‌ಸಿ-ಎಸ್‌ಟಿ ಕಾಯ್ದೆ ಅನ್ವಯಕ್ಕೆ 'ಜಾತಿ ಆಧಾರಿತ ಅವಮಾನ'ದ ಸ್ಪಷ್ಟ ಆರೋಪ ಕಡ್ಡಾಯ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪುಪ್ರಧಾನಿ ಮೋದಿಗೆ ಹೇಳಿ ಜ್ಞಾನೇಶ್ ಕುಮಾರ್ ವಜಾ ಮಾಡಿಸಿ, 30 ಸೆಕೆಂಡುಗಳಲ್ಲಿ ಪ್ರತಿಭಟನೆ ವಾಪಸ್: ರಾಹುಲ್ದೆಹಲಿಯ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ಬೆಂಕಿ ಅವಘಡ: ಆರು ಅಗ್ನಿಶಾಮಕ ವಾಹನಗಳಿಂದ ಕಾರ್ಯಚರಣೆಖರ್ಗೆ ಹೇಳಿಕೆ ಕ್ಷಮಾರ್ಹವಲ್ಲ: ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶಕನ್ನಡಿಗರಿಗೆ ಉದ್ಯೋಗ: ಕೌಶಲ ಅಭಿವೃದ್ಧಿಗೆ ಮೋಹನ್ ದಾಸ್ ಪೈ ಆಗ್ರಹ